ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್ – ಪ್ರಣವ್ ಮೊಹಾಂತಿ ನೇತೃತ್ವದಲ್ಲಿ ಮುಂದುವರಿದ ದೂರುದಾರನ ವಿಚಾರಣೆ

Public TV
2 Min Read
Dharmasthala Case

– ಶನಿವಾರ ನಡೆದ 8 ಗಂಟೆಗಳ ವಿಚಾರಣೆ ಬಳಿಕ ಇಂದು ಮತ್ತೆ ದೂರುದಾರನಿಗೆ ಬುಲಾವ್

ಮಂಗಳೂರು: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ ಸಂಬಂಧ ಎಸ್‌ಐಟಿ ತಂಡ ಇಂದು (ಜು.27) ದೂರುದಾರನಿಗೆ ಮತ್ತೆ ವಿಚಾರಣೆಗೆ ಬರುವಂತೆ ತಿಳಿಸಿದ್ದು, ಖುದ್ದು ಎಸ್‌ಐಟಿ (SIT) ಮುಖ್ಯಸ್ಥ ಡಿಜಿಪಿ ಪ್ರಣವ್ ಮೊಹಾಂತಿ (Pranav Mohanty) ಅವರು ವಿಚಾರಣೆ ನಡೆಸಿದ್ದಾರೆ.

ಎಸ್‌ಐಟಿ ತಂಡ ಶನಿವಾರ (ಜು.26) ಅನಾಮಧೇಯ ವ್ಯಕ್ತಿ ಕೊಟ್ಟ ಹೇಳಿಕೆ ಆಧರಿಸಿ ತನಿಖೆ ಆರಂಭಿಸಿತ್ತು. ಬಳಿಕ ದೂರುದಾರನನ್ನು ಸುಮಾರು 8 ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಇಂದು ಮತ್ತೆ ದೂರುದಾರನಿಗೆ ಮಲ್ಲಿಕಟ್ಟೆಯ ಐಬಿಯಲ್ಲಿರುವ ಎಸ್‌ಐಟಿ ಕಚೇರಿಗೆ ವಿಚಾರಣೆಗಾಗಿ ಬರುವಂತೆ ಸೂಚಿಸಿದ್ದಾರೆ. ಇದೀಗ ಡಿಜಿಪಿ ಪ್ರಣವ್ ಮೊಹಾಂತಿ, ಡಿಐಜಿ ಅನುಚೇತ್ ಹಾಗೂ ಎಸ್ಪಿ ಜಿತೇಂದ್ರ ದಯಾಮ ನೇತೃತ್ವದಲ್ಲಿ ವಿಚಾರಣೆ ಆರಂಭವಾಗಿದೆ.ಇದನ್ನೂ ಓದಿ: ಧರ್ಮಸ್ಥಳ ಫೈಲ್ಸ್‌ | ತನಿಖೆಗಿಳಿದ ಎಸ್‌ಐಟಿ – 8 ತಾಸು ದೂರುದಾರನ ವಿಚಾರಣೆ

ಈಗಾಗಲೇ ಡಿಜಿಪಿ ಪ್ರಣವ್ ಮೊಹಾಂತಿ ಅವರು ಡಿಐಜಿ ಅನುಚೇತ್ ಅವರಿಂದ ಶನಿವಾರ ನಡೆದ ವಿಚಾರಣೆ ವೇಳೆ ದೂರುದಾರ ನೀಡಿದ ಹೇಳಿಕೆ, ಆತ ನೀಡಿದ ದೂರು, ಎಫ್‌ಐಆರ್ ಸೇರಿದಂತೆ ಎಲ್ಲ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಶನಿವಾರ ನಡೆದ ವಿಚಾರಣೆಯಲ್ಲಿ ದೂರುದಾರ ಹೇಳಿದ್ದೇನು?
ದೂರುದಾರ ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ಶವ ಹೂತಿಟ್ಟ ಜಾಗಗಳನ್ನು ತೋರಿಸಲು ಸಿದ್ಧನಿದ್ದೇನೆ ಅಂತ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ.

