ಹುಬ್ಬಳ್ಳಿ: ರೈತರೇ ನಿಜವಾದ ಅನ್ನದಾತರು. ತಮ್ಮ ಕಾಯಕದಲ್ಲಿ ಸದಾ ಕ್ರೀಯಾಶೀಲವಾಗಿ ಕಾರ್ಯಮಾಡುತ್ತಾ ಇದ್ದರಲ್ಲೇ ಸ್ವಲ್ಪ ದಾನ ಮಾಡುವ ಮನೋಭಾವನೆ ಇಟ್ಟುಕೊಂಡಿರುತ್ತಾರೆ. ಇದೀಗ ಅಂತಹ ರೈತನೊಬ್ಬ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ.
ಧಾರವಾಡ ನಗರದ ಗುಲಗಂಜಿಕೊಪ್ಪ ನಿವಾಸಿ ಸದಾನಂದ ಶಿವಳ್ಳಿ ಅವರು ಸಿಎಂ ಪರಿಹಾರ ನಿಧಿಗೆ ಒಂದು ಲಕ್ಷ ದೇಣಿಗೆ ನೀಡಿದ್ದಾರೆ. ಕೋವಿಡ್-19 ತಡೆ ಹಿನ್ನೆಲೆಯಲ್ಲಿ ರಾಜ್ಯದ ಕಾರ್ಮಿಕರು, ನಿರಾಶ್ರಿತರು, ದಿನಗೂಲಿ ನೌಕರರು ಹಾಗೂ ಅನೇಕರು ಹಸಿವಿನಿಂದ ಬಳಲುತ್ತಿದ್ದಾರೆ. ಇದನ್ನೂ ಓದಿ: ಇನ್ಫೋಸಿಸ್ ಫೌಂಡೇಶನ್‍ನಿಂದ 100 ಕೋಟಿ ದೇಣಿಗೆ
Advertisement
Advertisement
ಇವರಿಗೆ ಆಸರೆಯಾಗಲಿ ಎಂಬ ಉದ್ದೇಶದಿಂದ ಸಿಎಂ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿಗಳ ಚೆಕ್ ನೀಡಿದ್ದಾರೆ. ಜಿಲ್ಲಾ ಅಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ.
Advertisement
ಈ ಸಂದರ್ಭದಲ್ಲಿ ಕವಿವ ಸಂಘದ ಎಸ್.ಐ ಭಾವಿಕಟ್ಟಿ, ಮಾರ್ತಾಂಡಪ್ಪ ಎಂ ಕತ್ತಿ, ಅಧಿಕಾರಿಗಳಾದ ಜಿಲ್ಲಾ ಯೋಜನಾಧಿಕಾರಿ ದೀಪಕ್, ಲಕ್ಷಣ್ಣ ಬಕ್ಕಾಯಿ ಇದ್ದರು.