ಧಾರವಾಡ: ಪ್ರಸ್ತುತ ಲೋಕಸಭಾ ಕ್ಷೇತ್ರದಲ್ಲಿ ಸತತ 5 ಬಾರಿ ಗೆಲುವು ಸಾಧಿಸುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೊಸ ಇತಿಹಾಸ ನಿರ್ಮಿಸಿದ್ದಾರೆ.
Advertisement
2004, 2009, 2014, 2019ರಲ್ಲಿ ಗೆಲುವು ಸಾಧಿಸಿದ್ದ ಜೋಶಿ 2024ರಲ್ಲಿ ಸತತ 5ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಇದೇ ಧಾರವಾಡ ಕ್ಷೇತ್ರದಿಂದ (Dharwad Constituency) ಈ ಹಿಂದೆ ಸರೋಜಿನಿ ಮಹಿಶಿ ಹಾಗೂ ಡಿ.ಕೆ ನಾಯ್ಕರ್ ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಗೆದ್ದಿದ್ದರು. ಡಿ.ಪಿ ಕರ್ಮಾಕರ್ ಒಮ್ಮೆ ಹಾಗೂ ವಿಜಯ ಸಂಕೇಶ್ವರ್ ಮೂರು ಬಾರು ಗೆದ್ದಿದ್ದರು. ಆದ್ರೆ ಪ್ರಹ್ಲಾದ್ ಜೋಶಿ 5ನೇ ಬಾರಿಗೆ ಗೆಲುವು ಸಾಧಿಸಿದ ವಿಶೇಷ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಡಿಕೆ ಬ್ರದರ್ಸ್‌ಗೆ ಠಕ್ಕರ್; ಜನರ ಹೃದಯ ಗೆದ್ದ ಡಾಕ್ಟರ್ – ಮಂಜುನಾಥ್‌ಗೆ ಯಾವ ಕ್ಷೇತ್ರದಲ್ಲಿ ಎಷ್ಟು ವೋಟ್?
Advertisement
Advertisement
2009ರಲ್ಲಿ 4,46,786 ಮತಗಳು, 2014ರಲ್ಲಿ 5,45,395 ಮತಗಳು ಹಾಗೂ 2019ರಲ್ಲಿ 6,84,837 ಮತಗಳನ್ನು ಪಡೆದಿದ್ದ ಜೋಶಿ 2024ರಲ್ಲಿ 7,16,231 ಮತಗಳನ್ನು ಪಡೆಯುವ ಮೂಲಕ 97,324 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ವಿನೋದ್ ಅಸೂತಿ 6,18,907 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.
Advertisement
ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ:
ಸದ್ಯ ಧಾರವಾಡದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಪ್ರಹ್ಲಾದ್ ಜೋಶಿ ಗೆಲುವಿನ ಫಲಿತಾಂಶ ಹೊರಬೀಳುತ್ತಿದ್ದಂತೆ ನಗರದ ಕೃಷಿ ವಿವಿ ಮುಖ್ಯ ದ್ವಾರದ ಎದುರು ಪಟಾಕಿ ಸಿಡಿಸಿದ್ದಾರೆ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಕೋಟೆನಾಡಿನಲ್ಲಿ ಗೋವಿಂದ ಕಾರಜೋಳಗೆ ಜೈಕಾರ ಹಾಕಿದ ಮತದಾರ