* ಕೋರ್ಟ್‌ನಲ್ಲಿ 10-15 ದಿನ ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ
ಮಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ (Dharmasthala Case) ಸಂಬಂಧಿಸಿದಂತೆ ಮಾಸ್ಕ್ ಮ್ಯಾನ್ ಚಿನ್ನಯ್ಯನ (Chinnayya) ಎಸ್‌ಐಟಿ ಕಸ್ಟಡಿ ಬುಧವಾರಕ್ಕೆ ಅಂತ್ಯ ಆಗಲಿದೆ. ನಾಳೆ ಚಿನ್ನಯ್ಯನನ್ನು ಕೋರ್ಟ್‌ಗೆ ಹಾಜರುಪಡಿಸಲಾಗುವುದು.
ಚಿನ್ನಯ್ಯ ಕಳೆದ 10 ದಿನಗಳಿಂದ ಎಸ್‌ಐಟಿ ಕಸ್ಟಡಿಯಲ್ಲಿದ್ದ. ನಾಳೆ ಆರೋಪಿಯನ್ನು ಬೆಳ್ತಂಗಡಿ ಕೋರ್ಟಿಗೆ ಹಾಜರುಪಡಿಸಲಾಗುವುದು. ಚಿನ್ನಯ್ಯ ವಾಸವಿದ್ದ ಮಂಡ್ಯ-ತಮಿಳುನಾಡು ಸ್ಥಳ ಮಹಜರು ಬಾಕಿ ಇದೆ. ಹೀಗಾಗಿ, ಮತ್ತೆ 10 ರಿಂದ 15 ದಿನ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ಇದನ್ನೂ ಓದಿ: ಧರ್ಮಸ್ಥಳ ಪರ ಬಿಜೆಪಿ `ಧರ್ಮ’ ಸಮರ – ಎನ್‌ಐಎ ತನಿಖೆಗೆ ವಹಿಸುವಂತೆ ಆಗ್ರಹ
ನಿನ್ನೆ ಕೂಡ ಸಂಜೆ 7 ಗಂಟೆ ಬಳಿಕ ಎಸ್‌ಐಟಿ ಸ್ಥಳ ಮಹಜರು ನಡೆಸಿತ್ತು. ಮತ್ತೆ ವಶಕ್ಕೆ ಪಡೆದು ಮಂಡ್ಯ-ತಮಿಳುನಾಡು ಭೇಟಿ ಸಾಧ್ಯತೆ ಇದೆ. ಇವತ್ತು ಚಿನ್ನಯ್ಯನನ್ನು ಮತ್ತಷ್ಟು ತೀವ್ರ ವಿಚಾರಣೆಗೆ ಒಳಪಡಿಸಲಿದೆ.
ಧರ್ಮಸ್ಥಳದ ಭಾಗದಲ್ಲಿ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನಯ್ಯನ ವಿಚಾರಣೆ ನಡೆದಿತ್ತು. ಆತ ತೋರಿಸಿದ ಸ್ಥಳಗಳಲ್ಲಿ ಶವಗಳ ಉತ್ಖನನ ನಡೆದಿತ್ತು. ಎರಡು ಸ್ಥಳಗಳಲ್ಲಿ ಬಿಟ್ಟರೆ, ಇನ್ಯಾವ ಕಡೆಯೂ ಯಾವುದೇ ಕುರುಹು ದೊರೆಯಲಿಲ್ಲ. ಇದಾದ ಬಳಿಕ ಹೆಚ್ಚಿನ ವಿಚಾರಣೆಗೆ ಚಿನ್ನಯ್ಯನನ್ನು ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಪಿತೂರಿಗೆ ವಿದೇಶದಿಂದ ಫಂಡಿಂಗ್ – ಎನ್‌ಐಎ ತನಿಖೆಗೆ ಬಿವೈವಿ ಒತ್ತಾಯ