– ನಾನು ಸಂಪರ್ಕಿಸಿಲ್ಲ, ಅವರೇ ಮನೆಗೆ ಬಂದು ಸಂಪರ್ಕಿಸಿದ್ದರು
– ನನ್ನ ಫೋನ್ ಐಸ್‌ಐಟಿ ವಶದಲ್ಲಿದೆ
ಬೆಂಗಳೂರು: ನನ್ನನ್ನು ಅವರು ದೆಹಲಿಗೆ (Delhi) ಕರೆದುಕೊಂಡು ಹೋಗಿದ್ದರು. ನಾನು ಎಲ್ಲವನ್ನೂ ವಿಶೇಷ ತನಿಖಾ ತಂಡದ (SIT) ಪೊಲೀಸರಿಗೆ ತಿಳಿಸಿದ್ದೇನೆ ಎಂದು ಸುಜಾತ ಭಟ್ (Sujatha Bhat) ಹೇಳಿದ್ದಾರೆ.
ಎಸ್‌ಐಟಿ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸುಜಾತ ಭಟ್ ಅವರನ್ನು ಪಬ್ಲಿಕ್ ಟಿವಿ ದೂರವಾಣಿ ಮೂಲಕ ಮಾತನಾಡಿಸಿತು. ಈ ವೇಳೆ ಅವರು ಹಲವು ವಿಚಾರಗಳನ್ನು ಎಸ್‌ಐಟಿಗೆ ತಿಳಿಸಿರುವುದಾಗಿ ನುಡಿದರು.
ಮಾತನಾಡುವಾಗ ಅವರು ಅಂದರೆ ಯಾರು ಎಂಬ ಪ್ರಶ್ನೆಗೆ ಸುಜಾತ ಭಟ್ ಉತ್ತರ ನೀಡಲಿಲ್ಲ. ಪದೇ ಪದೇ ಅವ್ರು ಹೇಳಿದ್ರು, ಅವ್ರು ದೆಹಲಿಗೆ ಕರೆದುಕೊಂಡು ಹೋದರು. ಅವ್ರು ಮನೆಗೆ ಬಂದಿದ್ರು ಎಂದು ಹೇಳುತ್ತಿದ್ದರು. ಇದನ್ನೂ ಓದಿ:ಚಿನ್ನಯ್ಯ ಈಗ ಡಬಲ್ ಗೇಮ್ ಆಡುತ್ತಿದ್ದಾನೆ: ಜಯಂತ್
ಸುಜಾತ ಭಟ್ ಹೇಳಿದ್ದೇನು?
ಎಸ್‌ಐಟಿ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. ನನ್ನ ಅಧ್ಯಾಯ ಮುಗಿದಿದ್ದು ನಾನು ಇನ್ನು ಮುಂದೆ ಯಾವುದಕ್ಕೂ ಮುಂದೆ ಹೋಗುವುದಿಲ್ಲ.
ನನ್ನ ಫೋನ್ ಎಸ್‌ಐಟಿಯಲ್ಲಿದೆ. ಅವರು ನನ್ನ ಕಾಲ್ ರೆಕಾರ್ಡ್ ಎಲ್ಲವನ್ನು ಈಗ ನೋಡುತ್ತಿರಬಹುದು. 15 ದಿನ ಬಿಟ್ಟು ತೆಗೆದುಕೊಳ್ಳುವುದಕ್ಕೆ ಹೇಳಿದ್ದಾರೆ. ನಾನು ತಪ್ಪು ಮಾಡಿದ್ದೇನೆ. ಆದರೆ ಯಾರೂ ಬೇಕು ಎಂದು ತಪ್ಪುಮಾಡುವುದಿಲ್ಲ. ಹಣೆ ಬರಹ ಹಾಳಾದಾಗ ಹೀಗೆ ಆಗುತ್ತದೆ. ಇದನ್ನೂ ಓದಿ:ಬುರುಡೆ ಗ್ಯಾಂಗ್‌ನ ಷಡ್ಯಂತ್ರ ರೂಪುಗೊಂಡಿದ್ದೇ ಬೆಂಗಳೂರಿನ ಲಾಡ್ಜ್‌ನಲ್ಲಿ!
