– ತನಿಖಾಧಿಕಾರಿಗಳಿಗೆ ತಲೆನೋವಾದ ಸುಜಾತಾ ಭಟ್
– ಮಟ್ಟಣ್ಣನವರ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು
ಮಂಗಳೂರು: ಧರ್ಮಸ್ಥಳ ಕೇಸ್‌ನ *(Dharmasthala Case) ಬುರುಡೆ ಗ್ಯಾಂಗ್‌ನ ಷಡ್ಯಂತ್ರ ಬಯಲಾದ ಬಳಿಕ ಎಸ್‌ಐಟಿ ತನಿಖೆ ಮುಂದುವರಿಸಿದೆ. ಕಳೆದ 4 ದಿನಗಳಿಂದ ತಲೆಮರೆಸಿಕೊಂಡಿದ್ದ ಬುರುಡೆ ಗ್ಯಾಂಗ್ ಲೀಡರ್ ಮಹೇಶ್ ಶೆಟ್ಟಿ ತಿಮರೋಡಿ ಇವತ್ತು ಪ್ರತ್ಯಕ್ಷರಾಗಿದ್ದಾರೆ.
ಕಳೆದ ಮಂಗಳವಾರ ಮಹೇಶ್ ತಿಮರೋಡಿ ಮನೆಗೆ ಚಿನ್ನಯ್ಯನನ್ನ ಕರೆದುಕೊಂಡು ಬಂದು ಶೋಧ ನಡೆಸಲಾಗಿತ್ತು. ಉಜಿರೆ ಮನೆಯಲ್ಲಿ ಮುಸುಕುಧಾರಿ ಚಿನ್ನಯ್ಯನಿಗೆ ಆಶ್ರಯ ಕೊಟ್ಟಿದ್ದ ವಿಚಾರದಲ್ಲಿ ಬೆಳ್ತಂಗಡಿ ಪೊಲೀಸರು (Belthangady Police) ಸ್ಥಳ ಮಹಜರಿಗೆ ಬರೋದು ಗೊತ್ತಾಗ್ತಿದ್ದಂತೆ ತಿಮರೋಡಿ ತಮ್ಮ ಮನೆಯಿಂದ ಜಾಗ ಖಾಲಿ ಮಾಡಿದ್ದರು. ಆವತ್ತು ಎಸ್ಕೇಪ್ ಆದವ್ರು ಇವತ್ತು ಸೀದಾ ಬೆಳ್ತಂಗಡಿ ಪೊಲೀಸ್ ಠಾಣೆ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಬ್ರಹ್ಮಾವರ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಪ್ರಕರಣದಲ್ಲಿ ಮತ್ತೆ ವಿಚಾರಣೆಗೆ ಹಾಜರಾಗಿದ್ದಾರೆ. ಬಳಿಕ ಅಲ್ಲಿಂದ ಎಸ್‌ಐಟಿ (SIT) ಕಚೇರಿಗೂ ತೆರಳಿ ವಿಚಾರಣೆ ಎದುರಿಸಿದ್ದಾರೆ. ಇದನ್ನೂ ಓದಿ: ಹೆಣ್ಣುಮಕ್ಕಳು ಎಂತಹ ಹೋರಾಟಕ್ಕೂ ತಯಾರಿದ್ದಾರೆ, ಆದ್ರೆ ಅಗತ್ಯವಿಲ್ಲ – ಡಿ.ವೀರೇಂದ್ರ ಹೆಗ್ಗಡೆ
ಅಂದ್ಹಾಗೆ ಈ ಹಿಂದೆ ಚಿನ್ನಯ್ಯ ವಿಚಾರಣೆಗೆ ಬರುತ್ತಿದ್ದ ಕಾರಿನಲ್ಲೇ ತಿಮರೋಡಿ ಬಂದಿದ್ದಾರೆ. ಅಲ್ಲದೇ ಇವತ್ತು ಗಿರೀಶ್ ಮಟ್ಟಣ್ಣನವರ್ ಎಸ್‌ಐಟಿ ಮುಂದೆ ಹಾಜರಾಗಿದ್ದಾರೆ. ತನಿಖೆಗೆ ಪೂರಕವಾದ ದಾಖಲೆ ನೀಡಲು ಅವಕಾಶ ನೀಡಿ ಎಂದು ಮೊನ್ನೆ ಇಮೇಲ್ ಮೂಲಕ ಮನವಿ ಮಾಡಿದ್ದರು. ತನಿಖೆಗೆ ಪೂರಕವಾದ ದಾಖಲೆ, ಲ್ಯಾಪ್‌ಟ್ಯಾಪ್, ಪೆನ್‌ಡ್ರೈವ್ ಜೊತೆ ವಿಚಾರಣೆಗೆ ಹಾಜರಾಗಿದ್ದಾರೆ. ಬಳಿಕ ಮಾತನಾಡಿದ ಗಿರೀಶ್ ಮಟ್ಟಣ್ಣನವರ್, ನನ್ನ ಬಳಿ ಇರುವ ದಾಖಲೆಗಳನ್ನ ನೀಡಿದ್ದೇನೆ. ಚಿನ್ನಯ್ಯ 164 ಹೇಳಿಕೆ ಹಿಂದೆ ಸರಿದ ಬಗ್ಗೆ ತನಿಖೆ ಆಗಬೇಕು ಎಂದಿದ್ದಾರೆ. ಈ ನಡುವೆ ಬುರುಡೆ ಪ್ರಕರಣದ ಪಾತ್ರಧಾರಿ ಚಿನ್ನಯ್ಯನನ್ನ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ವಿಚಾರಣೆ ನಡೆಸಿದ್ದಾರೆ.
