– ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಧರ್ಮಸ್ಥಳ ದೇಗುಲಕ್ಕೆ ಭಕ್ತರ ದಂಡು
ಬೆಂಗಳೂರು: ಧರ್ಮಸ್ಥಳದ (Dharmasthala) ವಿರುದ್ಧ ಪಿತೂರಿ ನಡೆಸಿ ಕಂಡ ಕಂಡಲೆಲ್ಲ ಕೈ ತೋರಿಸಿ ಗುಂಡಿ ಅಗೆಸಿದ್ದ ಮುಸುಕುಧಾರಿಯನ್ನ ಎಸ್‌ಐಟಿ ಬಂಧಿಸಿದೆ. ಸದ್ಯ ಎಸ್‌ಐಟಿ ವಶದಲ್ಲಿರುವ ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಫುಲ್ ಗ್ರಿಲ್ ಮಾಡಲಾಗ್ತಿದೆ. ಪಾತ್ರಧಾರಿ ಅರೆಸ್ಟ್ ಆಗಿದ್ದು ಸೂತ್ರಧಾರಿಗಳಿಗೂ ಢವಢವ ಶುರುವಾಗಿದೆ.
ಈ ನಡ್ವೆ ಧಾರ್ಮಿಕ ಶ್ರದ್ಧಾ ಕೇಂದ್ರ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ದ ನಿರಾಧಾರ ಆರೋಪ ಮಾಡುತ್ತಾ ವ್ಯವಸ್ಥಿತ ಷಡ್ಯಂತ್ರ ನಡೆದಿರುವುದನ್ನು ಖಂಡಿಸಿ ಇಂದು ಫೀಡಂ ಪಾರ್ಕ್‌ನಲ್ಲಿ (Freedom Park) ಬೆಳಗ್ಗೆ 11 ಗಂಟೆಗೆ ಧರ್ಮ ಸಂರಕ್ಷಣಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದನ್ನೂ ಓದಿ: ಶ್ರಾವಣ ಕೊನೆ ಶನಿವಾರ – ಅಂಜನಾದ್ರಿಗೆ ಹರಿದು ಬಂದ ಭಕ್ತ ಸಾಗರ
ಈ ಸಮಾವೇಶವನ್ನು ಪುಣ್ಯ ಕ್ಷೇತ್ರ ಸಂರಕ್ಷಣಾ ಸಮಿತಿಯಿಂದ ಆಯೋಜಿಸಲಾಗಿದ್ದು, ಬೆಂಗಳೂರಿನ ಧರ್ಮಸ್ಥಳ ಭಕ್ತರು ಹಾಗೂ ಬೆಂಗಳೂರು ಸುತ್ತಮುತ್ತಲಿನ ಊರುಗಳ ಭಕ್ತರು ಆಗಮಿಸಲಿದ್ಧಾರೆ.
ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರ ಆಗಮನ
ಇನ್ನೂ ಬುರುಡೆ ರಹಸ್ಯ ಬಯಲಾದ ಬೆನ್ನಲ್ಲೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ದೇಗುಲಕ್ಕೆ ಭಕ್ತರು ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಧರ್ಮ ಉಳಿಯಬೇಕು, ಅಪಪ್ರಚಾರ ನಿಲ್ಲಬೇಕು ಎಂದು ಆಗ್ರಹಿಸುತ್ತಿದ್ದಾರೆ. ಇದನ್ನೂ ಓದಿ: ಗಣೇಶ ಹಬ್ಬ, ಈದ್ ಮಿಲಾದ್‌ಗೆ ಡಿಜೆ ನಿಷೇಧ; ಪೊಲೀಸರ ನಿರ್ಧಾರಕ್ಕೆ ಹೈಕೋರ್ಟ್ ಅಸ್ತು
ಧರ್ಮಸ್ಥಳ ಭಕ್ತರಿಂದ ಆಕ್ರೋಶ
ಧರ್ಮಸ್ಥಳ ವಿಚಾರಕ್ಕೆ ನಡೆದ ಬೆಳವಣಿಗೆಗಳ ಬಗ್ಗೆ ಬೆಂಗಳೂರಿಗರಿನಲ್ಲಿ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳ ವಿರುದ್ಧವಾಗಿ ದೊಡ್ಡಮಟ್ಟದ ಷಡ್ಯಂತ್ರ ನಡೆದಿದ್ದು ಬಯಲಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಬಂದ ವೀಡಿಯೊಗಳನ್ನೇ ಸತ್ಯ ಎಂದು ಅಂದು ಕೊಡಿದ್ವಿ. ಈಗ ನಮಗೆ ನಾಚಿಕೆಯಾಗುತ್ತಿದೆ. ಚಿಕ್ಕಂದಿನಿಂದ ವರ್ಷಕ್ಕೆ ಒಮ್ಮೆ ಧರ್ಮಸ್ಥಳಕ್ಕೆ ಹೋಗುತ್ತಿದ್ವಿ. ಆದ್ರೆ, ಇನ್ಮೇಲೆ ಇನ್ನೂ ಹೆಚ್ಚಾಗಿ ಧರ್ಮಸ್ಥಳಕ್ಕೆ ಹೋಗಬೇಕು. ತನಿಖೆ ನಡೆಯುತ್ತಿದೆ, ನಡೆಯಲಿ. ಅದನ್ನ ಬಿಟ್ಟು ಈ ರೀತಿ ಇಲ್ಲಸಲ್ಲದ ಆರೋಪ ಮಾಡಬಾರದು. ನಾವೆಲ್ಲ ಧರ್ಮಸ್ಥಳದ ಪರವಾಗಿದ್ದೇವೆ ಎಂದು ಬೆಂಗಳೂರಿನ ಜನ ʻಪಬ್ಲಿಕ್ ಟಿವಿʼಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.