ದಾವಣಗೆರೆ: ಧರ್ಮಸ್ಥಳದ (Dharmasthala) ಧರ್ಮಾಧಿಕಾರಿಯಾದ ವೀರೇಂದ್ರ ಹೆಗಡೆಯವರು ಸರ್ಕಾರ ಮಾಡುವ ಕೆಲಸವನ್ನು ಕೂಡ ಅವರೇ ಮಾಡಿಕೊಂಡು ಬರುತ್ತಿದ್ದಾರೆ ಎಂದು ಶಾಸಕ ಶಿವಗಂಗಾ ಬಸವರಾಜ್ (Shivaganga Basavaraj) ಕೊಂಡಾಡಿದ್ದಾರೆ.
ಚನ್ನಗಿರಿಯಲ್ಲಿ ಅವರು ಮಾತನಾಡಿದರು. ಈ ವೇಳೆ, ಧರ್ಮಸ್ಥಳದ ಮೇಲೆ ಬಂದ ಈ ಅರೋಪವನ್ನು ನಂಬಲು ಅಸಾದ್ಯವಾಗಿದೆ. ಏಕೆ ಅರೋಪ ಮಾಡ್ತಾರೆ ಅಂತ ಗೊತ್ತಿಲ್ಲ. ಎಸ್ ಐಟಿ ತನಿಖೆ ನಡೆಯುತ್ತಿದೆ. ಇದುವರೆಗೂ ಯಾವುದೇ ಆಧಾರಗಳು ಸಿಕ್ಕಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಗುಂಪು ಘರ್ಷಣೆ – 6 ಆರೋಪಿಗಳು ಅರೆಸ್ಟ್
ಶವಗಳು ಕೂಡ ಸಿಕ್ಕಿಲ್ಲ. ಇದರ ಹಿಂದೆ ಕಾಣದ ಕೈಗಳು ಪಿತೂರಿ ನಡೆಯುತ್ತಿದೆ. ಧರ್ಮಸ್ಥಳ ನಮ್ಮ ರಾಜ್ಯದ ಜನತೆಯ ಧಾರ್ಮಿಕ ಭಕ್ತ ಕೇಂದ್ರವಾಗಿದೆ. ಅದ್ದರಿಂದ ಅದರ ಮೇಲೆ ಪಿತೂರಿ ನಡೆಸುತ್ತಿದ್ದವರು ವಿರುದ್ದ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: 11ನೇ ದಿನವೂ ಎಸ್‌ಐಟಿಗೆ ಸಿಗಲಿಲ್ಲ ಕುರುಹು – ಸೋಮವಾರವೂ ಮುಂದುವರಿಯಲಿದೆ ಕಾರ್ಯಾಚರಣೆ