ಮಂಗಳೂರು: ಧರ್ಮಸ್ಥಳ ಬುರುಡೆ ರಹಸ್ಯ (Dharmasthala Burial Case) ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (SIT) ಈಗ ಇಬ್ಬರ ಹೇಳಿಕೆಯಿಂದ ಗೊಂದಲ ಉಂಟಾಗಿದೆ.
ಹೌದು, ಈಗಾಗಲೇ ನಡೆದಿರುವ ಕಾರ್ಯಾಚರಣೆ ಬಗ್ಗೆ ಸಾಕ್ಷಿ ಹೇಳಲು ಇಂದು ಇಬ್ಬರು ಸಾಕ್ಷಿದಾರರು ಬೆಳ್ತಂಗಡಿಯ (Belthangady) ಎಸ್‌ಐಟಿ ಕಚೇರಿ ಮುಂದೆ ಬಂದಿದ್ದಾರೆ. ಈ ಪೈಕಿ ಒಬ್ಬರು ಅನಾಮಿಕ ವ್ಯಕ್ತಿಯೇ ಹೆಣಗಳನ್ನು ಹೂತು ಹಾಕಿದ್ದಾನೆ ಎಂದು ಹೇಳಿದ್ದರೆ ಮತ್ತೊಬ್ಬ ವ್ಯಕ್ತಿ ಹೆಣ ಹೂತು ಹಾಕಿದ ವ್ಯಕ್ತಿಯೇ ಬೇರೆ, ಈ ವ್ಯಕ್ತಿಯೇ ಬೇರೆ ಎಂಂದು ದೂರು ನೀಡಿದ್ದಾರೆ. ಈ ಇಬ್ಬರ ದೂರುಗಳನ್ನು ಸ್ವೀಕರಿಸಿದ ಬಳಿಕ ಎಸ್‌ಐಟಿ ಅಧಿಕಾರಿಗಳು ಈಗ ಗೊಂದಲಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡೋರನ್ನ ಗುಂಡಿಕ್ಕಿ ಕೊಲ್ಲಿ: ರೇಣುಕಾಚಾರ್ಯ
ತುಕಾರಾಂ ಗೌಡ ಅವರು ಮಾತನಾಡಿ, ಅನಾಮಿಕ ವ್ಯಕ್ತಿಯ ಪರಿಚಯವೇ ಇಲ್ಲ. ಹೆಣ ಹೂತು ಹಾಕಿದ ವ್ಯಕ್ತಿಗಳು ಬೇರೆ. ಈ ವ್ಯಕ್ತಿಯೇ ಬೇರೆ. ನಾನು ಹೆಣ ಹೂತು ಹಾಕುವುದನ್ನು ನೋಡಿದ್ದೇನೆ ಎಂದು ತಿಳಿಸಿದ್ದಾರೆ. ಬೇರೆ ಪಾಯಿಂಟ್‌ಗಳಲ್ಲಿ ಹೆಣ ಹೂತಿರೋದಕ್ಕೆ ನಾನೇ ಸಾಕ್ಷಿ ಎಂದಿದ್ದಾರೆ.
ಪುರಂದರ ಗೌಡ ಮಾತನಾಡಿ, ನಾನು ಅಂಗಡಿಯಲ್ಲಿ ಕುಳಿತಿದ್ದಾಗ ಪಾಯಿಂಟ್ ನಂಬರ್ 1 ಹಾಗೂ 13 ರಲ್ಲಿ ಹೆಣ ಹೂತಾಕುವುದನ್ನು ನಾನು ನೋಡಿದ್ದೇನೆ. ಈ ಅನಾಮಿಕ ವ್ಯಕ್ತಿಯೇ ಅಂದು ಹೆಣ ಹೂತು ಹಾಕಿದ್ದಾನೆ ಎಂದು ಹೇಳಿದ್ದಾರೆ.
ಈ ಇಬ್ಬರ ಹೇಳಿಕೆಯಿಂದ ಎಸ್‌ಐಟಿ ಅಧಿಕಾರಿಗಳಿಗೆ ಗೊಂದಲವಾಗಿದ್ದು ಅಗತ್ಯ ಬಿದ್ದರೆ ವಾಪಸ್ ಕರೆಸಿಕೊಳ್ಳುತ್ತೇವೆ ಎಂದು ಹೇಳಿ ಇಬ್ಬರನ್ನು ಕಳುಹಿಸಿದ್ದಾರೆ.