ಧಾರವಾಡ: ಜಿಲ್ಲೆಯ ಬಣದೂರ ಗ್ರಾಮದ ಹೊರಗೆ ಲಾಕ್‍ಡೌನ್‍ನಿಂದಾಗಿ ಊರಿಗೆ ಹೋಗಲಾಗದೇ ಬಾಣಂತಿ ಹಾಗೂ ಹಸುಗೂಸು ಹೆಳವರ ಮಧ್ಯೆ ಗೂಡ್ಸ್ ವಾಹನದಲ್ಲೇ ದಿನ ಕಳೆಯುತ್ತಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಮಾಡಿದ ಮಾನವೀಯ ವರದಿಗೆ ಸ್ಪಂದನೆ ಸಿಕ್ಕಿದೆ.
ಲಾಕ್‍ಡೌನ್‍ನಿಂದ ಹೆಳವರ ಮಧ್ಯೆ ಸಿಕ್ಕಿ ಹಾಕಿಕೊಂಡಿರುವ ಸರಸ್ವತಿ ತನ್ನ ತಾಯಿಯೊಂದಿಗೆ ಗೂಡ್ಸ್ ವಾಹನದಲ್ಲಿ ನೆಲೆಸಿದ್ದಾರೆ. ಸಮಾನ್ಯವಾಗಿ ಬಾಣಂತಿಗೆ ಈ ಸಮಯದಲ್ಲಿ ಬೀಗರ ಸಂಬಂಧಿಕರು ಕೊಬ್ಬರಿ, ಸಕ್ಕರೆ, ಬೆಲ್ಲ ಹಾಗೂ ಡ್ರೈ ಫ್ರೂಟ್ಸ್ ನಂತಹ ಪೌಷ್ಟಿಕಾಂಶದ ಆಹಾರಗಳನ್ನು ನೀಡುವ ಸಂಪ್ರದಾಯ ಇದೆ. ಲಾಕ್‍ಡೌನ್ ಕಾರಣ ಯಾವ ಸಂಬಂಧಿಕರಿಗೂ ಬಂದು ಮಗುವಿನ ಮುಖ ನೋಡಲು ಆಗಿರಲಿಲ್ಲ.
Advertisement
Advertisement
ಈ ವಿಷಯ ತಿಳಿದ ಧಾರವಾಡದ ಸಮಾಜ ಸೇವಕ ಸಾಹಿಲ್ ಡಾಂಗೆ ಹಾಗೂ ಆತನ ತಂದೆ ಸಾವಿರಾರು ರೂಪಾಯಿ ಮೌಲ್ಯದ ಡ್ರೈ ಫ್ರೂಟ್ಸ್ ಸಹಿತ ಕೊಬ್ಬರಿ, ಬೆಲ್ಲದ ಬುತ್ತಿಯೊಂದಿಗೆ ಆಗಮಿಸಿ ಬಾಣಂತಿ ಸರಸ್ವತಿಗೆ ಧೈರ್ಯ ತುಂಬಿದರು. ಅಲ್ಲದೇ ಬಾಣಂತಿಗೆ ಸೀರೆ ಕೂಡ ಕೊಟ್ಟು ಗೌರವಿಸಿದ್ದಾರೆ. ಈ ಬಾಣಂತಿ ಜೊತೆಯಲ್ಲಿ ಇರುವ ಅಕ್ಕ ಪಕ್ಕದ ಹೆಳವರ ಕುಟುಂಬಗಳಿಗೆ 30ಕ್ಕೂ ಹೆಚ್ಚು ದಿನಸಿ ಕಿಟ್ ಸಹ ನೀಡಿದರು. ಇದನ್ನೂ ಓದಿ: ಹಸುಗೂಸು ಜೊತೆ ಬಾಣಂತಿ ಬಯಲಲ್ಲೇ ಜೀವನ – ಮಿನಿ ಗೂಡ್ಸ್ ವಾಹನದಲ್ಲಿ ಬದುಕು
Advertisement
Advertisement
ಲಾಕ್‍ಡೌನ್ ವೇಳೆ ಈ ಜನರಿಗೆ ಸ್ಥಳೀಯ ಶಾಸಕರು ಸಹಾಯಕ್ಕೆ ಬರದೇ ಇರುವುದಕ್ಕೆ ಆಕ್ರೋಶ ಕೂಡ ವ್ಯಕ್ತವಾಗಿದ್ದು, ಈ ಜನರಿಗೆ ಸ್ಥಳೀಯ ಜನಪ್ರತಿನಿಧಿಗಳು ಸಹಾಯ ಮಾಡಲಿ ಎಂದು ಸಾರ್ವಜನಿಕರು ಒತ್ತಾಯಿಸಿದರು.