ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ (Dharmasthala Mass Burial Case) ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೇಬರ ಶೋಧ ತೀವ್ರಗೊಂಡಿದೆ.
ಇಂದು ಬೆಳಗ್ಗೆ 11 ಗಂಟೆಯಿಂದ ಸಾಕ್ಷಿ ದೂರುದಾರ ವ್ಯಕ್ತಿ ತೋರಿಸಿದ ಎರಡನೇ ಜಾಗದಲ್ಲಿ ಶೋಧ ಕಾರ್ಯ ನಡೆಯಿತು. ನೇತ್ರಾವತಿ ನದಿ (Netravati River) ಪಕ್ಕದ ದಟ್ಟ ಕಾಡಿನ ಒಳಗಡೆ ಮಧ್ಯಾಹ್ನ 12:30ರವರೆಗೂ ಶೋಧ ಕಾರ್ಯ ನಡೆದರೂ ಯಾವುದೇ ಕುರುಹು ಪತ್ತೆಯಾಗಿಲ್ಲ. ಇದನ್ನೂ ಓದಿ: ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್ | ಪ್ರಕರಣದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರು ತಳುಕು
ಅರಣ್ಯ (Forest) ಪ್ರವೇಶದ ಆರಂಭದಲ್ಲೇ ಇರುವ ಎರಡನೇ ಜಾಗವಿದ್ದು ಪಂಚಾಯತ್‌ನ ಇಪ್ಪತ್ತು ಮಂದಿ ಕಾರ್ಮಿಕರಿಂದ ಉತ್ಖನನ ಕಾರ್ಯ ನಡೆಯಿತು. ಆರಂಭದಲ್ಲಿ ಉದ್ದಕ್ಕೆ ಆರು ಅಡಿ, ಅಗಲಕ್ಕೆ ಐದು ಅಡಿ ಜಾಗ ಗುರುತಿಸಿ ಅಗೆಯಲಾಯಿತು.
ಅರಣ್ಯದ ಒಳಗಡೆ ಉತ್ಕನನ ನಡೆಸಲು ಯಂತ್ರ ಬಳಸಲು ಅನುಮತಿ ಇಲ್ಲದ ಕಾರಣ ಕಾರ್ಮಿಕರಿಂದಲೇ ಶೋಧ ಕಾರ್ಯ ನಡೆಸಲಾಯಿತು. ಪುತ್ತೂರಿನ ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹಾಗೂ ಎಸ್ಐಟಿ ಎಸ್.ಪಿ ಜಿತೇಂದ್ರ ಕುಮಾರ್ ದಯಾಮ ಖುದ್ದು ಸ್ಥಳದಲ್ಲಿದ್ದಾರೆ.
ಊಟದ ವಿರಾಮದ ನಂತರ ದೂರುದಾರ ವ್ಯಕ್ತಿ ತೋರಿಸಿದ ಮೂರನೇ ಜಾಗದಲ್ಲಿ ಅಗೆಯುವ ಕೆಲಸ ಆರಂಭವಾಗಿದೆ.