ಮಗು ನಾಪತ್ತೆ ಪ್ರಕರಣದ ತನಿಖೆಗೆ ಸಿಬಿಐ ಹೆಗಲಿಗೆ: ಧಾರವಾಡ ಹೈಕೋರ್ಟ್ ಮಹತ್ವದ ಅದೇಶ

Public TV
1 Min Read
dwd court

ಧಾರವಾಡ: ಮಗು ನಾಪತ್ತೆ ಪ್ರಕರಣವೊಂದನ್ನು ಧಾರವಾಡ ಹೈಕೋರ್ಟ್ ಸಿಬಿಐಗೆ ವಹಿಸಲು ಮಹತ್ವದ ಅದೇಶ ಕೊಟ್ಟಿದೆ.

2016 ರಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಠಾರೆ ಎಂಬ ಖಾಸಗಿ ಆಸ್ಪತ್ರೆಯಲ್ಲಿ ಮಗು ನಾಪತ್ತೆ ಪ್ರಕರಣ ನಡೆದಿತ್ತು. ಈ ಹಿನ್ನೆಲೆಯಲ್ಲಿ ರಕ್ಕಸಗಿ ಗ್ರಾಮದ ಮಗುವಿನ ತಾಯಿ ಶಂಕ್ರಮ್ಮ ಪೂಜಾರ, ಬಾಗಲಕೋಟೆ ಜಿಲ್ಲೆಯ ಹುನಗುಂದ ಪೊಲೀಸ್ ಠಾಣೆಯಲ್ಲಿ ತನಗೆ ಜನಿಸಿದ ಹೆಣ್ಣು ಮಗು ನಾಪತ್ತೆಯಾದ ಬಗ್ಗೆ ದೂರು ನೀಡಿದ್ದರು. ಆದರೆ ಪೊಲೀಸರು ದೂರನ್ನು ದಾಖಲಿಸದ ಹಿನ್ನೆಲೆಯಲ್ಲಿ ಶಂಕ್ರಮ್ಮ ಹೈಕೊರ್ಟ್ ನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿಯನ್ನ ಸಲ್ಲಿಸಿದ್ದರು. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್, ಬಾಗಲಕೋಟೆ ಎಸ್‍ಪಿಗೆ ದೂರನ್ನ ದಾಖಲಿಸಲು ಸೂಚನೆ ನೀಡಿತ್ತು.

dwd highcourt 1

ಈ ಹಿನ್ನೆಲೆಯಲ್ಲಿ 2017ರ ಜನವರಿಯಲ್ಲಿ ಮಗು ನಾಪತ್ತೆ ಪ್ರಕರಣ ದಾಖಲಾಗಿತ್ತು. ಬಾಗಲಕೋಟೆ ಎಸ್‍ಪಿಗೆ ತನಿಖೆ ನಡೆಸಿ ವರದಿ ನೀಡುವಂತೆ ನ್ಯಾಯಾಲಯ ಸೂಚನೆ ನೀಡಿತ್ತು. ಬಾಗಲಕೋಟೆ ಎಎಸ್‍ಪಿ ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿಯನ್ನ ಸಲ್ಲಿಸಿದ್ದರು. ಆದ್ರೆ ಈ ವರದಿ ಅಸಮಂಜಸವಾಗಿದೆ ಎಂದು ಹೇಳಿದ ನ್ಯಾಯಾಲಯ, ಪ್ರಕರಣವನ್ನ ಸಿಬಿಐಗೆ ವಹಿಸಲು ಹೇಳಿದೆ.

baby

ಹೈಕೋರ್ಟ್ ನ್ಯಾಯಮೂರ್ತಿ ಎಸ್ ಸುಜಾತಾ ಮತ್ತು ಬೆಂಗಳೂರಿನ ಹೈಕೋರ್ಟ್‍ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ನ್ಯಾಯಮೂರ್ತಿ ಎಚ್‍ಬಿ ಪ್ರಭಾಕರಶಾಸ್ತ್ರಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ಮಾಡಿ ಈ ಆದೇಶ ಪ್ರಕಟಿಸಿದ್ದಾರೆ.

dwd highcourt 2

ಸಾಧಾರಣವಾಗಿ ಬಹಳ ಚರ್ಚೆಯಾಗಿರುವ ಪ್ರಕರಣ ತನಿಖೆ ನಡೆಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಿಬಿಐ ತನಿಖೆಗೆ ಆದೇಶಿಸುತ್ತದೆ. ಇದರ ಜೊತೆಗೆ ಭಾರೀ ಮಹತ್ವದ ಪ್ರಕರಣದಲ್ಲಿ ತನಿಖೆ ಸರಿಯಾಗಿ ನಡೆಯದೇ ಇದ್ದಲ್ಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ಆದೇಶಿಸುತ್ತದೆ. ಈಗ ಮಗು ನಾಪತ್ತೆ ಪ್ರಕರಣವನ್ನು ನ್ಯಾಯಾಲಯ ಗಂಭೀರವಾಗಿ ಸ್ವೀಕರಿಸಿದ ಪರಿಣಾಮ ತನಿಖೆ ಜವಾಬ್ದಾರಿ ಸಿಬಿಐ ಹೆಗಲಿಗೇರಿದೆ. ಈ ಹಿಂದೆ ಡಿಕೆ ರವಿ ಪ್ರಕರಣ ಸಿಐಡಿ ತನಿಖೆಯಲ್ಲಿ ಲೋಪದೋಷಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಸಿಬಿಐಗೆ ವಹಿಸಿತ್ತು.

Share This Article
Leave a Comment

Leave a Reply

Your email address will not be published. Required fields are marked *