ಚಿನ್ನಯ್ಯನನ್ನು ಬಾಡಿಗಾರ್ಡ್ ಎಂದು ಹೇಳಿ ಪರಿಚಯಿಸಿದ್ದರು. ನನ್ನನ್ನು ಅವರು ದೆಹಲಿಗೆ ಕರೆದುಕೊಂಡು ಹೋಗಿದ್ದರು. ದೆಹಲಿಯಲ್ಲಿ ನಾನು ವಕೀಲರ ಬಳಿ ಮಾತನಾಡಿಲ್ಲ. ಆದರೆ ಒಂದು ಕಡೆ ಕಾರಿನಲ್ಲಿ ಕೂರಿಸುತ್ತಿದ್ದರು. ಯಾರ ಜೊತೆ ಅವರು ಏನು ಮಾತನಾಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ನಾನು ನಡೆದ ಎಲ್ಲಾ ವಿಚಾರವನ್ನು ವಿವರವಾಗಿ ತಿಳಿಸಿದ್ದೇನೆ. ಈ ಹೋರಾಟಕ್ಕೆ ನಾನು ಯಾರನ್ನು ಸಂಪರ್ಕ ಮಾಡಿರಲಿಲ್ಲ. ಆದರೆ ಅವರೇ ನನ್ನ ಮನೆಗೆ ಬಂದು ಸಂಪರ್ಕ ಮಾಡಿದ್ದರು.
ನನ್ನ ಬಳಿ ಯಾವುದನ್ನೂ ಕೂಲಂಕಷವಾಗಿ ಹೇಳಿಲ್ಲ. ನಾನು ಬೇರೆ ರೀತಿಯಲ್ಲಿ ಹೋರಾಟ ಮಾಡುತ್ತಿದ್ದೆ. ಆದರೆ ನನ್ನನ್ನು ಅವರು ಬಳಸಿಕೊಂಡಿದ್ದಾರೆ ಎಂಬ ನೋವು ನನಗೆ ಇದೆ. ಮುಂದೆ ವೃದ್ದಾಶ್ರಮನೋ ಏನೋ ನೋಡಬೇಕು. ನನಗೆ ಇದರಿಂದ ಹೊರಗೆ ಬರಲು ಕಾಲಾವಕಾಶ ಬೇಕು.
ಆಸ್ತಿ ಗಲಾಟೆ ವಿವರ, ನನ್ನ ಬದುಕಿನ ಎಲ್ಲಾ ವಿವರವನ್ನು ಕೇಳಿದ್ದಾರೆ. ವಾಸಂತಿ ಬದುಕಿದ್ದಾಳೆ ಸತ್ತಿಲ್ಲ. ಅವಳ ಸಾವಿನ ಬಗ್ಗೆ ಅನುಮಾನ ಇದೆ ಎಂದಿದ್ದೇನೆ ಎಂದು ಹೇಳಿದರು.
ವಿಚಾರಣೆಯಿಂದ ನನಗೆ ಮುಕ್ತಿ ಕೊಡಿ ಎಂದು ಕೇಳಿದ್ದೇನೆ. ಎಸ್‌ಐಟಿ ಅವರು ಬಹಳ ಚೆನ್ನಾಗಿ ನಡೆಸಿಕೊಂಡಿದ್ದಾರೆ. ಬಸ್ ಟಿಕೇಟ್ ಕೂಡ ಅವರೇ ಬುಕ್ ಮಾಡಿ ನೀಡಿದ್ದಾರೆ. ದೂರನ್ನು ನಾನು ಹಿಂದಕ್ಕೆ ಪಡೆದುಕೊಳ್ಳುವುದಿಲ್ಲ.