ಮಂಗಳೂರು: ರಾಜ್ಯವಷ್ಟೇ ಅಲ್ಲ ಇಡೀ ದೇಶದ ಕಣ್ಣು ಧರ್ಮಸ್ಥಳದತ್ತ (Dharmasthala) ನೆಟ್ಟಿತ್ತು. ವಿದೇಶಿ ಮಾಧ್ಯಮಗಳಲ್ಲೂ ಧರ್ಮಸ್ಥಳ ಕ್ಷೇತ್ರದ ಸುದ್ದಿ ಬಿತ್ತರವಾಗಿತ್ತು. ಧರ್ಮಸ್ಥಳದ ನೇತ್ರಾವತಿ ನದಿ ತೀರ, ಅರಣ್ಯ ಪ್ರದೇಶದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ಕೈಯಲ್ಲಿ ಒಂದು ಬುರುಡೆ ಹಿಡ್ಕೊಂಡು ಪೊಲೀಸ್ ಠಾಣೆಗೆ ಬಂದ ಅಜಾನುಬಾಹು.. ಭೀಮ.. ಬುರುಡೆ ದಾಸ.. ಇದೀಗ ತಾನೇ ತೋಡಿದ ಗುಂಡಿಗೆ ಬಿದ್ದಿದ್ದಾನೆ.
ಈ ಬುರುಡೆಯ ಹೆಣ ಹೂತಿದ್ದು ನಾನೇ.. ಧರ್ಮಸ್ಥಳದ ಸುತ್ತ ಮುತ್ತ ಇನ್ನೂ ನೂರಾರು ಹೆಣಗಳನ್ನು ಹೂತಿದ್ದೇನೆ ಅಂತ ಪೊಲೀಸರ ಮುಂದೆ ಸ್ಕ್ರೀನ್ ಪ್ಲೇ ಮಾಡಿದ್ದ. ನಾನು ಶವಗಳನ್ನು ಹೂತಿಟ್ಟ ಜಾಗ ನನಗೆ ಗೊತ್ತು. ತೋರಿಸ್ತೀನಿ ಅಂತ ಕಲರ್ ಕಲರ್ ಕತೆ ಕಟ್ಟಿದ್ದ. ಸುಳ್ಳನ್ನು ತಲೆ ಮೇಲೆ ಹೊಡ್ದಂತೆ ಇಲ್ಲೇ ಹೂತಿಟ್ಟಿದ್ದೀನಿ ಅಂತ ಸ್ಥಳಗಳನ್ನು ಗುರುತಿಸಿದ್ದ. ಈಗ ಬುರೆಡೆ ಚಿನ್ನಯ್ಯನ ಬಂಡವಾಳವನ್ನ ಎಸ್‌ಐಟಿ ಪೊಲೀಸರು ಹೊರಗೆಳೆದಿದ್ದಾರೆ. ತೀವ್ರ ವಿಚಾರಣೆ ಬಳಿಕ ಆತನನ್ನ ಬಂಧಿಸಿದ್ದಾರೆ. ಇನ್ನೂ ರಾಜ್ಯ ಸರ್ಕಾರದ (Government Of Karnataka) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ (SIT) ರಚನೆ ಮಾಡಿದಾಗಿನಿಂದ ಈವರೆಗೆ ಏನೇನಾಯ್ತು ಅನ್ನೋದರ ಇಂಚಿಂಚೂ ಮಾಹಿತಿಯನ್ನ ತಿಳಿಯಬೇಕಿದ್ರೆ ಮುಂದೆ ಓದಿ…
ಟೈಮ್ ಲೈನ್ ಹೇಗಿದೆ?
ಜುಲೈ 11- ಬುರುಡೆ ಸಮೇತ ಪೊಲೀಸರ ಮುಂದೆ ಹಾಜರಾಗಿದ್ದ ಮುಸುಕುಧಾರಿ. ಇದಕ್ಕೂ ಮುನ್ನ ಜುಲೈ ಮೊದಲ ವಾರದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪತ್ರವೊಂದು ವೈರಲ್ ಆಗಿತ್ತು. ʻಧರ್ಮಸ್ಥಳದಲ್ಲಿ ನಡೆದ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶವಗಳನ್ನು ಹೂತು ಹಾಕಿದ್ದ ವ್ಯಕ್ತಿ ಶರಣಾಗತಿಗೆ ಸಿದ್ಧನಾಗಿದ್ದಾನೆʼ ಎಂದು ಹೇಳುವ ಪತ್ರ ವೈರಲ್ ಆಗಿತ್ತು. ಆ ಬಳಿಕ ಪ್ರಕರಣದ ತೀವ್ರತೆ ಹೆಚ್ಚಾಯಿತು.
