Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಧರ್ಮಸ್ಥಳ ಕೇಸ್‌- ತಿಮರೋಡಿ, ಮಟ್ಟಣ್ಣನವರ್‌, ಜಯಂತ್‌, ವಿಠಲ ಗೌಡ, ಜಯಂತ್‌ ಪಾತ್ರ ಏನು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಧರ್ಮಸ್ಥಳ ಕೇಸ್‌- ತಿಮರೋಡಿ, ಮಟ್ಟಣ್ಣನವರ್‌, ಜಯಂತ್‌, ವಿಠಲ ಗೌಡ, ಜಯಂತ್‌ ಪಾತ್ರ ಏನು?

Bengaluru City

ಧರ್ಮಸ್ಥಳ ಕೇಸ್‌- ತಿಮರೋಡಿ, ಮಟ್ಟಣ್ಣನವರ್‌, ಜಯಂತ್‌, ವಿಠಲ ಗೌಡ, ಜಯಂತ್‌ ಪಾತ್ರ ಏನು?

Public TV
Last updated: December 10, 2025 12:54 pm
Public TV
Share
3 Min Read
Dharmasthala Case Mahesh Shetty Thimarodi Mattannavar Jayant Vitthala Gowda Jayants role criminal conspiracy
SHARE

– ಬೆಳ್ತಂಗಡಿ ನ್ಯಾಯಾಲಯಕ್ಕೆ ಎಸ್‌ಐಟಿ ಪ್ರಾಥಮಿಕ ವರದಿ ಸಲ್ಲಿಕೆ
– ನ್ಯಾಯಾಲಯದ ದಿಕ್ಕು ತಪ್ಪಿಸಿದ 6 ಆರೋಪಿಗಳು

ಬೆಂಗಳೂರು: ಧರ್ಮಸ್ಥಳ(Dharmasthala) ಕ್ಷೇತ್ರದ ವಿರುದ್ಧ ಮಹೇಶ್‌ ಶೆಟ್ಟಿ ತಿಮರೋಡಿ (Mahesh Shetty Thimarodi) ಮನೆಯಲ್ಲೇ ಪಿತೂರಿ ನಡೆಸಲಾಗಿದೆ ಎಂದು ವಿಶೇಷ ತನಿಖಾ ತಂಡ (SIT) ಹೇಳಿದೆ.

ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸಿದ ಎಸ್‌ಐಟಿ ನ.20 ರಂದು ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ತನಿಖಾ ಪ್ರಾಥಮಿಕ ವರದಿ ಸಲ್ಲಿಸಿತ್ತು. ಈ ತನಿಖಾ ವರದಿಯಲ್ಲಿ 6 ಮಂದಿ ಯಾವ ರೀತಿ ನ್ಯಾಯಾಲಯದ (Court) ದಾರಿ ತಪ್ಪಿಸಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಉಲ್ಲೇಖಿಸಲಾಗಿದೆ.

ಯಾರೆಲ್ಲಾ ಆರೋಪಿಗಳು?
ಎ1 – ಚಿನ್ನಯ್ಯ
ಎ2 – ಮಹೇಶ್‌ ಶೆಟ್ಟಿ ತಿಮರೋಡಿ
ಎ3 – ಗಿರೀಶ್‌ ಮಟ್ಟಣ್ಣನವರ್‌
ಎ4 – ವಿಠಲ ಗೌಡ
ಎ5 – ಜಯಂತ್‌ ಟಿ
ಎ6 – ಸುಜಾತ ಭಟ್‌

