ಬೆಂಗಳೂರು: ಧರ್ಮಸ್ಥಳ ದೇವಸ್ಥಾನದ (Dharmasthala Temple) ವಿರುದ್ಧ ಎಐ ವಿಡಿಯೋ ಮಾಡಿ ಕಲರ್ ಕಲರ್ ಕಾಗೆ ಹಾರಿಸಿದ್ದ ಯೂಟ್ಯೂಬರ್ ಸಮೀರ್ (Youtuber Sameer) ಮೇಲೆ ಮತ್ತೆ ಮೂರು ಎಫ್‌ಐಆರ್ ದಾಖಲಾಗಿದೆ.
ಒಂದು ಪ್ರಕರಣದಲ್ಲಿ ಮಂಗಳೂರು (Mangaluru) ನ್ಯಾಯಾಲಯದಿಂದ ಜಾಮೀನು (Bail) ಸಿಕ್ಕ ಬಳಿಕ ಸಮೀರ್‌ಗೆ ಬಲ ಬಂದಿತ್ತು. ಜಾಮೀನು ಸಿಕ್ಕಿದ ಬಳಿಕ ನಾನು ಏನೇ ಮಾಡಿದರೂ ನಾನು ನಡೆಯುತ್ತಿದ್ದೆ ಎಂಬ ಭಂಡ ಧೈರ್ಯದಿಂದ ಲೈವ್‌ಗೆ ಬಂದಿದ್ದ.
ಈಗ ಸುಜಾತ ಭಟ್ (Sujatha Bhat) ನನಗೆ ಮಗಳೇ ಇಲ್ಲ. ಅನನ್ಯಾ ಭಟ್ (Ananya Bhat) ಪಾತ್ರವನ್ನು ಗಿರೀಶ್ ಮಟ್ಟಣ್ಣನವರ್ ಮತ್ತು ಜಯಂತ್ ಹೇಳಿದ್ದಂತೆ ನಾನು ಹೇಳಿದ್ದೆ ಎಂದು ಹೇಳಿದ ಬೆನ್ನಲ್ಲೇ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿತ್ತು. ಇದನ್ನೂ ಓದಿ:Dharmasthala Case |ಎಸ್‌ಐಟಿಯಿಂದ ಮಾಸ್ಕ್ ಮ್ಯಾನ್‌ಅರೆಸ್ಟ್
ಈಗ ಮುಸುಕುಧಾರಿ ಚಿನ್ನಯ್ಯನನ್ನು ವಿಶೇಷ ತನಿಖಾ ತಂಡ (SIT) ಬಂಧಿಸಿದ ಬೆನ್ನಲ್ಲೇ ಸಮೀರ್‌ಗೆ ಬಂಧನ ಭೀತಿ ಎದುರಾಗಿದೆ. ಇನ್ನೊಂದು ಕಡೆ ಜಾರಿ ನಿರ್ದೇಶನಾಲಯ (ED) ಕೂಡ ದಾಖಲೆಗಳನ್ನು ಕೆದಕಲು ಆರಂಭಿಸಿದೆ.
ಈಗಾಗಲೇ ಪೊಲೀಸರು ಬಳ್ಳಾರಿಯ ನಿವಾಸಕ್ಕೆ ತೆರಳಿ ನೋಟಿಸ್ ಅಂಟಿಸಿದ್ದಾರೆ. ಬಂಧನ ಭೀತಿಯಲ್ಲಿರುವ ಸಮೀರ್ ಈಗ ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ.
ಒಂದು ಪ್ರಕರಣದಲ್ಲಿ ಜಾಮೀನು ಪಡೆದಿರುವ ಸಮೀರ್ ನಾಳೆ ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗಬೇಕಿದೆ. ಒಂದು ವೇಳೆ ನಾಳೆ ವಿಚಾರಣೆಗೆ ಹಾಜರಾಗದೇ ಇದ್ದರೆ ಕೋರ್ಟ್ ಆದೇಶ ಉಲ್ಲಂಘನೆಯಾಗಿ ನ್ಯಾಯಾಂಗ ನಿಂದನೆಯಾಗಲಿದೆ.