ಜುಲೈ 18- ಎಸ್‌ಐಟಿ ರಚನೆಗೆ ಮನವಿ ಮಾಡಿದ್ದ ದೂರುದಾರ
ಜುಲೈ 19- ಎಸ್‌ಐಟಿ ರಚನೆ ಮಾಡಿದ್ದ ಸರ್ಕಾರ
ಜುಲೈ 25- ಮಂಗಳೂರಿಗೆ ಆಗಮಿಸಿದ್ದ ಎಸ್‌ಐಟಿ ತಂಡ
ಜುಲೈ 26, 27ರಂದು ದೂರುದಾರನ ವಿಚಾರಣೆ
ಜುಲೈ 27- ಬೆಳ್ತಂಗಡಿಯಲ್ಲಿ ಎಸ್‌ಐಟಿ ಕಚೇರಿ ಓಪನ್
ಜುಲೈ 28- ದೂರುದಾರನ ಜೊತೆ ಸ್ಥಳ ಮಹಜರು ಪ್ರಕ್ರಿಯೆ ಆರಂಭ
ಜುಲೈ 28- ನೇತ್ರಾವತಿ ಸ್ನಾನಘಟ್ಟದಲ್ಲಿ 13 ಸ್ಥಳಗಳನ್ನು ಗುರುತಿಸಿದ ದೂರುದಾರ
ಜುಲೆ 29- ದೂರುದಾರ ಗುರುತಿಸಿದ ಸ್ಥಳದಲ್ಲಿ ಅಗೆಯುವ ಪ್ರಕ್ರಿಯೆ
ಜುಲೈ 30- ಪಾಯಿಂಟ್ ನಂ.2, 3, 4ರಲ್ಲಿ ಕಾರ್ಯಾಚರಣೆ
ಜುಲೈ 31- 6ನೇ ಪಾಯಿಂಟ್ ಉತ್ಖನನ ವೇಳೆ ಎಲುಬುಗಳು ಪತ್ತೆ
ಆಗಸ್ಟ್ 1- 5ನೇ ದಿನದ ಕಾರ್ಯಾಚರಣೆ 7,8ನೇ ಸ್ಥಳದಲ್ಲಿ ಉತ್ಖನನ
ಆಗಸ್ಟ್ 2- ದೂರುದಾರ ಗುರುತಿಸಿದ 9ನೇ ಸ್ಥಳದಲ್ಲಿ ಉತ್ಖನನ.
ಆಗಸ್ಟ್ 4- ಕಾಡಿನ ಪ್ರದೇಶಕ್ಕೆ ಕರೆದೊಯ್ದ ದೂರುದಾರ
ಆಗಸ್ಟ್ 5- 11ನೇ ಸ್ಥಳದಲ್ಲಿ ಅಗೆಯುವಿಕೆ ಸಿಗದ ಕುರುಹು
ಆಗಸ್ಟ್ 6- ಧರ್ಮಸ್ಥಳದ ಗ್ರಾಮ ಪಂಚಾಯ್ತಿಯಿಂದ ದಾಖಲೆ ಪಡೆದುಕೊಂಡ ಎಸ್‌ಐಟಿ
ಆಗಸ್ಟ್ 6- ಎಸ್‌ಐಟಿ ಮುಂದೆ ಬಂದ ಮೂರನೇ ದೂರುದಾರ
ಆಗಸ್ಟ್ 6- ಮಾಸ್ಕ್ ಮ್ಯಾನ್ ಹೂತುಹಾಕುತ್ತಿದ್ದ ಸ್ಥಳಗಳನ್ನು ನೋಡಿದ್ದೇನೆ ಎಂದಿದ್ದ
ಆಗಸ್ಟ್ 8- ಹೊಸ ಸ್ಥಳದಲ್ಲಿ ಪರಿಶೀಲನೆ ಆರಂಭಿಸಿದ ಎಸ್‌ಐಟಿ ತಂಡ
ಆಗಸ್ಟ್ 9- ಎರಡನೇ ದೂರುದಾರ ಜಯಂತ್ ಟಿ. ಮಾಹಿತಿ ಕಲೆ ಹಾಕಿದ ಎಸ್‌ಐಟಿ
ಆಗಸ್ಟ್ 9- ಯೂಟ್ಯೂಬರ್‌ಗಳ ಮೇಲೆ ಹಲ್ಲೆ ಸಂಬಂಧ 6 ಮಂದಿ ಬಂಧನ
ಆಗಸ್ಟ್ 11- ಜಿ.ಪಿ.ಆರ್ ಯಂತ್ರ ಬಳಸಲು ಮುಂದಾದ ಎಸ್‌ಐಟಿ.
ಆಗಸ್ಟ್ 12- 13ನೇ ಸ್ಥಳದಲ್ಲಿ ಜಿಪಿಆರ್ ಮೂಲಕ ಪರಿಶೀಲನೆ, ಸಿಗದ ಕುರುಹು
ಆಗಸ್ಟ್ 14- ರಿಂದ ಮುಸುಕುಧಾರಿಯ ನಿರಂತರ ವಿಚಾರಣೆ
ಆಗಸ್ಟ್ 23- ತೀವ್ರ ವಿಚಾರಣೆ ಬಳಿಕ ಮುಸುಕುಧಾರಿಯ ಬಂಧನ, 10 ದಿನ ಎಸ್‌ಐಟಿ ಕಸ್ಟಡಿಗೆ ನೀಡಿದ ಕೋರ್ಟ್, ʻಧೂತʼ ಸಮೀರ್ ಬಳ್ಳಾರಿ ಮನೆಗೆ ಪೊಲೀಸ್ ನೋಟಿಸ್.