ದೂರುದಾರನಿಗೆ ಎಸ್‌ಐಟಿ ಪ್ರಶ್ನೆ ಏನು?
* ಯಾವ್ಯಾವ ವರ್ಷದಲ್ಲಿ ಎಷ್ಟು ಶವ ಹೂತಿದ್ದೀರಾ?
* ಯಾವ ಪ್ರದೇಶದಲ್ಲಿ ಶವ ಹೂತು ಹಾಕಿದ್ದೀರಿ?
* ಶವ ಹೂತಿರುವ ಜಾಗವನ್ನು ತೋರಿಸುತ್ತೀರಾ?
* ನಿಮಗೆ ಯಾರಾದರೂ ಬೆದರಿಕೆ/ಒತ್ತಡ ಹಾಕಿದ್ರಾ?
* ನಿಮಗೆ ಶವಗಳನ್ನು ತೋರಿಸಿದ್ದು ಯಾರು?
* ಕಾರಿನಲ್ಲಿ ಶವಗಳನ್ನು ತಂದಿದ್ಯಾರು?
* ಶವಗಳನ್ನು ತಂದಾಗ ಯಾವ ಸ್ಥಿತಿಯಲ್ಲಿದ್ದವು?
* ಹೂತಿಟ್ಟ ಶವಗಳಲ್ಲಿ ಮಹಿಳೆಯ ಶವಗಳೆಷ್ಟು?
* ಅಂದೇ ಪೊಲೀಸರ ಗಮನಕ್ಕೆ ಯಾಕೆ ತರಲಿಲ್ಲ?
* ನೀವು ಧರ್ಮಸ್ಥಳ ಬಿಟ್ಟು ಹೋಗಿದ್ಯಾಕೆ?
* 20 ವರ್ಷಗಳ ಬಳಿಕ ನಿಮಗೆ ಸ್ಥಳ ನೆನಪಿದ್ಯಾ?
* ಇದೇ ಸ್ಥಳ ಅಂತ ಹೇಗೆ ಹೇಳಬಲ್ಲಿರಾ?

ದೂರುದಾರನ ಉತ್ತರವೇನು?
ಪಾಪಪ್ರಜ್ಞೆ ಕಾಡುತ್ತಿದೆ. ನಾನು ಹೇಳಿದ್ದೆಲ್ಲವೂ ಸತ್ಯ. ನಾನು ಶವ ಹೂತಿಟ್ಟ ಜಾಗ ತೋರಿಸುತ್ತೇನೆ. ನನಗೆ ಎಲ್ಲವೂ ನೆನಪಿದೆ. ಹೂತಿಟ್ಟ ಶವಗಳಲ್ಲಿ ಮಹಿಳೆಯರದ್ದೇ ಹೆಚ್ಚು, ಕೆಲ ಮಹಿಳೆಯರ ಶವಗಳು ನಗ್ನ ಸ್ಥಿತಿಯಲ್ಲಿದ್ದವು. ಇವೆಲ್ಲ ಅನಾಥ ಶವಗಳು ಅಂತ ನಾನು ಭಾವಿಸಿದ್ದೆ. ಅನಂತರ ನನಗೆ ಅನುಮಾನ ಬರಲು ಶುರುವಾಯ್ತು. ನನಗೆ ಯಾರ ಭಯವೂ, ಒತ್ತಡವೂ ಇಲ್ಲ. ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಿ ಎಂದು ಹೇಳಿದ್ದಾನೆ.ಇದನ್ನೂ ಓದಿ: ಧರ್ಮಸ್ಥಳ ಶವಗಳ ಹೂತಿಟ್ಟ ಪ್ರಕರಣ – ಇಂದಿನಿಂದ ಎಸ್‌ಐಟಿ ತನಿಖೆ ಆರಂಭ

Share This Article