ಮಂಗಳೂರು: ಶ್ರೀ ಕ್ಷೇತ್ರದ ಮೇಲೆ ನಡೆದ ಷಡ್ಯಂತ್ರ (Conspiracy) ಮುಂದೆಂದೂ ಮತ್ಯಾವ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲಾಗದಂತೆ ತಡೆಯುವ ಅವಶ್ಯಕತೆಯಿದ್ದು ಸರ್ಕಾರ ಈ ವಿಚಾರವಾಗಿ ಗಮನವಹಿಸಬೇಕೆಂದು ಧರ್ಮಸ್ಥಳ (Dharmasthala Temple) ಧರ್ಮಾಧಿಕಾರಿಗಳ ಕಚೇರಿ ಮನವಿ ಮಾಡಿದೆ.
ಬುರುಡೆ ಗ್ಯಾಂಗ್ ವಿರುದ್ಧ ವಿಶೇಷ ತನಿಖಾ ತಂಡ (SIT) ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಾಥಮಿಕ ವರದಿಯನ್ನು ಪಬ್ಲಿಕ್ ಟಿವಿ ವರದಿ ಮಾಡಿದ ಬೆನ್ನಲ್ಲೇ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳ ಕಚೇರಿಯ ವಕ್ತಾರರಾದ ಕೆ ಪಾರ್ಶ್ವನಾಥ್ ಜೈನ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ರೇಷ್ಮೆ ಬದಲು ಪಾಲಿಸ್ಟರ್ ಶಾಲು – ತಿರುಪತಿ ದೇವಸ್ಥಾನದಲ್ಲಿ 54 ಕೋಟಿ ಹಗರಣ
ಹೇಳಿಕೆಯಲ್ಲಿ ಏನಿದೆ?
ಶ್ರೀ ಕ್ಷೇತ್ರ ಧರ್ಮಸ್ಥಳ ವಿಚಾರಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ವಿಶೇಷ ತನಿಖಾ ತಂಡ ನ್ಯಾಯಾಲಯಕ್ಕೆ ಪ್ರಾಥಮಿಕ ತನಿಖೆಯ ಮಾಹಿತಿಯನ್ನು ಒದಗಿಸಿದೆ ಎಂದು ಮಾಧ್ಯಮಗಳಲ್ಲಿ ನೋಡಿ ತಿಳಿದಿದ್ದೇವೆ. ಇದರನ್ವಯ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ರೂಪಿಸಿರುವುದು ಸ್ಪಷ್ಟವಾಗಿ ತಿಳಿದು ಬರುತ್ತದೆ. ಇದನ್ನೂ ಓದಿ: ದೂರು ನೀಡಿದವರೇ ಈಗ ಆರೋಪಿಗಳು- ಬುರುಡೆ ಗ್ಯಾಂಗ್ ಮೇಲೆ ಸೆಕ್ಷನ್‌ಗಳ ಸುರಿಮಳೆ

