ಧಾರವಾಡ: ಧಾರವಾಡದಲ್ಲಿ (Dharawada) ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ಹಲವು ಅವಾಂತರ ಸೃಷ್ಟಿಯಾಗಿದ್ದು, ಹುಬ್ಬಳ್ಳಿ (Hubballi) ಧಾರವಾಡ ಬೈಪಾಸ್ ರಸ್ತೆಯಲ್ಲಿ 24 ಗಂಟೆಯಾದರೂ ನೀರಿನ ಪ್ರಮಾಣ ಕಡಿಮೆಯಾಗಲಿಲ್ಲ.
ರಸ್ತೆ ಮೇಲೆ ನೀರು ಹರಿದು ಬಂದ ಹಿನ್ನೆಲೆ ವಾಹನ ಸವಾರರು ಪರದಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4 ಹುಬ್ಬಳ್ಳಿ-ಧಾರವಾಡ ಯರಿಕೊಪ್ಪ ಗ್ರಾಮದ ಬಳಿಯ ಮನಸೂರ ಹಳ್ಳಕ್ಕೆ ಮಳೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ನೀರು ಬಂದಿದೆ. ಇದನ್ನೂ ಓದಿ: ದಲಿತ ನಾಯಕನನ್ನ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಮಾಡಲಿ- ಕಾಂಗ್ರೆಸ್‌ಗೆ ಜೆಡಿಎಸ್ ಸವಾಲ್
Advertisement
Advertisement
ರಸ್ತೆ ಮೇಲೆಯೇ ನೀರು ಹರಿಯುತ್ತಿರುವ ಹಿನ್ನೆಲೆ, ರಾತ್ರಿ ಎಲ್ಲಾ ಬೈಪಾಸ್ ರಸ್ತೆ ಸ್ಥಗಿತಗೊಂಡಿತ್ತು. ಬೆಳಿಗ್ಗೆ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಲಾರಿಗಳು ಮಾತ್ರ ದಾಟಲು ಅವಕಾಶ ನೀಡಲಾಗಿದೆ. ಮತ್ತೆ ಮಳೆಯಾದರೆ ರಸ್ತೆ ಕಡಿತ ಆಗುವ ಸಾಧ್ಯತೆ ಇದೆ. ನಗರದ ಬಹುತೇಕ ನೀರು ಬೈಪಾಸ್ ರಸ್ತೆಯಿಂದ ಮನಸೂರ ಹಳ್ಳಕ್ಕೆ ಬರುತ್ತಿರುವುದರಿಂದ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಇದನ್ನೂ ಓದಿ: ಟಾಟಾ ಅವರ ಅಂತ್ಯಕ್ರಿಯೆ ವೇಳೆ ಅಂತಿಮ ನಮನ ಸಲ್ಲಿಸಿದ ʻಗೋವಾʼ!
Advertisement