ಧಾರವಾಡ: ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದ ಸಿಸಿಎಫ್ ಅಧಿಕಾರಿಯೊಬ್ಬರ ಮೇಲೆ ಮಹಿಳೆಯೊಬ್ಬಳು ದೂರು ದಾಖಲಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ.
ವಿದ್ಯಾ ಹಿರೇಮಠ ದೂರು ದಾಖಲಿಸಿದ ಮಹಿಳೆ. ಧಾರವಾಡದಲ್ಲಿ ಚಿಫ್ ಕನ್ಸರ್ವೆಟಿವ್ ಫಾರೆಸ್ಟರ್ ಆಗಿದ್ದ ರವಿ ಶಂಕರ ಅವರು ವಿದ್ಯಾ ಅವರಿಗೆ ಫೆಸ್ ಬುಕ್ ನಲ್ಲಿ ಪರಿಚಯವಾಗಿದ್ದರು. ಸದ್ಯ ರವಿಶಂಕರ ಶಿವಮೊಗ್ಗದಲ್ಲಿ ಸಿಸಿಎಫ್ ಆಗಿದ್ದಾರೆ.
Advertisement
Advertisement
ರವಿಶಂಕರ್ ಅವರು ಮದುವೆ ಮಾಡಿಕೊಳ್ಳುವುದಾಗಿ ವಿದ್ಯಾಳನ್ನು ನಂಬಿಸಿ ಮೋಸ ಮಾಡಿದ್ದರು. ಮೋಸ ಮಾಡಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ರವಿಶಂಕರ ಧಮ್ಕಿ ಹಾಕಿದ್ದಾರೆ ಎಂದು ರವಿ ಶಂಕರ್ ವಿರುದ್ಧ ಮಹಿಳೆ ಆರೋಪಿಸಿದ್ದಾರೆ. ದೆಹಲಿಯಲ್ಲಿ ಮೊದಲು ದೂರು ನೀಡಿದ್ದ ಅವರು, ನಂತರ ಅಲ್ಲಿಂದ ಧಾರವಾಡ ಉಪನಗರ ಠಾಣೆಗೆ ದೂರನ್ನು ಟ್ರಾನ್ಸ್ ಫರ್ ಮಾಡಿಸಿಕೊಂಡಿದ್ದಾರೆ.
Advertisement
Advertisement
ಕಳೆದ 2019ರಲ್ಲಿ ಧಾರವಾಡಕ್ಕೆ ಮಹಿಳೆ ಬಂದಿದ್ದರು. ಆ ವೇಳೆ ಅವರನ್ನು ರವಿಶಂಕರ್ ತನ್ನ ಸರ್ಕಾರಿ ಬಂಗಲೆಗೆ ಕರೆದುಕೊಂಡು ಹೋಗಿದ್ದ. ಅಷ್ಟೇ ಅಲ್ಲದೇ ರವಿಶಂಕರ್ ಅಶ್ಲೀಲವಾಗಿ ವೀಡಿಯೋ ಕಾಲ್ ಹಾಗೂ ವಾಟ್ಸಪ್ ಚಾಟ್ ಮಾಡಿರುವುದಾಗಿಯೂ ಮಹಿಳೆ ಆರೋಪಿಸಿದ್ದಾರೆ. ಮೋಸ ಮಾಡಿದ್ದಕ್ಕೆ ಒಂದು ಸಾರಿ ಆತ್ಮಹತ್ಯೆಗೆ ಯತ್ನಿಸಿ ಡೆತ್ ನೋಟ್ ಕೂಡಾ ಬರೆದಿದ್ದರು ಎಂದು ದೂರಿನಲ್ಲಿ ದಾಖಲಾಗಿದೆ.