ಧಾರವಾಡ: ವಿದ್ಯುತ್ ಕಂಬ ಬದಲಿಸುವ ವೇಳೆ ಭಾರೀ ಅನಾಹುತವೊಂದು ತಪ್ಪಿದೆ.
ಧಾರವಾಡ ನಗರದ ಕಮಲಾಪುರದಲ್ಲಿ ಈ ಘಟನೆ ನಡೆದಿದೆ. ಹೆಸ್ಕಾಂ ಲೈನ್ ಮ್ಯಾನ್ ಕಂಬ ಬದಲಿಸುವ ವೇಳೆ ಏಕಾಏಕಿ ಕಂಬ ಸಿಬ್ಬಂದಿ ಮೈಮೇಲೆ ಬೀಳುತ್ತಿತ್ತು. ಈ ವೇಳೆ ಲೈನ್ ಮ್ಯಾನ್ ಕಂಬದಿಂದ ಹಾರಿ ಪಾರಾಗಿದ್ದಾರೆ.
ಕಂಬ ಬದಲಿಸುವ ಕೆಲಸದ ವೇಳೆ ಕಂಬದ ಮೇಲೆ ಹತ್ತಿ ವೈಯರ್ ತಪ್ಪಿಸುವ ಕೆಲಸವನ್ನು ಸಿಬ್ಬಂದಿ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಮುರಿದಿದ್ದ ಕಂಬ ವಾಲತೊಡಗಿದೆ. ಇದನ್ನರಿತ ಲೈನ್ ಮ್ಯಾನ್ ತಕ್ಷಣ ಕಂಬದಿಂದ ಜಿಗಿದು ಪಾರಾಗಿದ್ದಾರೆ.
ಹೆಸ್ಕಾಂ ಸಿಬ್ಬಂದಿ ಕಂಬದಿಂದ ಬೀಳುವಾಗ ಕೆಳಗಡೆನೇ ಟ್ರ್ಯಾಕ್ಟರ್ ಕೂಡ ನಿಂತಿತ್ತು. ಟ್ರ್ಯಾಕ್ಟರ್ ಹಾಗೂ ಕಂಬದ ನಡುವೆ ಹೆಸ್ಕಾಂ ಸಿಬ್ಬಂದಿ ಸಿಲುಕುತ್ತಿದ್ರೂ ಅವರ ಜೀವಕ್ಕೆ ಅಪಾಯವಿತ್ತು. ಆದರೆ ಅವರು ತಕ್ಷಣ ಎಚ್ಚೆತ್ತ ಕಾರಣ ಜೀವ ಉಳಿಸಿಕೊಂಡು ಪಾರಾಗಿದ್ದಾರೆ.
ಕಂಬದ ಬಳಿಯೇ ನಿಂತಿದ್ದ ಟ್ರ್ಯಾಕ್ಟರ್ ಚಾಲಕ ಕೂಡ ಈ ಕಂಬ ಬೀಳುವುದನ್ನು ನೋಡಿ ಅಲ್ಲಿಂದ ಓಡಿ ಹೋಗಿದ್ದಾರೆ. ಸದ್ಯ ಈ ಎಲ್ಲ ದೃಶ್ಯವನ್ನು ಅಲ್ಲೇ ನಿಂತಿದ್ದ ಯುವಕನೋರ್ವ ತನ್ನ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾನೆ.