Connect with us

Dharwad

ಜೈಲಿಗೆ ಹೋಗಿ ಬಂದ್ರೆ ನಿಮ್ಗೆ ಸ್ಟಾರ್ ಕೊಡ್ತೇವೆ- ಪ್ರಮೋದ್ ಮುತಾಲಿಕ್

Published

on

ಧಾರವಾಡ: ನೀವು ಜೈಲಿಗೆ ಹೋಗಿ ಬಂದರೆ ನಾವು ಸ್ಟಾರ್ ಕೊಡುತ್ತೇವೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ತಮ್ಮ ಪ್ರಚೋದನಕಾರಿ ಭಾಷಣದಲ್ಲಿ ತಿಳಿಸಿದ್ದಾರೆ.

ನಗರದ ಕಲಾಭವನ ಮೈದಾನದಲ್ಲಿ ರಾಷ್ಟ್ರೀಯ ಹಿಂದೂ ಪರಿಷದ್ ಸಂಘಟನೆ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಅವರು, ನಾವು ರಾಮ ಜನ್ಮಭೂಮಿಗಾಗಿ 500 ವರ್ಷ ಹೋರಾಟ ಮಾಡಿದ್ದೇವೆ. ರಾಮ ಜನ್ಮಭೂಮಿ ಬದಲು 5 ಎಕರೆ ಜಮೀನು ಕೊಟ್ಟಿದ್ದಕ್ಕೆ ಓವೈಸಿ ಭಿಕ್ಷೆ ಬೇಡ ಎಂದಿದ್ದಾನೆ ಎಂದರು. ಇದೇ ವೇಳೆ ಯುವಕರಿಗೆ ಜೈಲಿಗೆ ಹೋಗಿ ಕೇಸ್ ಹಾಕಿಕೊಳ್ಳಿ. ನಾವು ನಿಮಗೆ ಸ್ಟಾರ್ ಗಳನ್ನ ಕೊಡುತ್ತೇವೆ ಎಂದು ಹೇಳಿದರು.

ತಮಿಳುನಾಡಿನ ದಿವಂಗತ ಮಾಜಿ ಸಿಎಂ ಕರುಣಾನಿಧಿಗೆ ಅವಾಚ್ಯ ಶಬ್ದಗಳಿಂದಲೇ ನಿಂದಿಸಿದರು. ರಾಮ ಸೇತುವೆಗೆ ಸಾಕ್ಷಿ ಕೇಳಿದ್ದ ಕರುಣಾನಿಧಿಗೆ ನಾನು ಸಾವಿರ ಸಾಕ್ಷಿ ಕೊಡುತ್ತೇನೆ. ಆದರೆ ನೀನು ನಿನ್ನ ತಂದೆಗೆನೇ ಹುಟ್ಟಿದ್ದಕ್ಕೆ ಸಾಕ್ಷಿ ಕೊಡು ಎಂದಿದ್ದೆ ಎಂದರು.

ಗುಜರಾತಿ ಸೋಮನಾಥ ದೇವಾಲಯ ಮಸೀದಿ ಆಗಿದೆ, ಹಿಂದೆ ವಲ್ಲಭಭಾಯಿ ಪಟೇಲರು ಗೃಹ ಮಂತ್ರಿ ಇದ್ದಾಗ ಈ ಬಗ್ಗೆ ಮತನಾಡಿದ್ರು. ಆದರೆ ನೆಹರೂ ಅದಕ್ಕೆ ಒಪ್ಪಲಿಲ್ಲ. ಇದೇ ಸಂದರ್ಭದಲ್ಲಿ ನೆಹರೂ ಡಿಎನ್‍ಎ ತಪಾಸಣೆ ಮಾಡಬೇಕಾಗಿದೆ ಎಂದು ಲೇವಡಿ ಮಾಡಿದ ಮುತಾಲಿಕ್, ಮೋದಿ ಸರ್ಕಾರಕ್ಕೆ ಲೋಕಸಭೆಯಲ್ಲಿ ಬಹುಮತ ಇದೆ, ಕಾಶಿ ಮಥುರಾ ದೇವಸ್ಥಾನಕ್ಕಾಗಿ ಬಿಲ್ ಪಾಸ್ ಮಾಡಲಿ ಎಂದು ಹೇಳಿದರು.

ಗೌರಿ ಲಂಕೇಶ್ ಕೇಸಿನಲ್ಲಿ ಯಾರನ್ನೋ ಹಿಡಿದು ಹಿಂದೂ ಸಂಘಟನೆ ಹೆಸರು ಹಾಕುತ್ತಿದ್ದಾರೆ. ಹಿಂದೂ ಯುವತಿಯರನ್ನು ಲವ್ ಮಾಡುವ ಮುಸ್ಲಿಮರೇ, ನೀವು ಒಂದು ಹಾರಿಸಿದ್ರೆ, ನಾವು 10 ಹುಡುಗಿಯರನ್ನು ಹಾರಿಸ್ತೀವಿ ಎಂದು ಮುತಾಲಿಕ್ ಹೇಳಿದರು.

ಬೀದಿ ಕಾಳಗಕ್ಕೆ ಯುವಕರು ತಯಾರಿರಿ ಎಂದ ಅವರು, ಆಯುಧಗಳನ್ನ ತಯಾರಿಡಿ ಹಾಗೂ ಮನೆಯಲ್ಲಿ ಎಲ್ಲರಿಗೆ ಕಾಣುವಂತೆ ತಲ್ವಾರ್ ಇಡಿ ಎಂದು ತಿಳಿಸಿದರು.

Click to comment

Leave a Reply

Your email address will not be published. Required fields are marked *