ತಿಮರೋಡಿ ಪಾತ್ರ ಏನು?
ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲೇ ಒಳಸಂಚು ಮಾಡಿ ಚಿನ್ನಯ್ಯನಿಗೆ ಆಮಿಷವೊಡ್ಡಿ ದೂರು ಕೊಡಿಸಲಾಗಿದೆ. ಯಾವುದೋ ತಲೆಬುರುಡೆಯನ್ನು ಚಿನ್ನಯ್ಯನೇ ಹೂತಿದ್ದ ಬುರುಡೆ ಎಂದು ಬಿಂಬಿಸುವ ಪ್ರಯತ್ನ ಮಾಡಲಾಗಿತ್ತು. ಅನನ್ಯ ಭಟ್‌ ಪಾತ್ರ ಸೃಷ್ಟಿಯ ಹಿಂದೆ ತಿಮರೋಡಿ ಕೈವಾಡವಿದೆ. ತಿಮರೋಡಿ ಮಾತು ಕೇಳಿ ಮಗಳು ಕಾಣೆಯಾಗಿದ್ದಾಳೆಂದು ಸುಜಾತ ಭಟ್ ದೂರು ನೀಡಿದ್ದರು. ಕಪಟ ಕಾರ್ಯತಂತ್ರದ ರೂವಾರಿಯೇ ತಿಮರೋಡಿ ಎಂದು ಎಸ್‌ಐಟಿ ಉಲ್ಲೇಖಿಸಿದೆ. ಇದನ್ನೂ ಓದಿ:  ಹಣ ಪಡೆದು ಬುರುಡೆ ಕಥೆ ಕಟ್ಟಿದ್ದ ಚಿನ್ನಯ್ಯ – ಎಸ್‌ಐಟಿ ವರದಿಯಲ್ಲಿ ಏನಿದೆ?

 

ಮಟ್ಟಣ್ಣನವರ್ ಸಂಚು ಏನು?
ವಿಠಲ ಗೌಡನ(Vittal Gowda) ಮೂಲಕ ಬಂಗ್ಲೆಗುಡ್ಡದಿಂದ ತಲೆ ಬುರುಡೆ ತರಿಸಿ ಅದನ್ನು ಬೆಂಗಳೂರಿನ ಅಪಾರ್ಟ್ ಮೆಂಟ್‌ನ ಸೆಕ್ಯೂರಿಟಿ ಗಾರ್ಡ್ ರೂಮಿನಲ್ಲಿ ಇಡಲಾಗಿತ್ತು. ಬಳಿಕ ಆ ತಲೆ ಬುರುಡೆಯನ್ನು ಜಯಂತ್‌ಗೆ ಕೊಟ್ಟು ದೆಹಲಿಗೆ ತರಿಸಿಕೊಳ್ಳಲಾಗಿತ್ತು.

ತಲೆ ಬುರುಡೆ ಸಮೇತ ಸುಪ್ರೀಂ ಕೋರ್ಟ್‌ಗೆ ದೂರು ನೀಡಲು ಪ್ರಯತ್ನ ನಡೆಸಲಾಗಿತ್ತು. ಪ್ರಯತ್ನ ವಿಫಲವಾದ ಹಿನ್ನೆಲೆಯಲ್ಲಿ ಅದೇ ಬುರುಡೆಯನ್ನು ತಿಮರೋಡಿ ಮನೆಗೆ ತರಿಸಲಾಗಿತ್ತು. ಚಿನ್ನಯ್ಯನಿಗೆ ಸುಳ್ಳು ದೂರು ನೀಡುವಂತೆ ಹಣವನ್ನು ನೀಡಲಾಗಿತ್ತು. ಬುರುಡೆಯನ್ನು ತರುವುದು ಮತ್ತು ಹಸಿ ಹಸಿ ಸುಳ್ಳು ದೂರು ಕೊಡಿಸುವುದರಲ್ಲಿ ಗಿರೀಶ್ ಮಟ್ಟಣ್ಣನವರ್ ಪಾತ್ರ ದೊಡ್ಡದು. ಸುಜಾತಾ ಭಟ್ ಮಗಳ ಕಥೆ ಸೃಷ್ಟಿ ಹಿಂದೆಯೂ ಮಟ್ಟಣ್ಣನವರ್ ಕೈವಾಡವಿದೆ.

