ಬಿಗ್ ಬಾಸ್ ಮನೆಯಲ್ಲಿ (Bigg Boss Kannada 11) ಪ್ರೀತಿ ಚಿಗುರಿ ಆ ನಂತರ ಬ್ರೇಕಪ್ ಕಾಮನ್ ಆಗಿದೆ. ಪ್ರತಿ ಸೀಸನ್‌ನಲ್ಲೂ ಕೂಡ ಒಂದಲ್ಲಾ ಒಂದು ಲವ್ ಸ್ಟೋರಿಗಳು ಸದ್ದು ಮಾಡುತ್ತಲೇ ಇರುತ್ತದೆ. ಈ ಬಾರಿ ಒಬ್ಬ ಹುಡುಗನ ಮೇಲೆ ಇಬ್ಬರೂ ಹುಡುಗಿಯರಿಗೆ ಕ್ರಶ್ ಆಗಿದೆ. ಟ್ರಯಾಂಗಲ್ ಲವ್ ಟ್ರ್ಯಾಕ್ ನಡೆಯುತ್ತಿದೆ. ಯಾರು ಅದು ಅಂತೀರಾ? ಅದು ಬೇರೆ ಯಾರೋ ಅಲ್ಲ, ಚಾಕ್‌ಲೇಟ್ ಹೀರೋ ಧರ್ಮ ಕೀರ್ತಿರಾಜ್ (Dharma Keerthiraj) ಲವ್ ಕಹಾನಿ. ಇದನ್ನೂ ಓದಿ:ಆರಾಮ್ ಅರವಿಂದ್ ಸ್ವಾಮಿ: ರೊಮ್ಯಾಂಟಿಕ್ ಹಾಡಿನಲ್ಲಿ ಅನೀಶ್ ತೇಜಶ್ವರ್
ಬಿಗ್ ಬಾಸ್ ಕನ್ನಡ ಸೀಸನ್ 11 ಶೋನಲ್ಲಿ ಪ್ರೀತಿ, ಪ್ರೇಮ ಚಿಗುರುವ ಲಕ್ಷಣ ಕಾಣಿಸಿದೆ. ಈ ಮೊದಲು ಕೂಡ ಬಿಗ್ ಬಾಸ್ ಮನೆಯಲ್ಲಿ ಕೆಲವು ಸ್ಪರ್ಧಿಗಳ ನಡುವೆ ಲವ್ ಆಗಿತ್ತು. ಈಗ ಧರ್ಮ ಕೀರ್ತಿರಾಜ್ ಮತ್ತು ಐಶ್ವರ್ಯಾ (Aishwarya Shindogi) ಅವರು ಪರಸ್ಪರ ಆಕರ್ಷಿತರಾಗುತ್ತಿದ್ದಾರೆ. ಅಷ್ಟೇ ಅಲ್ಲದೇ, ಅನುಷಾ ರೈ (Anusha Rai) ಕೂಡ ಇದೇ ಟ್ರ‍್ಯಾಕ್‌ನಲ್ಲಿ ಇದ್ದಾರೆ. ಹಾಗಾಗಿ ದೊಡ್ಮನೆಯಲ್ಲಿ ತ್ರಿಕೋನ ಪ್ರೇಮ ಶುರುವಾಗುವ ಸೂಚನೆ ಸಿಕ್ಕಿದೆ.
ಆ ಕಡೆ ಅನುಷಾ ಜೊತೆ ಧರ್ಮ ಲವ್ವಿ ಡವ್ವಿ, ಈ ಕಡೆ ಐಶ್ವರ್ಯಾ ಜೊತೆನೂ ಲವ್ವಿ ಡವ್ವಿ. ಟೋಟಲಿ ಬಿಗ್ ಮನೆಯಲ್ಲಿ ಏನು ಆಗ್ತಿದೆ ಅನ್ನೋದು ಮನೆ ಮಂದಿಗೆ ಫುಲ್ ಕನ್‌ಫ್ಯೂಷನ್ ಆಗೋಗಿದೆ. ಧರ್ಮ ಅಂತೂ ಬಿಗ್ ಬಾಸ್ ಮನೆಯಲ್ಲಿ ಕೃಷ್ಣ ಆಗಿರೋದಂತೂ ಗ್ಯಾರಂಟಿ. ಯಾರಿಗೆ ಯಾರು ಸಿಕ್ತಾರೆ ಕೊನೆಯಲ್ಲಿ ಅನ್ನೋದೇ ಸದ್ಯದ ಕುತೂಹಲ.