ಬೆಂಗಳೂರು: ನಟ ದರ್ಶನ್ (Actor Darshan) ನನ್ನ ಸ್ನೇಹಿತ, ಕೊಲೆ ಕೇಸ್ ನಲ್ಲಿ ಅರೆಸ್ಟ್ ಆಗಿರೋ ವಿಷಯ ನನಗೂ ಶಾಕ್ ಆಯ್ತು ಅಂತ ಶಾಸಕರೂ ಆಗಿರುವ ನಟ ದರ್ಶನ್ ಸ್ನೇಹಿತ ದರ್ಶನ್ ಪುಟ್ಟಣ್ಣಯ್ಯ (Dharshan Puttannaiah) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ದರ್ಶನ್ ಬಂಧನದ (Darshan Arrest) ಬಗ್ಗೆ ಮಂಗಳವಾರ ನಮಗೆ ಮಾಹಿತಿ ಗೊತ್ತಾಯ್ತು. ಮಂಡ್ಯದಲ್ಲಿ ಪ್ರೆಸ್‌ನವರು ಕೇಳಿದಾಗ ಗೊತ್ತಿರಲಿಲ್ಲ. ಈಗ ಬಂಧನವಾಗಿರುವ ಮಾಹಿತಿ ಗೊತ್ತಾಯ್ತು. ಏನಾಯ್ತು ಏನು ಅನ್ನೋದು ಈಗ ಮಾಹಿತಿಗಳು ಹೊರಗಡೆ ಬರ್ತಿದೆ. ಪೊಲೀಸರು ಮಂಗಳವಾರ ಹೇಳಿಕೆ ಪಡೆದಿದ್ದಾರೆ. ದರ್ಶನ್ ಅವರು ನನಗೆ ತುಂಬಾ ಆತ್ಮೀಯರು. ನಮ್ಮ ನಡುವೆ ಹಲವಾರು ವರ್ಷಗಳಿಂದ ಒಳ್ಳೆಯ ಸಂಬಂಧ ಇದೆ. ಈ ರೀತಿ ಆಗಿದೆ ಅಂದಾಗ ನನಗೂ ಶಾಕ್ ಆಯ್ತು ಎಂದಿದ್ದಾರೆ.
ಈ ಪ್ರಕರಣ ಏನಾಗುತ್ತೆ ಅನ್ನೋದು ಪೊಲೀಸರ ತನಿಖೆಯಿಂದ ಗೊತ್ತಾಗುತ್ತೆ. ಈ ಕೇಸ್‌ನಲ್ಲಿ ಭಾಗಿಯಾಗಿದ್ದಾರೆ ಎಂಬ ಸಂಶಯ ಇದೆ ಅಂತ ದರ್ಶನ್ ಅವರನ್ನ ಅರೆಸ್ಟ್ ಮಾಡಿದ್ದಾರೆ. ಈಗ ಅದು ಸಾಬೀತು ಆಗಬೇಕಿದೆ. ಇದೆಲ್ಲ ನಮಗೆ ಗೊತ್ತಿಲ್ಲ ನಮ್ಮದು ಫ್ರೆಂಡ್ ಶಿಪ್ ಅಂತೂ ಇದ್ದೇ ಇದೆ, ಮುಂದೆಯೂ ಇರುತ್ತೆ. ಆದ್ರೆ ಕಳೆದೆರಡು ದಿನಗಳಿಂದ ದರ್ಶನ್ ಜೊತೆ ಸಂಪರ್ಕದಲ್ಲಿರಲಿಲ್ಲ. ಈ ವಿಷಯದ ಬಗ್ಗೆಯೂ ಮಾತುಕತೆ ಆಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನೂ ದರ್ಶನ್ ವಿಚಾರದಲ್ಲಿ ಬರೀ ಕಾಂಟ್ರವರ್ಸಿ ಹೆಚ್ಚಾಗ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಷಯ ಅವರಿಗೆ ಕೇಳಬೇಕು. ಕೊಲೆ ಮಾಡುವ ಹಂತಕ್ಕೆಲ್ಲ ಹೋಗಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ಅದೇ ನನಗೂ ಶಾಕ್ ಆಯ್ತು. ಯಾಕೆ ಏನು ಅಂತ ನನೆಗೆ ಗೊತ್ತಿಲ್ಲ ವಿಚಾರಣೆ ಮಾಡಿದಾಗ ಗೊತ್ತಾಗುತ್ತೆ, ಮುಂದೆ ಏನಾಗುತ್ತೆ ನೋಡೋಣ ಅಂದಿದ್ದಾರೆ.