ಉಳಿದ ಆರೋಪಿಗಳ ಪಾತ್ರ ಏನು?
ಎ4 ವಿಠ್ಠಲ ಗೌಡ, ಎ5 ಜಯಂತ್ ಟಿ ಇಬ್ಬರೂ ಸಂಚಿನ ಭಾಗವೇ ಆಗಿದ್ದಾರೆ. ವಿಠಲ್‌ ಗೌಡ ಬಂಗ್ಲೆ ಗುಡ್ಡದಿಂದ ತಲೆ ಬುರುಡೆ ತಂದು ಆ ತಲೆ ಬುರುಡೆಯನ್ನು ಗಿರೀಶ್ ಮಟ್ಟಣ್ಣನವರ್‌ಗೆ ನೀಡಿದ ನಂತರ ಒಂದೊಂದೆ ಸಂಚು ರೂಪಿಸಲಾಗುತ್ತದೆ.

ದೂರುದಾರ ಚಿನ್ನಯ್ಯನ್ನನ್ನು ತಿಮರೋಡಿ ಮನೆಗೆ ಕರೆ ತಂದು ಸಭೆ ನಡೆಸಿ ಮುಂದೆ ಯಾವ ರೀತಿ ಈ ಪ್ರಕರಣವನ್ನು ತೆಗೆದುಕೊಂಡು ಹೋಗಬೇಕು ಎನ್ನುವುದರ ಬಗ್ಗೆ ಮಾತನಾಡುತ್ತಾರೆ. ಮಟ್ಟಣ್ಣನವರ್ ಅಣತಿಯಂತೆ ಬುರುಡೆಯನ್ನು ಮನೆಯಲ್ಲಿಟ್ಟ ಬಳಿಕ ರೈಲಿನಲ್ಲಿ ದೆಹಲಿಗೆ ತೆಗೆದುಕೊಂಡು ಹೋಗಲಾಗಿತ್ತು.

ಧರ್ಮಸ್ಥಳದ ವಿರುದ್ಧ ಒಳಸಂಚಿನಲ್ಲಿ ಜಯಂತ್ ನೇರ ಭಾಗಿಯಾಗಿರುವುದು ದೃಢಪಟ್ಟಿದೆ. ಅನನ್ಯ ಭಟ್ ಪಾತ್ರ ಸೃಷ್ಟಿಸಿ ಸುಳ್ಳು ಕಥೆ ಕಟ್ಟಿದ್ದ ಸುಜಾತ ಭಟ್ ಪ್ರಕರಣದಲ್ಲಿ ಆರನೇ ಆರೋಪಿಯಾಗಿದ್ದಾರೆ ಎಂದು ಎಸ್‌ಐಟಿ ತನ್ನ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ.

ಚಾರ್ಜ್‌ಶೀಟ್‌ ಸಲ್ಲಿಕೆಯಾಗಿಲ್ಲ:
ಎಸ್‌ಐಟಿ ಪೂರ್ಣ ಪ್ರಮಾಣದ ಆರೋಪ ಪಟ್ಟಿ ಸಲ್ಲಿಕೆ ಮಾಡಿಲ್ಲ. ಈಗ ಸಲ್ಲಿಕೆ ಮಾಡಿರುವುದು ಕೇವಲ ಪ್ರಾಥಮಿಕ ತನಿಖಾ ವರದಿ ಅಷ್ಟೇ. ತನಿಖೆಗೆ ಉಳಿದ ಆರೋಪಿಗಳು ಅಸಹಕಾರ ನೀಡುತ್ತಿದ್ದಾರೆ. ಕೆಲವೊಂದು ತಾಂತ್ರಿಕ ಸಾಕ್ಷಿಗಳ ವರದಿ ಬರಬೇಕಿದೆ. ತನಿಖೆ ಪೂರ್ಣಗೊಂಡ ನಂತರ ಅಂತಿಮ ವರದಿ ಸಲ್ಲಿಕೆ ಮಾಡಲಾಗುತ್ತದೆ ಎಂದು ಎಸ್‌ಐಟಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದೆ.

