ಧಾರವಾಡ: 2020ರ ನ್ಯೂ ಇಯರ್ ಸೆಲೆಬ್ರೆಷನ್ ಮಾಡಿದ್ದಕ್ಕೆ ವಿದ್ಯಾರ್ಥಿಗಳಿಗೆ ಶಾಲಾ ಪ್ರಾಂಶುಪಾಲ ಹಲ್ಲೆ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಯೂನಿವರ್ಸಿಟಿ ಪಬ್ಲಿಕ್ ಸ್ಕೂಲಿನ ಮಕ್ಕಳ ಮೇಲೆ ಅದೇ ಶಾಲೆಯ ಪ್ರಾಂಶುಪಾಲ ವೀರಣ್ಣ ಬೋಳಶೆಟ್ಟಿ ಹಲ್ಲೆ ಮಾಡಿದ್ದಾನೆ. ಕಳೆದ ಮೂರು ದಿನಗಳ ಹಿಂದೆ ಎಲ್ಲರೂ ಹೊಸ ವರ್ಷದ ಸ್ವಾಗತ ಮಾಡಿದಂತೆ ಈ ಮಕ್ಕಳು ಕೂಡ ತಮ್ಮ 8 ನೇ ತರಗತಿಯಲ್ಲಿ ಸೆಲೆಬ್ರೆಷನ್ ಮಾಡುತ್ತಿದ್ದರು.
ಈ ಕಾರ್ಯಕ್ರಮದಲ್ಲಿ ಕೆಲ ಶಿಕ್ಷಕರು ಕೂಡ ಬಂದು ಕೆಕ್ ಕಟ್ ಮಾಡಿ ಹೋಗಿದ್ದಾರೆ. ಆದರೆ ನಂತರ ಕ್ಲಾಸಿಗೆ ಬಂದ ಪ್ರಾಂಶುಪಾಲ ನಿಮಗಗೆ ಯಾರು ಇದರ ಅನುಮತಿ ಕೊಟ್ಟವರು ಎಂದು ಐದು ಮಕ್ಕಳಿಗೆ ಹೊಡೆದಿದ್ದಾರೆ. ಇದರಿಂದ ಮಕ್ಕಳು ಕೂಡ ಭಯದಿಂದ ಯಾರ ಮುಂದೆಯೂ ಹೇಳಿರಲಿಲ್ಲ. ಆದರೆ ಇಂದು ಈ ಪ್ರಕರಣ ಬೆಳಕಿಗೆ ಬಂದಿದೆ.
ಮಕ್ಕಳ ಬೆನ್ನಿಗೆ, ಗಲ್ಲಕ್ಕೆ ಹಾಗೂ ಕೈ ಕಾಲುಗಳಿಗೆ ಹಲ್ಲೆ ಮಾಡಿರುವ ಪ್ರಾಂಶುಪಾಲನಿಗೆ ಮಾನವಿಯತೆಯೇ ಇರಲಿಲ್ಲವೇ ಎಂದು ಪ್ರಶ್ನೆ ಎದ್ದಿದೆ. ಈ ಎಲ್ಲ ಮಕ್ಕಳು ಇದೇ ಶಾಲೆಯ ಪಕ್ಕದ ಹಾಸ್ಟೇಲಿನಲ್ಲಿರುವವರಾಗಿದ್ದಾರೆ. ಬೇರೆ ಬೇರೆ ಜಿಲ್ಲೆಯಿಂದ ಇಲ್ಲಿ ಅಭ್ಯಾಸ ಮಾಡಲು ಬಂದವರಾಗಿದ್ದಾರೆ.