– ಧರ್ಮೇಂದ್ರ ನಿವಾಸದ ಪ್ರೇಯರ್ ಮೀಟ್‌ನಲ್ಲಿ ಭಾಗಿಯಾದ ಸನ್ನಿ ಡಿಯೋಲ್, ಬಾಬಿ ಡಿಯೋಲ್
`He Was Everything To Me’ ಎಂದು ಹಿರಿಯ ನಟ ಧರ್ಮೇಂದ್ರ ನಿಧನದ ನಂತರ ಪತ್ನಿ ಹೇಮಾಮಾಲಿನಿ (Hemamalini) ಭಾವುಕ ಪೋಸ್ಟ್ ಹಾಕಿ, ನುಡಿನಮನ ಸಲ್ಲಿಸಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿಕೊಂಡಿರುವ ಹೇಮಾಮಾಲಿನಿ, ಅವರು ನನಗೆ ಪತಿಯಾಗಿ, ತಂದೆಯಾಗಿ, ಸ್ನೇಹಿತನಾಗಿ, ಮಾರ್ಗದರ್ಶಕರಾಗಿ, ಎರಡು ಹೆಣ್ಣುಮಕ್ಕಳಾದ ಈಶಾ ಮತ್ತು ಅಹಾನಾಗೆ ಪ್ರೀತಿಯ ತಂದೆಯಾಗಿ, ಎಲ್ಲ ಕೆಟ್ಟ ಹಾಗೂ ಒಳ್ಳೆಯ ಸಮಯದಲ್ಲಿ ನನ್ನ ಜೊತೆಗಿದ್ದು ಅನುಭವಿಸಿದ ಏಕೈಕ ವ್ಯಕ್ತಿ. ಅವರೇ ನನಗೆ ಎಲವೂ ಆಗಿದ್ದರು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಬಾಲಿವುಡ್‌ನ ಎವರ್‌ಗ್ರೀನ್ ಸ್ಟಾರ್ ನಟ ಧರ್ಮೇಂದ್ರ ವಿಧಿವಶ
ನನ್ನ ಕುಟುಂಬಸ್ಥರ ಜೊತೆಗೆ ಬೆರೆತು ಪ್ರೀತಿಯೊಂದಿಗೆ ಇರುತ್ತಿದ್ದರು ಹಾಗೂ ಅವರೆಲ್ಲರ ಮೇಲೆ ವಿಶೇಷ ಆಸಕ್ತಿಯನ್ನು ಹೊಂದಿದ್ದರು. ಇನ್ನೂ ಹೊರಗಿನ ಜಗತ್ತಿಗೆ ಅವರ ಪ್ರತಿಭೆ, ನಟನೆ ಹೊರತಾಗಿಯೂ ನಮ್ರತೆಯಿಂದಲೇ ಖ್ಯಾತಿಯಾದವರು. ಸಿನಿರಂಗದಲ್ಲಿ ಅವರ ನಿರಂತರ ಸಾಧನೆ ಹಾಗೂ ನಟನೆ ಶಾಶ್ವತವಾಗಿ ಉಳಿಯುವಂತದ್ದು. ಅವರನ್ನು ಕಳೆದುಕೊಂಡ ನನಗೆ ಇದೊಂದು ವೈಯಕ್ತಿಕ ನಷ್ಟ. ಈ ನೋವು ನಾನು ಭೂಮಿಯ ಮೇಲೆ ಇರುವ ತನಕವೂ ನನ್ನೊಂದಿಗಿರುತ್ತದೆ. ಇಷ್ಟು ವರ್ಷ ಅವರ ಜೊತೆಗಿದ್ದ ನನಗೆ ಸಾಕಷ್ಟು ಸಿಹಿ ಕ್ಷಣಗಳನ್ನು ಬಿಟ್ಟುಹೋಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.
Dharam ji❤️
He was many things to me. Loving Husband, adoring Father of our two girls, Esha & Ahaana, Friend, Philosopher, Guide, Poet, my ‘go to’ person in all times of need – in fact, he was everything to me! And always has been through good times and bad. He endeared himself… pic.twitter.com/WVyncqlxK5
— Hema Malini (@dreamgirlhema) November 27, 2025
ಇನ್ನೂ ಗುರುವಾರ (ನ.27) ಸಂಜೆ 5ರಿಂದ 7:30ರವರೆ ಮುಂಬೈನ ಹೋಟೆಲ್‌ನಲ್ಲಿ ಪ್ರೇಯರ್ ಮೀಟ್ ನಡೆಯಲಿದೆ. ಇದಕ್ಕೂ ಮುನ್ನ ಧರ್ಮೇಂದ್ರ ನಿವಾಸದ ಪ್ರೇಯರ್ ಮೀಟ್‌ನಲ್ಲಿ ಸನ್ನಿ ಡಿಯೋಲ್, ಬಾಬಿ ಡಿಯೋಲ್ ಭಾಗಿಯಾಗಿದ್ದರು.ಇದನ್ನೂ ಓದಿ: ಹೇಮಾ ಮಾಲಿನಿಯನ್ನು ವಿವಾಹವಾಗಲು ಇಸ್ಲಾಂಗೆ ಧರ್ಮೇಂದ್ರ ಮತಾಂತರವಾಗಿದ್ರಾ?