TAGGED:dharmasthalasitVittal Gowdaಎಸ್‍ಐಟಿಧರ್ಮಸ್ಥಳವಿಠಲ ಗೌಡ
Share This Article
Facebook Whatsapp Whatsapp Telegram

Cinema news

chandanavana film critics academy awards
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ – ಅತಿ ಹೆಚ್ಚು ನಾಮನಿರ್ದೇಶಿತರು ಯಾರು?
Cinema Latest Sandalwood Top Stories
Aamir Khan birthday
ಗರ್ಲ್‌ಫ್ರೆಂಡ್‌, ಮಾಜಿ ಪತ್ನಿಯರ ಜೊತೆ ಸೇರಿ ಹುಟ್ಟುಹಬ್ಬ ಆಚರಿಸಿಕೊಂಡ ಆಮೀರ್‌ ಖಾನ್‌
Bollywood Cinema Latest Top Stories
vijay thalapathy
ಕರೂರ್‌ ಕಾಲ್ತುಳಿತ ಕೇಸ್‌ – CBI ಮುಂದೆ ವಿಚಾರಣೆಗೆ ಹಾಜರಾದ ವಿಜಯ್‌
Cinema Latest Main Post South cinema
Anushka Shetty
ಸ್ವೀಟಿ ಅನುಷ್ಕಾಗೆ ಕಂಕಣ ಭಾಗ್ಯ – ಬೆಂಗಳೂರು ಮೂಲದ ಉದ್ಯಮಿ ಜೊತೆ ಮದ್ವೆ?
Cinema Latest South cinema

You Might Also Like

Cylinder Shortage Mudigere School
Chikkamagaluru

ಶಾಲೆ ಬಿಸಿಯೂಟಕ್ಕೂ ತಟ್ಟಿದ ಗ್ಯಾಸ್‌ ಅಭಾವದ ಬಿಸಿ – ಸೌದೆ ಒಲೆಯಲ್ಲೇ ಅಡುಗೆ ಮಾಡಿದ ಸಿಬ್ಬಂದಿ

Public TV
By Public TV
9 minutes ago
LPG
Bengaluru City

ಹೋಟೆಲ್‌ಗಳಿಗೆ ಸದ್ಯಕ್ಕೆ ಗ್ಯಾಸ್ ಪೂರೈಕೆ ಇಲ್ಲ – ಹೋಟೆಲ್ ಉದ್ಯಮಕ್ಕೆ ಮತ್ತೆ ಸರ್ಕಾರ ಶಾಕ್

Public TV
By Public TV
15 minutes ago
Shivalik Ship
Latest

ಕೊಲ್ಲಿ ಯುದ್ಧದ ನಡುವೆ ಭಾರತಕ್ಕೆ 45,000 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತು ತಂದ ಶಿವಾಲಿಕ್‌ ಹಡಗು

Public TV
By Public TV
52 minutes ago
gas tanker udupi
Latest

ಉಡುಪಿ ಕಟಪಾಡಿಯಲ್ಲಿ ಮಗುಚಿ ಬಿದ್ದ ಗ್ಯಾಸ್ ಟ್ಯಾಂಕರ್

Public TV
By Public TV
55 minutes ago
petrol machine
Latest

ಮಧ್ಯಪ್ರಾಚ್ಯದಲ್ಲಿ ಸಂಘರ್ಷ: ನೇಪಾಳದಲ್ಲೀಗ ಲೀಟರ್‌ ಪೆಟ್ರೋಲ್‌ಗೆ 188 ರೂ., ಡೀಸೆಲ್‌ಗೆ 196 ರೂ.

Public TV
By Public TV
1 hour ago
Chitradurga Murder
Chitradurga

ಜಗಳ ಬಿಡಿಸಲು ಮುಂದಾದ ವ್ಯಕ್ತಿಗೆ ಮಚ್ಚಿನಿಂದ ಹಲ್ಲೆ; ಗಂಡ – ಹೆಂಡತಿ ಜಗಳದಲ್ಲಿ ಅಮಾಯಕ ಬಲಿ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?