ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಕೇಸ್‌ – ಸಹಾಯವಾಣಿ ತೆರೆದ ಎಸ್‌ಐಟಿ

Public TV
1 Min Read
Dharmasthala case 1

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿಗಾಗಿ ಎಸ್‌ಐಟಿ ಅಧಿಕಾರಿಗಳು ಸಹಾಯವಾಣಿ ತೆರೆದಿದ್ದಾರೆ.

ಮಂಗಳೂರಿನ ಮಲ್ಲಿಕಟ್ಟೆಯ ಐ.ಬಿಯಲ್ಲಿರುವ ಎಸ್ಐಟಿ ಕಚೇರಿಯ ಸಂಪರ್ಕಿಸಲು ಸಹಾಯವಾಣಿ ತೆರೆಯಲಾಗಿದೆ. ಪ್ರಕರಣ ಬಗ್ಗೆ ಮಾಹಿತಿ ನೀಡಲು ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ.

MNG SIT HELP LINE AV

ದೂರವಾಣಿ ಸಂಖ್ಯೆ 0824 – 2005301 ಸಂಖ್ಯೆಯನ್ನು ಸಂಪರ್ಕಿಸಲು ಮನವಿ ಮಾಡಲಾಗಿದೆ.

ಧರ್ಮಸ್ಥಳದ ವಿವಿಧ ಭಾಗಗಳಲ್ಲಿ ಹೂತಹಾಕಲಾಗಿದೆ ಎನ್ನಲಾದ ಶವಗಳ ಪತ್ತೆಗೆ ಜಾಗ ಅಗೆಯುವ ಕಾರ್ಯ ಬುಧವಾರವೂ ಮುಂದುವರಿಯಿತು. ಆದರೆ, ದೂರುದಾರ ತೋರಿಸಿದ ಜಾಗದಲ್ಲಿ ಇದುವರೆಗೂ ಯಾವುದೇ ಕಳೇಬರ ಪತ್ತೆಯಾಗಿಲ್ಲ.

ಅನಾಮಿಕ ತೋರಿಸುವ ಜಾಗದಲ್ಲಿ ಉತ್ಖನನ ಕಾರ್ಯ ಮತ್ತೆ ಮುಂದುವರಿಯಲಿದೆ. ಈ ಕುರಿತು ಯಾವುದೇ ಕುರುಹು ಸಿಗಬಹುದೇ ಎಂದು ಎಸ್‌ಐಟಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

Share This Article