ಬಿಗ್ ಬಾಸ್ ಮನೆಯ (Bigg Boss Kannada 11) ಆಟ ಶುರುವಾಗಿ 10 ದಿನಗಳು ಕಳೆದಿವೆ. ಮೊದಲ ವಾರವೇ ಯಮುನಾ ಶ್ರೀನಿಧಿ ದೊಡ್ಮನೆಯಿಂದ ಕಿಕ್ ಔಟ್ ಆಗಿದ್ದಾರೆ. ಇದೆಲ್ಲದರ ನಡುವೆ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಲವ್ವಿ ಡವ್ವಿ ಶುರುವಾಗಿದೆ. ಧರ್ಮ (Dharma Keerthiraj) ಮತ್ತು ಐಶ್ವರ್ಯಾ (Aishwarya) ವಿಚಾರ ಮಾತನಾಡುತ್ತಾ ಕಂಟೆಂಟ್‌ಗೋಸ್ಕರ ಲವ್ ಆಗುತ್ತಾ? ಅಂತ ಚೈತ್ರಾಗೆ ಅನುಷಾ ಪ್ರಶ್ನಿಸಿದ್ದಾರೆ. ಇದನ್ನೂ ಓದಿ:ಹನಿಮೂನ್ ಫೋಟೋ ಶೇರ್ ಮಾಡಿ ಪತಿಗೆ ಸೋನಲ್ ಲವ್ಲಿ ವಿಶ್
ದೊಡ್ಮನೆಯಲ್ಲಿ ಹೇಗೆ ಇದ್ದರೆ ವರ್ಕೌಟ್ ಆಗುತ್ತದೆ ಎನ್ನುವ ಪ್ರಶ್ನೆ ಚೈತ್ರಾ ಕುಂದಾಪುರ ಹಾಗೂ ನಟಿ ಅನುಷಾ ಮೂಡಿದೆ. ನನ್ನ ಜೊತೆ ಧರ್ಮ ಮಾತನಾಡಲು ಬಂದರೆ ಐಶ್ವರ್ಯಾ ಸಹಿಸಿಕೊಳ್ಳಲ್ಲ. ಐಶ್ವರ್ಯಾ ಮತ್ತು ಧರ್ಮ ಕೀರ್ತಿರಾಜ್ ಜೊತೆಯಾಗಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಧರ್ಮ ಅವರು ಐಶ್ವರ್ಯಾ ವಿಚಾರದಲ್ಲಿ ಪಾಸಿಟಿವ್ ಆಗಿ ಇದ್ದಾರೆ ಎಂದಿನಿಸುತ್ತಿದೆ. ಇಬ್ಬರೂ ಜೊತೆಯಾಗಿ ಅಡುಗೆ ಮಾಡೋದು ಹೀಗೆಯಲ್ಲಾ ನಡೆಯುತ್ತಿದೆ. ಕಂಟೆಂಟ್‌ಗೋಸ್ಕರ ಕೂಡ ಲವ್ ಆಗುತ್ತಾ? ಎಂದು ಅನುಷಾ (Anusha Rai) ಅವರು ಚೈತ್ರಾಗೆ (Chaithra Kundapura) ಪ್ರಶ್ನೆ ಕೇಳಿದ್ದಾರೆ. ಐಶ್ವರ್ಯಾ ಅವರು ಧರ್ಮ ಅವರ ಬಗ್ಗೆ ಆಸಕ್ತಿ ತೋರಿಸುತ್ತಿರುವ ರೀತಿ ನೋಡಿದ್ರೆ, ಇವರಿಬ್ಬರ ನಡುವೆ ಪ್ರೀತಿ ಮೂಡಿತೇ ಎನ್ನುವ ಪ್ರಶ್ನೆ ಅಲ್ಲಿರುವ ಸ್ಪರ್ಧಿಗಳಲ್ಲಿ ಮತ್ತು ಅಭಿಮಾನಿಗಳಲ್ಲಿಯೂ ಮೂಡಿದೆ.
ಇದೇ ವೇಳೆ, ನಟಿ ಅನುಷಾ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದಾರೆ. ನನಗೆ ಹೊರಗೆ ಬಾಯ್‌ಫ್ರೆಂಡ್ ಇಲ್ಲ. ಎಂಗೇಜ್‌ಮೆಂಟ್ ಕೂಡ ಆಗಿಲ್ಲ. ಯಾರಾದರೂ ಪ್ರೀತಿ (Love) ಕೊಡ್ತೀನಿ ಎಂದು ಬಂದರೆ ನಾನು ಅದಕ್ಕೆ ಯೆಸ್ ಎಂದು ಹೇಳುತ್ತೇನೆ. ಸರಿಯಾದ ವ್ಯಕ್ತಿ ಬಂದು ಅವನೇ ಕೇಳಿದರೆ ಯೆಸ್ ಎಂದು ಹೇಳುತ್ತೇನೆ ಎಂದಿದ್ದಾರೆ.
ಇನ್ನೂ ಕೆಲವರು ಹೈಲೈಟ್ ಆಗಬೇಕು ಎಂಬ ಕಾರಣಕ್ಕೆ ಲವ್ ಮಾಡಿ ಗಿಮಿಕ್ ಮಾಡಿದ್ದು ಇದೆ. ದೊಡ್ಮನೆ ಆಟ ಮುಗಿದ ಮೇಲೆ ಒಬ್ಬರಿಗೊಬ್ಬರು ಗೊತ್ತೇ ಇಲ್ಲ ಎಂದು ಅನ್ನೋ ಹಾಗೆ ಇದ್ದಿದ್ದು ಇದೆ. ಹಾಗಾದ್ರೆ ಮುಂದಿನ ದಿನಗಳಲ್ಲಿ ಐಶ್ವರ್ಯಾ ಲವ್ ಧರ್ಮ ಲವ್ ಟ್ರ್ಯಾಕ್ ಯಾವ ರೀತಿಯಲ್ಲಿ ಸಾಗುತ್ತದೆ ಎಂಬುದನ್ನು ಕಾಯಬೇಕಿದೆ.