‘ಬಿಗ್ ಬಾಸ್’ ಮನೆಯಲ್ಲಿ (Bigg Boss Kannada 11) ಲವ್ ಬರ್ಡ್ಸ್ ಆಗಿದ್ದ ಧರ್ಮ ಮತ್ತು ಅನುಷಾ ನಡುವೆ ಕಿರಿಕ್ ಆಗಿದೆ. ಇದೀಗ ದೊಡ್ಮನೆಯಲ್ಲಿ ಕೊಟ್ಟ ಜೋಡಿ ಟಾಸ್ಕ್‌ನಿಂದಲೇ ಇಬ್ಬರ ಸಂಬಂಧಕ್ಕೆ ಹುಳಿ ಹಿಂಡಿದಂತೆ ಆಗಿದೆ. ನಾಮಿನೇಷನ್ ಪ್ರಕ್ರಿಯೆ ವೇಳೆ, ಧರ್ಮನ (Dharma) ವಿರುದ್ಧ ಅನುಷಾ (Anusha Rai) ತಿರುಗಿ ಬಿದ್ದಿದ್ದಾರೆ. ಇದನ್ನೂ ಓದಿ:ತಾಯಿಯಾಗುವ ಹಂಬಲದಲ್ಲಿ ಸ್ಯಾಮ್- 2ನೇ ಮದುವೆ ಬಗ್ಗೆ ಸುಳಿವು ನೀಡಿದ್ರಾ ನಟಿ?
ಬಿಗ್ ಬಾಸ್ ನೀಡಿದ ಟಾಸ್ಕ್‌ನಂತೆ ಮನೆಯಲ್ಲಿ ನೇರ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತಿದೆ. ಮೊದಲು ಧನರಾಜ್ ಅವರು, ಗೋಲ್ಡ್ ಸುರೇಶ್ ಹಾಗೂ ಅನುಷಾ ಹೆಸರನ್ನು ತೆಗೆದುಕೊಳ್ತಾರೆ. ಐಶ್ವರ್ಯಾ, ಗೌತಮಿ, ಚೈತ್ರಾ, ಧರ್ಮ, ಮೋಕ್ಷಿತಾ ಸೇರಿದಂತೆ ಬಹುತೇಕ ಸ್ಪರ್ಧಿಗಳು ಅನುಷಾ ಮತ್ತು ಸುರೇಶ್‌ರನ್ನು ನಾಮಿನೇಟ್ ಮಾಡುತ್ತಾರೆ.
ಇದಕ್ಕೆ ಅನುಷಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬರಿಗೂ ಪ್ರಶ್ನೆಗಳನ್ನು ಕೇಳುತ್ತಾರೆ. ಮೋಕ್ಷಿತಾ ಅವರೇ ನೀವು ಎಷ್ಟು ಮನರಂಜನೆ ನೀಡಿದ್ದೀರಾ ಎಂದು ತರಾಟೆಗೆ ತೆಗೆದುಕೊಳ್ತಾರೆ. ನಂತರ ಧರ್ಮ ವಿಚಾರಕ್ಕೆ ಬರುತ್ತಾರೆ. ಅಗ್ರೇಷನ್ ಕಮ್ಮಿ ಆಯ್ತು ಎಂದು ನನಗೆ ಕೇಳ್ತೀರಿ. ನಿಮಗೆ ಎಷ್ಟು ಅಗ್ರೇಷನ್ ಇದೆ ಧರ್ಮ ನೀವು ಏನೂ ಆಟ ಆಡಿಯೇ ಇಲ್ಲ. ನೀವು ಆಟದಲ್ಲಿ ಎಷ್ಟು ಇನ್ವಾಲ್ ಆಗಿದ್ದೀರಾ ಎಂದು ತೀವ್ರವಾಗಿ ವಾದ ಮಂಡಿಸುತ್ತಾರೆ. ಈ ವೇಳೆ, ಸಮರ್ಥನೆ ಮಾಡಿಕೊಳ್ಳಲು ಹೋದ ಧರ್ಮ ಅವರು ನಾನೇ ಹೇಳ್ತಿದ್ದೀನಲ್ಲ, ಕಳೆದ ಎಪಿಸೋಡ್‌ನಲ್ಲಿ ಎಲ್ಲರೂ ನಾಲಾಯಕ್ ಎಂದು ಕ್ಯಾಕರಿಸಿ ಉಗಿದಿದ್ದಾರಲ್ಲ ಎಂದು ಮಾತನಾಡುತ್ತಾರೆ.
ಅನುಷಾ ಮತ್ತು ಧರ್ಮ ಬಿಗ್ ಬಾಸ್ ಮನೆಯಲ್ಲಿ ಈ ಜೋಡಿ ಚೆನ್ನಾಗಿಯೇ ಇದ್ದರು. ನಾಮಿನೇಷನ್‌ನಲ್ಲಿ ಧರ್ಮ ಆಡಿದ ಮಾತು ಅನುಷಾಗೆ ನೋವಾಗಿದೆ. ಅವರ ಮುನಿಸಿಗೆ ಕಾರಣವಾಗಿದೆ. ಹಾಗಾಗಿ ಧರ್ಮನ ವಿರುದ್ಧ ಅವರು ತಿರುಗಿ ಬಿದ್ದಿದ್ದಾರೆ. ಚೆನ್ನಾಗಿದ್ದ ಅನುಷಾ- ಧರ್ಮ ಜಗಳ ಅಕ್ಷರಶಃ ಮನೆ ಮಂದಿಗೂ ಶಾಕ್ ಕೊಟ್ಟಿದೆ.
View this post on Instagram
ಇನ್ನೂ ಅಂತಿಮವಾಗಿ ಸ್ಪರ್ಧಿಗಳ ಬಹುಮತದ ಮೇರೆಗೆ ಈ ವಾರ ಮನೆಯಿಂದ ಹೊರ ಹೋಗಲು ಅನುಷಾ ಮತ್ತು ಗೋಲ್ಡ್ ಸುರೇಶ್ ನೇರವಾಗಿ ನಾಮಿನೇಟ್ ಆಗಿದ್ದಾರೆ.