ಬೆಂಗಳೂರು: ನಾರಾಯಣ ಬರಮನಿ (ASP Narayan Bharaman)i ಪ್ರಕರಣದಿಂದ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಸರ್ಕಾರ ಕೊನೆಗೂ ಮುಜುಗರದಿಂದ ಪಾರಾಗಿದೆ.
ಧಾರವಾಡ ಎಎಸ್‌ಪಿ ನಾರಾಯಣ ಬರಮನಿ ಕೆಲಸಕ್ಕೆ ಹಾಜರಾಗಿದ್ದು ಸ್ವಯಂ ನಿವೃತ್ತಿ ಮನವಿಯನ್ನು ಸರ್ಕಾರ ಬದಿಗೆ ಸರಿಸಿದೆ. ಸಿಎಂ ಸಿದ್ದರಾಮಯ್ಯ, ಗೃಹಸಚಿವ ಪರಮೇಶ್ವರ್ ಮನವೊಲಿಕೆಯ ನಂತರ ನಾರಾಯಣ ಬರಮನಿ ಕೆಲಸಕ್ಕೆ ಹಾಜರಾಗಿದ್ದಾರೆ.
ಸ್ವಯಂ ನಿವೃತ್ತಿ ಮನವಿಗೆ ಸೋಮವಾರ ಡೆಡ್ ಲೈನ್ ಇತ್ತು. ಸರ್ಕಾರ ಈಗ ವಿಆರ್‌ಎಸ್ ಮನವಿಯನ್ನು ಬದಿಗೆ ಸರಿಸಿದ್ದರಿಂದ ಇನ್ನೂ ಮೂರು ವರ್ಷ ನಾರಾಯಣ ಬರಮನಿ ಸೇವೆ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಬಹುಭಾಷಾ ನಟ ಆಂಧ್ರ, ತಮಿಳುನಾಡಿನಲ್ಲೇಕೆ ಹೋರಾಡುತ್ತಿಲ್ಲ: ಪ್ರಕಾಶ್ ರೈಗೆ ಕುಟುಕಿದ ಎಂಬಿ ಪಾಟೀಲ್
ಬಹಿರಂಗ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಂದ ಅವಮಾನಿತರಾಗಿದ್ದ ಎಎಸ್‌ಪಿ ನಾರಾಯಣ ಭರಮನಿ ಅವರು ಸ್ವಯಂ ನಿವೃತ್ತಿಗೆ ಮುಂದಾಗಿದ್ದರು.
ಬೆಳಗಾವಿಯಲ್ಲಿ (Belagavi) ನಡೆದ ಕಾರ್ಯಕ್ರಮದಲ್ಲಿ ಭದ್ರತಾ ವೈಫಲ್ಯಕ್ಕೆ ಸಂಬಂಧಿಸಿದಂತೆ ಕರ್ತವ್ಯದಲ್ಲಿದ್ದ ನಾರಾಯಣ ಬರಮನಿ ಅವರನ್ನು ವೇದಿಕೆಗೆ ಕರೆಸಿದ್ದ ಸಿಎಂ ಅಡ್ಡಿಪಡಿಸಲು ಪ್ರತಿಭಟನಾಕಾರರಿಗೆ ಯಾಕೆ ಅವಕಾಶ ನೀಡಿದ್ದೀರಿ ಎಂದು ಪ್ರಶ್ನಿಸಿ ಸಾರ್ವಜನಿಕವಾಗಿ ಹೊಡೆಯಲು ಕೈಎತ್ತಿದ್ದರು. ಸಾರ್ವಜನಿಕವಾಗಿ ಮುಜುಗರಕ್ಕೆ ಒಳಗಾದ ನಂತರ ಬರಮನಿ ಅವರು ಸ್ವಯಂ ನಿವೃತ್ತಿಗೆ ಮನವಿ ಸಲ್ಲಿಸಿದ್ದರು.