ಮೈಸೂರು: ನನ್ನ ಸೇವೆ ರಾಷ್ಟ್ರ ಮಟ್ಟದಲ್ಲಿ ವಿಸ್ತರಣೆ ಆಗಬೇಕು ಎಂದು ಜನ ನಿರೀಕ್ಷೆ ಮಾಡುತ್ತಿದ್ದಾರೆ. ನಾನು ಕೂಡ ಈ ಬಗ್ಗೆ ಯೋಚನೆ ಮಾಡುತ್ತಿದ್ದೇನೆ ಎಂದು ಜಯದೇವ ಆಸ್ಪತ್ರೆಯ (Jayadeva Hospital) ನಿವೃತ್ತ ನಿರ್ದೇಶಕ ಡಾ. ಮಂಜುನಾಥ್ ಹೇಳಿದರು.
ಬೆಂಗಳೂರಿನ ಜಯದೇವ ಆಸ್ಪತ್ರೆಯನ್ನು ಮುನ್ನಡೆಸಿ ಈಗ ನಿವೃತ್ತರಾಗಿರುವ ಡಾ.ಸಿ.ಎನ್ ಮಂಜುನಾಥ್ (Dr C.N. Manjunath) ಅವರಿಗಾಗಿ ಮೈಸೂರಿನ (Mysuru) ನಾಗರಿಕರ ಪರವಾಗಿ ಆಯೋಜನೆಗೊಂಡಿದ್ದ ʼಧನ್ಯವಾದ ಧನ್ವಂತರಿʼ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇದನ್ನೂ ಓದಿ:ಪಾಕಿಸ್ತಾನದಲ್ಲಿ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ನವಾಜ್ ಷರೀಫ್ ಪುತ್ರಿ ಆಯ್ಕೆ
Advertisement
ಹೆಚ್‌ಆರ್ ರಂಗನಾಥ್ (HR Ranganath) ಮಾತನಾಡುವಾಗ ಹಲವು ಸಲಹೆ ಕೊಟ್ಟಿದ್ದಾರೆ. ಪ್ರಶಸ್ತಿಗಳು ಮತ್ತು ಸನ್ಮಾನಗಳು ಇನ್ನು ಹೆಚ್ಚಿನ ಜವಾಬ್ದಾರಿ ನೀಡುತ್ತದೆ. ಜನರ ಆಶೋತ್ತರ, ಬಯಕೆಗೆ ಸ್ಪಂದಿಸುವ ಕೆಲಸ ಮಾಡಬೇಕಾಗಬಹುದೇನೋ? ಆದರೆ ಇನ್ನೂ ನಾನು ನಿರ್ಧಾರ ತೆಗೆದುಕೊಂಡಿಲ್ಲ ಎಂದು ಡಾ.ಮಂಜುನಾಥ್ ಹೇಳಿದರು. ಇದನ್ನೂ ಓದಿ: ಪ್ರಜಾಪ್ರಭುತ್ವ ಒಳ್ಳೆಯವರನ್ನು ಬಯಸುತ್ತದೆ, ಡಾ. ಮಂಜುನಾಥ್ ರಾಜಕಾರಣಕ್ಕೆ ಬರಬೇಕು: ಹೆಚ್‌ಆರ್ ರಂಗನಾಥ್
Advertisement
ಶರೀರದ ತೂಕ ಹೆಚ್ಚಾದರೆ ವ್ಯಾಯಾಮ ಮಾಡಬೇಕು. ಮನಸ್ಸಿನ ತೂಕ ಹೆಚ್ಚಾದರೆ ಧ್ಯಾನ ಮಾಡಬೇಕು. ಜೇಬಿನ ತೂಕ ಹೆಚ್ಚಾದರೆ ದಾನ ಮಾಡಬೇಕು. ಈಗ ಸನ್ಮಾನ ಮಾಡುವ ಮೂಲಕ ನನಗೆ ಇನ್ನೂ ಹೆಚ್ಚಿನ ಜವಾಬ್ದಾರಿ ಸಿಕ್ಕಂತಾಗಿದೆ. ತೂಕ ಜಾಸ್ತಿಯಾಗಿದೆ ಎಂದರು.
Advertisement
Advertisement
ಮೊದಲು ಮಾತನಾಡಿದ್ದ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್‌ಆರ್ ರಂಗನಾಥ್, ಪ್ರಜಾಪ್ರಭುತ್ವ ಒಳ್ಳೆಯವರನ್ನು ಬಯಸುತ್ತದೆ. ಸುಸಂಸ್ಕೃತರು ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಕೆಲಸಕ್ಕೆ ಬರಬೇಕು. ವೈದ್ಯ ವೃತ್ತಿಯಲ್ಲಿ ಇದ್ದಾಗ ಒಂದು ಕ್ಷಣವೂ ರಾಜಕೀಯ ಸುಳಿಗೆ ಸಿಲುಕದೇ ಇದ್ದದ್ದು ಒಂದು ಅಚ್ಚರಿ. ರಾಜಕಾರಣ ಕೆಟ್ಟದಲ್ಲ. ನಿಮ್ಮಂಥ ಒಳ್ಳೆಯವರ ಅವಶ್ಯಕತೆ ರಾಜಕಾರಣಕ್ಕೆ ಇದೆ. ಜನರ ಒತ್ತಾಸೆಯನ್ನು ನಮ್ರತೆಯಿಂದ ಸ್ವೀಕರಿಸಿ ಎಂದು ಮನವಿ ಮಾಡಿದ್ದರು.