ಬೀದರ್: ಧರ್ಮಸ್ಥಳ ತಲೆಬುರುಡೆ ಪ್ರಕರಣ (Dharmasthala Mass Burial Case) ಬಿಜೆಪಿಯ ಸೃಷ್ಟಿ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre) ಹೊಸ ಬಾಂಬ್ ಸಿಡಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಉಸ್ತುವಾರಿ ಸಚಿವರು, ನಾನು ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ಸರ್ಕಾರದಿಂದ ಧರ್ಮಸ್ಥಳಕ್ಕೆ ಕಳಂಕ ಆಗುವುದಿಲ್ಲ. ಬಿಜೆಪಿಯವರೇ (BJP) ಈ ಅನಾಮಿಕ ವ್ಯಕ್ತಿಯನ್ನು ಸೃಷ್ಟಿ ಮಾಡಿದ್ದಾರೆ. ಸ್ವಾರ್ಥಕ್ಕಾಗಿ ಬಿಜೆಪಿಯವರು ಇಂಥವರನ್ನು ಸೃಷ್ಟಿ ಮಾಡುವುದನ್ನು ನಾವು ನೋಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ| ಗುಂಡಿ ತೋಡಿದ್ದ ಕಾರ್ಮಿಕರ ಸಹಿ ಪಡೆದು ಕಳುಹಿಸಿದ ಎಸ್‌ಐಟಿ
ಬಿಜೆಪಿಯವರು ಅವರ ಸ್ವಾರ್ಥಕ್ಕಾಗಿ ಸೃಷ್ಟಿ ಮಾಡಿ ತನಿಖೆ ಮಾಡಿ ಎಂದು ಹೇಳುತ್ತಾರೆ. ತನಿಖೆ ಮಾಡುವಾಗ ಅದರ ದಾರಿ ತಪ್ಪಿಸುವ ಕೆಲಸ ಮಾಡತ್ತಾರೆ. ಧರ್ಮಸ್ಥಳಕ್ಕೆ ಕಳಂಕ ತರುವ ಯಾವ ಮನಸ್ಸು ನಮಗಿಲ್ಲ. ನಾವು ನಿಷ್ಪಕ್ಷಪಾತವಾಗಿ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಧರ್ಮಸ್ಥಳ ದೇಗುಲದ ವಠಾರದಲ್ಲಿ ಸ್ಥಳ ಮಹಜರು
ನಾವು ಗ್ಯಾರಂಟಿ ನೀಡಿ ಅಭಿವೃದ್ಧಿ ಮಾಡುತ್ತಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಜನಪ್ರಿಯತೆ ಹೆಚ್ಚಾಗುತ್ತಿದೆ. ಆದರೆ ಬಿಜಪಿಯವರು ಹೊಟ್ಟೆ ಕಿಚ್ಚಿನಿಂದ ಇಲ್ಲ ಸಲ್ಲದ ಆರೋಪಗಳನ್ನು ಮಾಡತ್ತಿದ್ದಾರೆ. ನಾನು ಧರ್ಮಸ್ಥಳಕ್ಕೆ ಹಲವಾರು ಬಾರಿ ಹೋಗಿ ಮಂಜುನಾಥ ದೇವರ ಆಶೀರ್ವಾದ ಪಡೆದಿದ್ದೇನೆ ಎಂದು ಹೇಳಿದರು.
ಬುರುಡೆ ಪ್ರಕರಣದಲ್ಲಿ ನಾವು ರಾಜಕೀಯ ಮಾಡುವ ಉದ್ದೇಶ ಇಲ್ಲ. ದೂರು ಬಂದ ಹಿನ್ನೆಲೆಯಲ್ಲಿ ಸತ್ಯಾಸತ್ಯತೆ ನೋಡಿಕೊಂಡು ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ನುಡಿದರು.