ವಿಭಿನ್ನ ಕಥಾಹಂದರ ಹೊಂದಿರುವ ’ರೋನಿ’ (Ronnie) ಚಿತ್ರದ ಮೋಷನ್ ಪೋಸ್ಟರ್‌ನ್ನು ಪ್ರಜ್ವಲ್ ದೇವರಾಜ್ ಮತ್ತು ಟೀಸರ್‌ನ್ನು ಖ್ಯಾತ ನಿರ್ಮಾಪಕಿ ಶೈಲಜಾನಾಗ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಮುಂಬೈನಲ್ಲಿ ಡಬ್ಬಿಂಗ್ ಹಕ್ಕುಗಳನ್ನು ಖರೀದಿಸುತ್ತಿದ್ದ ಹಿರಿಯ ಸಿನಿಪಂಡಿತ ಎಂ.ರಮೇಶ್ ಹಾಗೂ ಪವನ್‌ಕುಮಾರ್ ಮೊದಲಬಾರಿ ಕನ್ನಡ ಚಿತ್ರಕ್ಕೆ ಲಕ್ಷೀ ಗಣಪತಿ ಸ್ಟುಡಿಯೋಸ್ ಮತ್ತು ರೋಶಿಕಾ ಎಂಟರ್‌ಪ್ರೈಸಸ್ ಮೂಲಕ ಬಂಡವಾಳ ಹೂಡಿದ್ದಾರೆ. ಕಿರಣ್.ಆರ್.ಕೆ ಅವರ ಕಥೆ,ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನವಿದೆ. ’ದ ಹಂಟರ್’ ಅಂತ ಅಡಿಬಹರದಲ್ಲಿ ಹೇಳಲಾಗಿದೆ.
Advertisement
ಉನ್ನತ ಮಟ್ಟದ ಕೇಸ್ ನಡೆಯುವ ಕಥೆಯಲ್ಲಿ ಶ್ರೀಮಂತ ಹುಡುಗಿ ಮನೆಯಲ್ಲಿರುವ ಮೂವತ್ತು ಕೋಟಿ ದರೋಡೆ ಆಗುತ್ತದೆ. ಇದನ್ನು ತನಿಖೆ ನಡೆಸಲು ಎಸಿಪಿ ಅಧಿಕಾರಿಯೊಬ್ಬರು ನೇಮಕಗೊಳ್ಳುತ್ತಾರೆ. ಅವರಿಂದ ಇದನ್ನು ಹುಡುಕಲಾಗದ ಪರಿಸ್ಥಿತಿ ಒದಗಿ ಬಂದು ವರ್ಗಾವಣೆಗೊಳ್ಳುತ್ತಾರೆ. ನಂತರ ಕೇಸ್ ಸಿಸಿಬಿ ಅಧಿಕಾರಿಗೆ ಬರುತ್ತದೆ. ಇದರ ಮಧ್ಯೆ ಎರಡು ಕೊಲೆಗಳು ನಡೆಯುತ್ತದೆ. ಎರಡಕ್ಕೂ ಒಂದೇ ಸಾಮ್ಯತೆ ಇರುತ್ತದೆ. ಕೊಲೆ ಮಾಡಿದವರು ಯಾರು? ಇದಕ್ಕೆ ಸಂಬಂಧವೇನು? ಈಕೆಗೆ ನ್ಯಾಯ ಸಿಗುತ್ತದಾ? ನಾಲ್ಕು ಪಾತ್ರಗಳು ಇರಲಿದ್ದು ರೋನಿ ಯಾರು ಎನ್ನುವುದು ಕ್ಲೈಮಾಕ್ಸ್ ನಲ್ಲಿ ತಿಳಿಯುತ್ತದೆ.
Advertisement
Advertisement
ಧರ್ಮ ಕೀರ್ತಿರಾಜ್ (Dharma Keerthiraj) ಸಿನಿಮಾದ ನಾಯಕ. ಬಾಂಬೆ ಮೂಲದ ರುತ್ವಿ ಪಟೇಲ್ (Ruthvi Patel) ನಾಯಕಿ. ಮತ್ತೊಂದು ಮುಖ್ಯ ಪಾತ್ರದಲ್ಲಿ ತಿಲಕ್ (Tilak) ಉಳಿದಂತೆ ಕೀರ್ತಿರಾಜ್, ವರ್ಧನ್, ರಘು ಪಾಂಡೇಶ್ವರ್, ಬಲರಾಜವಾಡಿ, ರತನ್ ಕರತಮಾಡ ಮುಂತಾದವರು ನಟಿಸಿದ್ದಾರೆ. ಮತ್ತೊಂದು ವಿಶೇಷ ಅಂದರೆ ಲಿಯೋ ಎನ್ನುವ ನಾಯಿ ಸಹ ಪ್ರಮುಖ ಪಾತ್ರ ನಿರ್ವಹಿಸಿದೆ.
Advertisement
ಕವಿರಾಜ್-ಕಿನ್ನಾಳ್‌ರಾಜ್ ಸಾಹಿತ್ಯದ ಮೂರು ಹಾಡುಗಳಿಗೆ ಆಕಾಶ್‌ಪರ್ವ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವೀನಸ್ ನಾಗರಾಜಮೂರ್ತಿ, ಸಂಕಲನ ವೆಂಕಿ.ಯುಡಿವಿ, ಸಾಹಸ ಕುಂಗುಫು ಚಂದ್ರು, ತಾಂತ್ರಿಕ ಮುಖ್ಯಸ್ಥ ಧರಂ.ಕೆ.ಸವಲಾನಿ ಅವರದಾಗಿದೆ. ಬೆಂಗಳೂರು, ಮಂಗಳೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇದನ್ನೂ ಓದಿ:ಸಂಪತ್ ಪತ್ನಿ 5 ತಿಂಗಳ ಗರ್ಭಿಣಿ- ಸಹನಟನ ನೆನೆದು ಕಣ್ಣೀರಿಟ್ಟ ವೈಷ್ಣವಿ
ಸಿನಿಮಾವು ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಸಿದ್ದಗೊಂಡಿದೆ. ಇದೇ ಸಂಸ್ಥೆಯು ಮತ್ತೊಂದು ಚಿತ್ರವನ್ನು ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದು ಪ್ರಜ್ವಲ್ ದೇವರಾಜ್ (Prajvaj Devaraj) ನಾಯಕರಾಗಿ ಆಯ್ಕೆಯಾಗಿದ್ದಾರೆ.