ಶಿವಮೊಗ್ಗ: ಧರ್ಮಸ್ಥಳ ಷ್ಯಡ್ಯಂತ್ರ ಪ್ರಕರಣದ (Dharmasthala Case) ಪ್ರಮುಖ ಆರೋಪಿಯಾಗಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ (Chinnaiah) ಇಂದು ಶಿವಮೊಗ್ಗದ ಸೋಗಾನೆ ಬಳಿ ಇರುವ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ.
ಸೆಪ್ಟೆಂಬರ್ 9 ರಂದು ಶಿವಮೊಗ್ಗ (Shivamogga) ಸೋಗಾನೆ ಬಳಿ ಇರುವ ಕೇಂದ್ರ ಕಾರಾಗೃಹಕ್ಕೆ ಬೆಳ್ತಂಗಡಿ ಜೆಎಂಎಫ್‌ಸಿ ಕೋರ್ಟ್ ಅದೇಶದ ಹಿನ್ನಲೆ ಶಿವಮೊಗ್ಗಕ್ಕೆ ಶಿಫ್ಟ್ ಆಗಿದ್ದ ಚಿನ್ನಯ್ಯ ಕಾರಾಗೃಹದ ಕಾವೇರಿ ಬ್ಯಾರಕ್‌ನಲ್ಲಿದ್ದ. ಅಲ್ಲದೇ ಚಿನ್ನಯ್ಯನಿಗೆ ಕಳೆದ ನವೆಂಬರ್ 24 ರಂದು ಬೆಳ್ತಂಗಡಿ ನ್ಯಾಯಾಲಯ 12 ಷರತ್ತುಗಳನ್ನ ವಿಧಿಸಿ ಒಂದು ಲಕ್ಷ ಬಾಂಡ್ ಇಬ್ಬರು ಸ್ಥಳೀರು ಶೂರಿಟಿ ಪಡೆಯಬೇಕು ಎಂದು ಜಾಮೀನು ಮಂಜೂರು ಮಾಡಿತ್ತು. ಆದರೆ ಜಾಮೀನು ಮಂಜೂರಾಗಿ 24 ದಿನ ಕಳೆದರೂ ಕೂಡ ಶೂರಿಟಿ ನೀಡಲು ಯಾರು ಮುಂದೆ ಬಾರದ ಕಾರಣ ಶಿವಮೊಗ್ಗ ಕಾರಾಗೃಹದಲ್ಲೇ ಚಿನ್ನಯ್ಯ ಇರಬೇಕಾಯಿತು. ಇಂದು ಚಿನ್ನಯ್ಯನಿಗೆಬಿಡುಗಡೆ ಭಾಗಿ ಸಿಕ್ಕಿದ್ದು ಬೆಳಗ್ಗೆ 8-30ರ ಸುಮಾರಿಗೆ ಚಿನ್ನಯ್ಯನಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಇದನ್ನೂ ಓದಿ: ಅಡ್ಡಾದಿಡ್ಡಿ ಕಾರು ಚಾಲನೆ – ಬಿಇ ವಿದ್ಯಾರ್ಥಿ ಎಡವಟ್ಟಿಗೆ ವೃದ್ಧ ಬಲಿ
ಇಂದು ಬೆಳಗ್ಗೆ ಶಿವಮೊಗ್ಗದ ಸೋಗಾನೆ ಬಳಿ ಇರುವ ಕೇಂದ್ರ ಕಾರಾಗೃಹಕ್ಕೆ ಇನ್ನೋವಾ ಕಾರಿನಲ್ಲಿ ಚಿನ್ನಯ್ಯನ ಪತ್ನಿ ಮಲ್ಲಿಕಾ ಸೇರಿದಂತೆ ಐದು ಜನರು ಆಗಮಿಸಿ ಕಾರಾಗೃಹದೊಳಗೆ ಹೋದರು. ಕ್ಯಾಮೆರಾಗಳನ್ನು ನೋಡುತ್ತಿದ್ದಂತೆ ಚಿನ್ನಯ್ಯನ ಪತ್ನಿ ತಲೆಮೇಲೆ ಸೆರಗು ಮುಚ್ಚಿಕೊಂಡು ಜೈಲಿನೊಳಗೆ ಹೊರಟರು. ಜೈಲಿನಲ್ಲಿ ಬಿಡುಗಡೆ ಪ್ರಕ್ರಿಯೇಗಳನ್ನು ಮುಗಿಸಿ ಪತಿ ಚಿನ್ನಯ್ಯನನ್ನು ಕರೆದುಕೊಂಡು ಅವಸರದಿಂದಲೇ ಹೊರಟು ಹೋದರು. ಇದನ್ನೂ ಓದಿ: ಮುಡಾ ಕೇಸ್ – ಸಿಎಂ ಸಿದ್ದರಾಮಯ್ಯಗೆ ಇಂದು ಬಿಗ್ ಡೇ
ಶಿವಮೊಗ್ಗ ಕಾರಾಗೃಹದಲ್ಲಿ ಒಂದು ಗಂಟೆಗೂ ಅಧಿಕ ಕಾಲ ಬಿಡುಗಡೆ ಪ್ರಕ್ರಿಯೆ ನಡೆಯಿತು. ಒಟ್ಟಿನಲ್ಲಿ ಜಾಮೀನು ಮಂಜೂರಾಗಿ 24 ದಿನಗಳ ಬಳಿಗೆ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಇದನ್ನೂ ಓದಿ: ಕೋಳಿ ಮೊಟ್ಟೆ ಸೇವಿಸಿದ್ರೆ ಕ್ಯಾನ್ಸರ್ ಬರುತ್ತಾ? ʻಪಬ್ಲಿಕ್ ಟಿವಿʼ ರಿಯಾಲಿಟಿ ಚೆಕ್


