ಮಂಗಳೂರು: ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಆರೋಪ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ಪ್ರಕರಣದಲ್ಲಿರುವ ಗ್ಯಾಂಗ್ ಕೇರಳದ ಕಮ್ಯುನಿಸ್ಟ್ ಪಕ್ಷದ ಸಂಸದನ ಮುಂದೆ ಬುರುಡೆ ಇಟ್ಟಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.
ಆರೋಪಿ ಚಿನ್ನಯ್ಯ ಹಾಗೂ ಗಿರೀಶ್ ಮಟ್ಟಣ್ಣನವರ್, ಜಯಂತ್.ಟಿ ಅವರು ಕೇರಳಕ್ಕೆ ಭೇಟಿ ನೀಡಿದ್ದರು. ಕೇರಳ ಸಂಸದ ಸಂತೋಷ್ ಕುಮಾರ್ ಅವರನ್ನು ಭೇಟಿಯಾಗಿದ್ದರು. ಬುರುಡೆಯನ್ನು ಅವರ ಬಳಿ ತೆಗೆದುಕೊಂಡು ಹೋಗಿದ್ದರು ಎಂಬ ವಿಚಾರ ಎಸ್‌ಐಟಿ ತನಿಖೆ ವೇಳೆ ಬಹಿರಂಗವಾಗಿದೆ.
ಜುಲೈನಲ್ಲೇ ಯೂಟ್ಯೂಬರ್‌ವೊಬ್ಬ ಕೇರಳ ಸಂಸದನ ಸಂದರ್ಶನ ಮಾಡಿದ್ದ. ಎಂಪಿ ಸಂತೋಷ್, ಧರ್ಮಸ್ಥಳ ಪ್ರಕರಣದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದರು. ಕೇಸನ್ನು ಸರ್ಕಾರ ಎಸ್‌ಐಟಿಗೆ ಕೊಡುವ ಮೊದಲೇ ಸಂದರ್ಶನ ನಡೆಸಲಾಗಿತ್ತು.
ಕೇರಳದಲ್ಲಿ ಸಂಸದನನ್ನು ಬುರುಡೆ ಗ್ಯಾಂಗ್ ಭೇಟಿಯಾದ ವೇಳೆ ಸಂದರ್ಶನ ನೀಡಿರುವ ಸಾಧ್ಯತೆ ಇದೆ. ಪ್ರಕರಣದ ಬಗ್ಗೆ ಸಂದರ್ಶನದಲ್ಲಿ ವಿವರವಾಗಿ ಸಂತೋಷ್ ವಿವರವಾಗಿ ಮಾತನಾಡಿದ್ದರು.