ಚಿನ್ನಯ್ಯ, ಆತನ ಅಣ್ಣ ತಾನಾಸಿ ಮಗ ಪುರುಷೋತ್ತಮ್ ಕೂಡ ವಿಚಾರಣೆಗೆ ಹಾಜರಾಗಿದ್ದಾನೆ. ಹಾಗೆಯೇ ಚಿನ್ನಯ್ಯ ಮತ್ತು ಪತ್ನಿ ಮಲ್ಲಿಕಾ ಬ್ಯಾಂಕ್ ಅಕೌಂಟ್ ಜಾಲಾಡಿದ್ದಾರೆ. ಈ ನಡುವೆ ವಿಕ್ಷಗಳು ಬುರುಡೆ ಪ್ರಕರಣವನ್ನ ಎನ್‌ಐಎ ಹೆಗಲಿಗೆ ವಹಿಸುವಂತೆ ಪಟ್ಟು ಹಿಡಿದಿವೆ. ಇದನ್ನೂ ಓದಿ: ಬೆಳ್ತಂಗಡಿ ಪೊಲೀಸ್ ಠಾಣೆಗೆ ಆಗಮಿಸಿದ ಮಹೇಶ್ ಶೆಟ್ಟಿ ತಿಮರೋಡಿ
ಅನಾರೋಗ್ಯ ನೆಪ – ವಿಚಾರಣೆಗೆ ಗೈರಾದ ಸಮೀರ್
AI ಮೂಲಕ ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಿ ಜನರನ್ನ ಯಾಮಾರಿಸಿದ್ದ ಯೂಟ್ಯೂಬರ್ ಸಮೀರ್ ಇವತ್ತು ವಿಚಾರಣೆಗೆ ಹಾಜರಾಗಬೇಕಿತ್ತು. ಅನಾರೋಗ್ಯ ನೆಪ ಹೇಳಿ ಗೈರಾಗಿದ್ದಾನೆ. ಮತ್ತೊಂದು ದಿನ ವಿಚಾರಣೆಗೆ ಹಾಜರಾಗಲು ಆತನ ಪರ ವಕೀಲರು ಅನುಮತಿ ಕೇಳಿದ್ದಾರೆ. ಸಮೀರ್ ಆದಾಯ ಮೂಲ ಕೆದಕುತ್ತಿರುವ ಎಸ್‌ಐಟಿ, ಅಕೌಂಟ್ ಡಿಟೇಲ್ಸ್ ಕೆದಕಿದ್ದಾರೆ. ಒಂದು ಎಐ ವಿಡಿಯೋಗೆ ತಗಲುವ ಖರ್ಚೆಷ್ಟು? ಒಂದು ವಿಡಿಯೋ ಸಿಗೋ ಆದಾಯವೆಷ್ಟು ಅನ್ನೋ ಮಾಹಿತಿ ಕೇಳಿದ್ದಾರೆ. ಪೊಲೀಸರ ಪ್ರಶ್ನೆಗೆ ಸಮೀರ್, ಐನೂರು, 1 ಸಾವಿರ ಖರ್ಚು ಮಾಡಿ ಎಐ ವಿಡಿಯೋ ಮಾಡ್ತಿರೋದಾಗಿ ಹೇಳಿದ್ದಾನೆ. ಈ ಮಧ್ಯೆ, ಸಮೀರ್ ವಿಡಿಯೋ ಬಗ್ಗೆ ಮುಸ್ಲಿಂ ವ್ಯಕ್ತಿ, ನಾವೇ ಈ ವಿಡಿಯೋ ನಂಬಲ್ಲ. ನೀವ್ಯಾಕೆ ನಂಬುತ್ತೀರಿ ಅಂತ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ತಿಮರೋಡಿ ತೋಟದಲ್ಲಿ ಸಿಕ್ತಾ ಚಿನ್ನಯ್ಯ ತಂದ ಬುರುಡೆ?
ಮಟ್ಟಣ್ಣನವರ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಹೂಡಿದ ಬುರುಡೆ ಗ್ಯಾಂಗ್‌ನ ಗಿರೀಶ್ ಮಟ್ಟಣ್ಣನವರ್‌ಗೆ ಮತ್ತೊಂದು ಶಾಕ್ ಎದುರಾಗಿದೆ. ಧರ್ಮಸ್ಥಳದಲ್ಲಿ ನಡೆಯುವ ಸಾಮೂಹಿಕ ಮದುವೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪ ಹಿನ್ನೆಲೆ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಭೇಟಿಯಾಗಿ ವಿಡಿಯೋ ಸಹಿತ ದೂರು ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಹೆಣ್ಣುಮಕ್ಕಳ ಘನತೆಗೆ ಧಕ್ಕೆ ತಂದಿದ್ದು, ಧರ್ಮಸ್ಥಳ ಭಕ್ತರ ಬಗ್ಗೆ ಹೀನವಾಗಿ ಮಾತಾಡಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಲಾಗಿದೆ. ದೂರು ಸ್ವೀಕರಿಸಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ಹೆಣ್ಣು ಮಗಳ ಚಾರಿತ್ರಿಕ ವಧೆ ಮಾಡಿದ್ರೆ ಪೊಲೀಸ್ ಆಯುಕ್ತರಿಗೆ ಎಫ್ ಐಆರ್ ಮಾಡಲು ಸೂಚಿಸುತ್ತೇನೆ ಎಂದಿದ್ದಾರೆ.