ಬೆಂಗಳೂರು: ಧರ್ಮಸ್ಥಳ ಕೇಸ್‌ನಲ್ಲಿ (Dharmasthala Case) ಬುರುಡೆ ಗ್ಯಾಂಗ್‌ಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ನವೆಂಬರ್ 12ರವರೆಗೆ ತನಿಖೆಗೆ ತಡೆ ನೀಡಿ ಹೈಕೋರ್ಟ್ (High Court) ಆದೇಶ ನೀಡಿದೆ.
ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣ ರದ್ದುಕೋರಿ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್.ಟಿ ಹಾಗೂ ವಿಠಲ್ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು ಹೈಕೋರ್ಟ್‌ನ ನ್ಯಾ.ಮಹಮ್ಮದ್ ನವಾಜ್ ನೇತೃತ್ವದ ಏಕಸದಸ್ಯ ಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಕೀಲರು, 9 ಬಾರಿ ನೋಟೀಸ್ ನೀಡಿದ್ದು, 9 ಬಾರಿಯೂ ವಿಚಾರಣೆಗೆ ಹಾಜರಾಗಿದ್ದಾರೆ. ಬೆಳಗ್ಗೆ ಇಂದ ಸಂಜೆಯ ತನಕ ತನಿಖಾಧಿಕಾರಿ ಮುಂದೆ ವಿಚಾರಣೆಗೆ ಒಳಪಟ್ಟಿದ್ದಾರೆ. 150 ಗಂಟೆಗೂ ಹೆಚ್ಚು ಕಾಲ ವಿಚಾರಣೆಯಲ್ಲಿ ಭಾಗಿಯಾಗಿದ್ದಾರೆ. ಬೇರೆ ಬೇರೆ ಸೆಕ್ಷನ್ ಅಲ್ಲಿ ವಿಚಾರಣೆಗೆ ಕರೆಯುತ್ತಾ ಇದ್ದಾರೆ. ಈ ಪ್ರಕರಣದಲ್ಲಿ ಅರ್ಜಿದಾರರು ಹೇಳುವುದು ಇನ್ನೇನು ಇಲ್ಲ ಎಂದು ವಾದ ಮಾಡಿದರು. ಅರ್ಜಿದಾರರು ಆರೋಪಿಗಳಾಗಿದ್ದಾರಾ ಎಂದು ಜಡ್ಜ್ ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ವಕೀಲರು ಆರೋಪಿಗಳು ಆಗಿಲ್ಲ, ಸಾಕ್ಷಿಗಳು ಆಗಿಲ್ಲ ಎಂದರು. ಇದನ್ನೂ ಓದಿ: ಕರೂರು ಕಾಲ್ತುಳಿತ ನಡೆದ ಸ್ಥಳಕ್ಕೆ ಭೇಟಿ ನೀಡಲಿದೆ ಸುಪ್ರೀಂ ಕೋರ್ಟ್ ಸಮಿತಿ
ರಾಜಕೀಯ ದ್ವೇಷ, ಧರ್ಮ ದ್ವೇಷ ಎಲ್ಲ ಇದರಲ್ಲಿ ಇದೆ. ನೋಟಿಸ್ ಕೊಟ್ಟು ಬೆಳಗ್ಗೆ ಇಂದ ಸಂಜೆ ತನಕ ಕೂರಿಸುತ್ತಿದ್ದಾರೆ. ಇದಕ್ಕೆ ವಿಚಾರಣೆಗೆ ಯಾಕೆ ಹೋಗಬೇಕು? ಪ್ರಕರಣ ದಾಖಲಿಸುವಾಗ ಪೊಲೀಸರು ಪ್ರಕ್ರಿಯೆ ಪಾಲಿಸಿಲ್ಲ ಅಂತಾ ಇದೇ ವೇಳೆ ಅರ್ಜಿದಾರ ಪರ ವಕೀಲರು ವಾದಿಸಿದರು. ಈಗಾಗಲೇ ಸಾಕಷ್ಟು ನೋಟಿಸ್ ನೀಡಿದ್ದೀರಿ ಅಲ್ವಾ ಎಂದು ಸರ್ಕಾರಿ ಪರ ವಕೀಲ ಜಗದೀಶ್‌ಗೆ ಜಡ್ಜ್ ಪ್ರಶ್ನೆ ಮಾಡಿದರು. ಇದನ್ನೂ ಓದಿ: 1,545 ಕೋಟಿ ನೆರೆ ಪರಿಹಾರ ಕೇಳಲು ಕೇಂದ್ರಕ್ಕೆ ಮನವಿ: ಕ್ಯಾಬಿನೆಟ್ ಸಭೆ ನಿರ್ಧಾರ
ಪ್ರತಿವಾದ ಆರಂಭಿಸಿದ ಎಸ್ಪಿಪಿ ಜಗದೀಶ್, 164 ಹೇಳಿಕೆಯನ್ನು ಚಿನ್ನಯ್ಯ ಮ್ಯಾಜಿಸ್ಟ್ರೇಟ್ ಮುಂದೆಯೇ ನೀಡಿದ್ದಾನೆ. ಇದೇ ಚಾಂಪಿಯನ್‌ಗಳು ದೂರು ದಾಖಲಿಸಲು ಎಸ್ಪಿ, ಸರ್ಕಾರವನ್ನ ಭೇಟಿ ಮಾಡಿ ತನಿಖೆಗೆ ಒತ್ತಾಯಿಸಿದ್ದರು. ಇದೇ ವ್ಯಕ್ತಿಗಳು ದೂರುದಾರಿಗೆ ಆಶ್ರಯ ನೀಡಿದ್ದರು. ಇದೇ ವ್ಯಕ್ತಿಗಳಿಂದ ತಪ್ಪು ಮಾಹಿತಿ ನೀಡಿದ್ದಾಗಿ ಚಿನ್ನಯ್ಯ ಹೇಳಿದ್ದಾನೆ. ಅರ್ಜಿದಾರರು ತನಿಖೆ ನಡೆಸುವಾಗ ಕೂಡ ತೊಂದರೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ವಾದ ಮಂಡಿಸಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಮುಂದಿನ ವಿಚಾರಣೆವರೆಗೂ ತನಿಖೆಗೆ ತಡೆ ನೀಡಿ ನವೆಂಬರ್ 12ಕ್ಕೆ ವಿಚಾರಣೆ ಮುಂದೂಡಿದರು. ಇದನ್ನೂ ಓದಿ: 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ – ನಟ ಪ್ರಕಾಶ್ ರಾಜ್ ಸೇರಿ 70 ಸಾಧಕರಿಗೆ ಗೌರವ
 


 
		 
		 
		 
		 
		
 
		 
		 
		 
		