ಹುಬ್ಬಳ್ಳಿ: ಅವಾಚ್ಯ ಪದಗಳಿಂದ ನಿಂದಿಸಿದ ಪಿಎಸ್‍ಐಯೊಬ್ಬರಿಗೆ ವಾಹನ ಚಾಲಕನೋರ್ವ ನಡು ರಸ್ತೆಯಲ್ಲಿಯೇ ತರಾಟೆಗೆ ತಗೆದುಕೊಂಡಿರುವ ಪ್ರಸಂಗ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.
ಕುಂದಗೋಳ ಠಾಣೆಯ ಪಿಎಸ್‍ಐ ವಿ.ಡಿ.ಪಾಟೀಲ್ ಅವರು ಗೂಡ್ಸ್ ವಾಹನ ತಡೆದು ಪರಿಶೀಲನೆ ನಡೆಸಿದ್ದರು. ಚಾಲಕ ರಾಘವೇಂದ್ರ ಎಲ್ಲಾ ದಾಖಲೆಗಳನ್ನು ಹೊಂದಿದ್ದರೂ ಸಮವಸ್ತ್ರ ಇಲ್ಲ ಎಂದು ಪಿಎಸ್‍ಐ 200 ರೂ. ದಂಡ ಹಾಕಿದ್ದಾರೆ. ಇದಕ್ಕೆ ಚಾಲಕ ರಾಘವೇಂದ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಕೋಪಗೊಂಡ ವಿ.ಡಿ.ಪಾಟೀಲ್ ಅವರು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಇದನ್ನೂ ಓದಿ: ಸರ್ಕಾರ ಸೂಚನೆ ಕೊಟ್ಟರೂ ಹೊಸ ಟ್ರಾಫಿಕ್ ದಂಡವೇ ಪ್ರಯೋಗ!
Advertisement
Advertisement
ಪಿಎಸ್‍ಐ ಅವರ ವರ್ತನೆಯಿಂದ ರಾಘವೇಂದ್ರ ಕುಪಿತಗೊಂಡು, ನನಗೆ 200 ರೂ. ದಂಡ ಹಾಕಿದಲ್ಲದೇ ಅವಾಚ್ಯ ಪದಗಳಿಂದ ಯಾಕೆ ನಿಂದಿಸಿದ್ದೀರಿ? ಸಾರ್ವಜನಿಕರಿಗೆ ಹೀಗೆ ಬೈಯಲು ನೀವ್ಯಾರು? ಎಂದು ಹಿಗ್ಗಾಮುಗ್ಗಾ ತರಾಟೆಗೆ ತಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅವಾಚ್ಯ ಪದಗಳಿಂದ ನಿಂದಿಸಿದಕ್ಕೆ ಕ್ಷಮೆ ಕೇಳುವಂತೆ ಚಾಲಕ ಪಟ್ಟು ಹಿಡಿದ್ದಾರೆ.
Advertisement
ರಾಘವೇಂದ್ರ ಅವರ ಜೊತೆಗಿದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದಕ್ಕೆ ಪ್ರತಿಯಾಗಿ ಪೊಲೀಸ್ ಸಿಬ್ಬಂದಿ ಕೂಡ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.