ತಂದೆಯವರ ಆರೋಗ್ಯ ಸುಧಾರಿಸಿತ್ತು, ನಿನ್ನೆ ರಾತ್ರಿ ನನ್ನ ಜೊತೆ ಮಾತನಾಡಿದ್ರು: ವಿಜಯ್ ಸಿಂಗ್

Public TV
1 Min Read
dharam singh BODY

ಬೆಂಗಳೂರು: ಬುಧವಾರ ರಾತ್ರಿ ತಂದೆಯವರು ನನ್ನ ಜೊತೆ ಮಾತನಾಡಿದ್ದರು. ಆದರೆ ನಿಧನಕ್ಕೆ ನಿಜವಾದ ಕಾರಣ ಏನು ಎನ್ನುವುದು ನಮಗೆ ವೈದ್ಯರು ತಿಳಿಸಿಲ್ಲ ಎಂದು ಧರಂ ಸಿಂಗ್ ಪುತ್ರ ವಿಜಯ್ ಸಿಂಗ್ ಹೇಳಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು ಕಳೆದ ಮೂರು ತಿಂಗಳಿನಿಂದ ತಂದೆಯವರು ಬೆಂಗಳೂರಿನಲ್ಲಿದ್ದರು. ಚಿಕಿತ್ಸೆಯ ಬಳಿಕ ಆರೋಗ್ಯ ಸುಧಾರಣೆಯಾಗಿತ್ತು. ನಿನ್ನೆ ರಾತ್ರಿಯೂ ನನ್ನ ಜೊತೆ ಮಾತನಾಡಿದ್ದರು ಎಂದು ತಿಳಿಸಿದರು.

ಇಂದು ಮೃತದೇಹವನ್ನು ಬೆಂಗಳೂರಿನ ನಿವಾಸಕ್ಕೆ ತೆಗೆದುಕೊಂಡು ಹೋಗುತ್ತೇವೆ. ನಾಳೆ ಕಲಬುರಗಿಯಲ್ಲಿ ಆಂತ್ಯ ಸಂಸ್ಕಾರ ಮಾಡಲಾಗುವುದು. ಎಲ್ಲ ಸಂಬಂಧಿಗಳಿಗೆ ಮತ್ತು ಅಭಿಮಾನಿಗಳಿಗೆ ಅಲ್ಲೇ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.

ಫೇಸ್ ಬುಕ್ ನಲ್ಲಿ ಸಿಎಂ ಸಂತಾಪ:  ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ನ ಹಿರಿಯ ನೇತಾರ ಶ್ರೀ ಧರಂಸಿಂಗ್ ಅವರು ನಮ್ಮನ್ನಗಲಿದ ಸುದ್ಧಿ ತೀವ್ರ ಆಘಾತ ತಂದಿದೆ. ಅವರ ಕುಟುಂಬ, ಬಂಧುವರ್ಗಕ್ಕೆ ತೀವ್ರ ಸಂತಾಪಗಳು.  ಸಜ್ಜನಿಕೆಯೇ ಮೈವೆತ್ತಿದಂತಿದ್ದ ಎನ್.ಧರಂಸಿಂಗ್ ಅವರು ಉತ್ತರ ಕರ್ನಾಟಕದ ಪ್ರಭಾವಿ ನಾಯಕರಾಗಿದ್ದರು. ಸುಮಾರು ಐದು ದಶಕದ ರಾಜಕೀಯ ಜೀವನದಲ್ಲಿ ಅಜಾತಶತ್ರುವಾಗಿದ್ದರು. ರಾಜಕೀಯ ಜೀವನದುದ್ದಕ್ಕೂ ಧರಂಸಿಂಗ್ ಅವರು ಪ್ರತಿನಿಧಿಸಿದ ಮೌಲ್ಯಗಳು ಅನುಕರಣೀಯ, ಅಪ್ಪಟ ಜನಾನುರಾಗಿಯಾಗಿದ್ದ ಅವರಲ್ಲಿ ಎಲ್ಲ ಧರ್ಮ, ಜಾತಿ, ಜನಾಂಗದವರೂ ಅಪ್ರತಿಮ ನಾಯಕನನ್ನು ಕಂಡಿದ್ದರು. ಅವರ ಅಗಲಿಕೆಯಿಂದ ನಾಡಿನ ಧೀಮಂತ ರಾಜಕಾರಣದ ಪರಂಪರೆ ಸೊರಗಿದೆ. ಶ್ರೀಯುತರಿಗೆ ನನ್ನ ಶೋಕತಪ್ತ ನಮನಗಳು.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಧರಂ ಸಿಂಗ್ ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ, ಜೇವರ್ಗಿ ತಾಲೂಕಿನ, ನೇಲೋಗಿ ಗ್ರಾಮದಲ್ಲಿ 1936 ರಲ್ಲಿ ಜನಿಸಿದ ಧರಂ ಸಿಂಗ್, ಹೈದರಾಬಾದ್ ನ ಓಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಂಎ ಹಾಗೂ ಎಲ್‍ಎಲ್‍ಬಿ ಪದವಿಗಳನ್ನು ಪಡೆದಿದ್ದಾರೆ. ವಕೀಲರಾಗಿ ಸ್ವಲ್ಪ ಕಾಲ ಕಾರ್ಯ ನಿರ್ವಹಿಸಿದ ಮೇಲೆ 60 ರ ದಶಕದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ಸೇರ್ಪಡೆಯಾಗಿದ್ದರು.

 

 

dharam singh bday 3

dharam singh bday 2

dharam singh bday 1

dharam singh bday 4

Share This Article
Leave a Comment

Leave a Reply

Your email address will not be published. Required fields are marked *