– ವೀರೇಂದ್ರ ಹೆಗ್ಗಡೆಯವರಿಗೆ ಕಾರು ಹಸ್ತಾಂತರಿಸಿದ ರಾಜಸ್ತಾನದ ನಂದಜೀ
ಮಂಗಳೂರು: ಧರ್ಮಸ್ಥಳದ ವಿಂಟೇಜ್ ಕಾರ್ ಮ್ಯೂಸಿಯಂಗೆ ಮರ್ಸಿಡಿಸ್ ಬೆನ್ಜ್ ಕಾರನ್ನು ರಾಜಸ್ತಾನದ ಸ್ವಾಮೀಜಿಯೊಬ್ಬರು ಕೊಡುಗೆ ನೀಡಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರ ವಿಂಟೇಜ್ ಕಾರ್ ಸಂಗ್ರಹದ ಅಭಿರುಚಿಯನ್ನು ನೋಡಿ ರಾಜಸ್ತಾನದ ವಿಶ್ವಗುರು ಮಹಾಮಂಡಲೇಶ್ವರ ಪರಮಹಂಸ ಸ್ವಾಮಿ ಮಹೇಶ್ವರಾನಂದಜೀ ಪ್ರಶಂಸಿದ್ದರು. ಈಗ ಅವರು 1972ರ ಮೋಡೆಲ್‍ನ ಮರ್ಸಿಡಿಸ್ ಬೆನ್ಜ್ ಕಾರನ್ನು ವೀರೇಂದ್ರ ಹೆಗ್ಗಡೆ ಅವರಿಗೆ ಕೊಡುಗೆಯಾಗಿ ನೀಡಿದರು.
Advertisement
Advertisement
280 ಎಸ್.ಮಾದರಿಯ ಈ ಅತ್ಯುತ್ತಮ ಕಾರುನ್ನು ಸ್ವತಃ ಸ್ವಾಮಿಯವರು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಹೆಗ್ಗಡೆ ಅವರ ನಿವಾಸಕ್ಕೆ ಬಂದು ಕಾರಿನ ಕೀ ಹಸ್ತಾಂತರಿದ್ದಾರೆ. ಈ ಮೂಲಕ ಕಾರನ್ನು ಕೊಡುಗೆಯಾಗಿ ನೀಡಿದರು. ಬಳಿಕ ವೀರೆಂದ್ರ ಹೆಗ್ಗಡೆಯವರು ಕಾರನ್ನು ಚಲಾಯಿಸಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ಹೆಗ್ಗಡೆಯವರು ಸ್ವಾಮೀಜಿಯವರನ್ನು ಗೌರವಿಸಿದರು. ಈ ಸಂದರ್ಭ ಡಿ.ಹರ್ಷೇಂದ್ರ ಕುಮಾರ್ ಜೊತೆಗಿದ್ದರು.
Advertisement
ಕೆಲವು ವರ್ಷಗಳ ಹಿಂದೆ ಜಾಗತಿಕ ಯೋಗ ಸಮ್ಮೇಳನ ಉದ್ಘಾಟಿಸಲು ಸ್ವಾಮೀಜಿ ಧರ್ಮಸ್ಥಳಕ್ಕೆ ಬಂದಾಗ ಇಲ್ಲಿನ ಕಾರ್ ಮ್ಯೂಸಿಯಂ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸ್ವಾಮೀಜಿ ಯುರೋಪ್ ಖಂಡದ ಆಸ್ಟ್ರೀಯಾ ದೇಶದಲ್ಲಿ ತಮ್ಮ ಆಶ್ರಮ ಪ್ರಾರಂಭಿಸಿ ಅಲ್ಲಿ ಯೋಗ ಪ್ರಚಾರ ಮತ್ತು ಧರ್ಮ ಪ್ರಭಾವನಾ ಕಾರ್ಯದಲ್ಲಿ ನಿರತರಾಗಿದ್ದಾರೆ.