– ಧರ್ಮಸ್ಥಳ ಕೇಸ್ ಎಸ್‌ಐಟಿ ಬದಲು ಸಿಐಡಿ ತನಿಖೆ?
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ (Dharmasthala Mass Burials) ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಸರಣಿ ವೀಡಿಯೋಗಳನ್ನು ಬಿಡುಗಡೆ ಮಾಡುತ್ತಿರುವುದರ ನಡುವೆ, ಬುರುಡೆ ಚಿನ್ನಯ್ಯನನ್ನು (Mask Man Chinnaiah) ಇಂದು ಮತ್ತೆ ಬೆಳ್ತಂಗಡಿ ನ್ಯಾಯಾಲಯಕ್ಕೆ ಎಸ್‌ಐಟಿ (SIT) ಹಾಜರುಪಡಿಸಲಿದೆ. ಈ ನಡುವೆ ಮಹೇಶ್ ಶೆಟ್ಟಿ ತಿಮರೋಡಿಗೆ ಪೊಲೀಸರು ಮೂರನೇ ನೋಟಿಸ್ ಸರ್ವ್ ಮಾಡಲು ಸಿದ್ಧತೆ ನಡೆಸಿದ್ದಾರೆ. ನಿರೀಕ್ಷಣಾ ಜಾಮೀನಿಗಾಗಿ ತಿಮರೋಡಿ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ.
ಧರ್ಮಸ್ಥಳದ ಬುರುಡೆ ಗ್ಯಾಂಗ್‌ನ ಎಸ್‌ಐಟಿ ತನಿಖೆ ಸಾವಧಾನವಾಗಿ ಸಾಗಿದೆ. ಪಿನ್ ಟು ಪಿನ್ ಮಾಹಿತಿಗಳನ್ನು ಕಲೆ ಹಾಕುತ್ತಿರುವ ಪೊಲೀಸರು, ಬುರುಡೆ ಚಿನ್ನಯ್ಯನನ್ನು ಮತ್ತೆ ಕೋರ್ಟ್‌ಗೆ ಇಂದು ಹಾಜರುಪಡಿಸಲಿದ್ದಾರೆ. ಹೆಚ್ಚುವರಿ ಹೇಳಿಕೆಯನ್ನು ನ್ಯಾಯಾಧೀಶರ ಮುಂದೆ ದಾಖಲಿಸುವ ಕಾರ್ಯ ನಡೆಯಲಿದೆ. ಶಿವಮೊಗ್ಗ ಜೈಲಿನಲ್ಲಿರುವ ಚಿನ್ನಯ್ಯನನ್ನು ಈಗಾಗಲೇ ಒಂದು ಬಾರಿ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಲು ಕರೆ ತಂದಿದ್ದು, ಇಂದು ಹೇಳಿಕೆ ದಾಖಲಿಸಲು ನ್ಯಾಯಾಧೀಶರು ಅನುಮತಿ ನೀಡಿದ್ದರು. ಹೀಗಾಗಿ ಮತ್ತೆ ಶಿವಮೊಗ್ಗ ಜೈಲಿನಿಂದ ಚಿನ್ನಯ್ಯ ನನ್ನು ಕರೆ ತಂದು ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ. ಇದನ್ನೂ ಓದಿ: ಚಿನ್ನದ ಮಾಂಗಲ್ಯ ಸರದ ಆಸೆಗೆ ಮಾವನ ಮಗಳ ಕೊಲೆ – ಸತ್ಯ ಹೊರಬರುತ್ತಿದ್ದಂತೆ ಆರೋಪಿ ಆತ್ಮಹತ್ಯೆ
ಇನ್ನು ಬುರುಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದ್ದು, ಬಂಗ್ಲೆಗುಡ್ಡ ತಲೆಬುರೆಡೆ, ಮೂಳೆಗಳು ಪತ್ತೆ ಕೇಸ್ ಎಸ್‌ಐಟಿ ತನಿಖೆ ಬದಲು ಸಿಐಡಿ ತನಿಖೆಗೆ ಹಸ್ತಾಂತರಿಸಲು ಸರ್ಕಾರ ಪ್ಲ್ಯಾನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಇದೇ ಗುರುವಾರ ರಾಜ್ಯ ಸರ್ಕಾರದಿಂದ ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ. ಶವಗಳ ಹೂತಿಟ್ಟ ಪ್ರಕರಣಗಳು ಮಾತ್ರ ಎಸ್‌ಐಟಿ ತನಿಖೆ ವ್ಯಾಪ್ತಿಯಲ್ಲಿ ಇರಲಿದೆ. ಷಡ್ಯಂತ್ರ ನಡೆದಿದೆ ಎಂದು ಕ್ರಿಮಿನಲ್ ಪಿತೂರಿ ನಡೆದಿರುವ ಬಗ್ಗೆ ಸರ್ಕಾರಕ್ಕೆ ಮೌಖಿಕ ವರದಿ ಕೊಟ್ಟಿದೆ ಎನ್ನಲಾಗಿದೆ. ಇನ್ನು ಎಸ್‌ಐಟಿ ಮಾಹಿತಿ ಮೇರೆಗೆ ಉಳಿದ ತನಿಖೆಯನ್ನ ಸಿಐಡಿಗೆ ವಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದನ್ನೂ ಓದಿ: ವಿಚಾರಣೆಗೆ ಹಾಜರಾಗದ ವಿಜಯಲಕ್ಷ್ಮಿ – ಸಿ ರಿಪೋರ್ಟ್ ಸಲ್ಲಿಕೆಗೆ ಪೊಲೀಸರ ಚಿಂತನೆ
ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ತಪಾಸಣೆ ನಡೆಸಿದಾಗ ಪೊಲೀಸರು ತಲ್ವಾರ್ ಬಂದೂಕು ಸೇರಿದಂತೆ ಹಲವಾರು ವಸ್ತುಗಳು ವಶಕ್ಕೆ ಪಡೆದಿದ್ದರು. ಈ ವಿಚಾರಣೆಗೆ ಈಗಾಗಲೇ ಎರಡು ಬಾರಿ ನೋಟಿಸನ್ನು ಕೊಡಲಾಗಿದೆ. ಎರಡು ನೋಟಿಸ್‌ಗೆ ಕ್ಯಾರೇ ಎನ್ನದ ತಿಮರೋಡಿ ಬೇಲ್‌ಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ. ಈ ನಡುವೆ ಪೊಲೀಸರು 3ನೇ ನೋಟಿಸ್ ನೀಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಮೂರನೇ ನೋಟಿಸ್‌ಗೆ ಉತ್ತರಿಸದಿದ್ದರೆ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarody) ಮತ್ತೆ ಬಂಧನವಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ – 9 ಬಾರಿ ಚಾಕು ಇರಿದು ಲಿವ್ ಇನ್ ಗೆಳತಿಯ ಕೊಂದ ಪ್ರಿಯಕರ
ಬುರುಡೆ ವಿಚಾರಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿಯ ವಿಚಾರಣೆ ನಡೆದಿಲ್ಲ. ಬುರುಡೆ ಗ್ಯಾಂಗ್‌ನಲ್ಲಿ ತಾನಿಲ್ಲ ಎಂದು ಬಿಂಬಿಸಲು ಹೊರಟಿರುವ ಮಹೇಶ್ ಶೆಟ್ಟಿ ಈಗಾಗಲೇ ಸಾಲು ಸಾಲು ವೀಡಿಯೋಗಳನ್ನು ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ಧಾರವಾಡ | ಯೂಟ್ಯೂಬರ್ ಮುಕಳೆಪ್ಪನ ಪತ್ನಿ ಪೊಲೀಸರ ವಶಕ್ಕೆ – ಶಕ್ತಿ ಸದನ ಕೇಂದ್ರಕ್ಕೆ ರವಾನೆ