ಧಾರವಾಡ/ಚಿಕ್ಕಮಗಳೂರು/ಯಾದಗಿರಿ: ಧಾರವಾಡದಲ್ಲಿ ಆಲಿಕಲ್ಲು ಸಮೇತ ಭಾರೀ ಮಳೆಯಾಗಿದ್ದು, ರಾಜ್ಯದ ಯಾದಗಿರಿ, ಚಿಕ್ಕಮಗಳೂರು, ಹಾಸನ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮಳೆರಾಯ ಭೂಮಿಯನ್ನು ತಂಪು ಮಾಡಿದ್ದಾನೆ.
ಯಾದಗಿರಿಯಲ್ಲಿ ಜಿಲ್ಲಾದ್ಯಂತ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, ಒಂದು ಗಂಟೆಗೂ ಅಧಿಕಕಾಲ ವರುಣ ದೇವ ಅಬ್ಬರಿಸಿದ್ದಾನೆ. ಜಿಲ್ಲೆಯ ಶಹಪುರ, ಸುರಪುರ, ಗುರುಮಿಠಕಲ್, ಹುಣಸಗಿ ಸೇರಿದಂತೆ ಹಲವು ಭಾಗಗಳಲ್ಲಿ ಮಳೆಯಾಗಿದ್ದು, ಬಿರುಗಾಳಿ ಸಹಿತ ಮಳೆಯ ಆರ್ಭಟ ಕಂಡು ಜನರು ಭಯ ಭೀತರಾಗಿದ್ದಾರೆ.
Advertisement
Advertisement
ಧಾರವಾಡ ಜಿಲ್ಲೆಯಲ್ಲೂ ಧಾರಕಾರವಾಗಿ ಮಳೆಯಾಗಿದ್ದು, ಗುಡುಗು ಸಿಡಿಲು ಆಲಿಕಲ್ಲು ಸಮೇತ ಅರ್ಧ ಗಂಟೆಗೂ ಅಧಿಕ ಕಾಲ ಮಳೆ ಬಂದಿದೆ. ಚಿಕ್ಕಮಗಳೂರಿನಲ್ಲಿ ಭರ್ಜರಿ ಮಳೆಯಾಗಿದ್ದು, ಜಿಲ್ಲೆಯ ಮೂಡಿಗೆರೆ, ಕೊಪ್ಪ, ಎನ್.ಆರ್.ಪುರದಲ್ಲಿ ಮಳೆಯಾಗಿದೆ. ಮೂಡಿಗೆರೆಯ ಬಣಕಲ್, ಕೊಟ್ಟಿಗೆಹಾರ, ಬಾಳೂರು, ಜಾವಳಿಯಲ್ಲಿ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಜೊತೆಗೆ ಹಾಸನದ ಕೆಲ ಭಾಗದಲ್ಲೂ ಗಾಳಿ ಸಮೇತ ಮಳೆ ಬಂದಿದೆ.