ದೂದ್ ಪೇಡ ದಿಗಂತ್ ಇದೀಗ ಹೊಸ ಸಿನಿಮಾಗಾಗಿ ‘ಗುಳ್ಟು'(Gultoo) ನಿರ್ದೇಶಕನ ಜೊತೆ ಕೈಜೋಡಿಸಿದ್ದಾರೆ. ಅಣ್ಣಾವ್ರ ಮೊಮ್ಮಗಳು ಧನ್ಯಾ ಮತ್ತು ‘ಗಾಳಿಪಟ 2’ ನಟಿ ಶರ್ಮಿಳಾ ಮಾಂಡ್ರೆ (Sharmiela Mandre) ಜೊತೆ ಡ್ಯುಯೇಟ್ ಹಾಡಲು ದಿಗಂತ್ ಮಂಚಾಲೆ (Diganth Manchale) ರೆಡಿಯಾಗಿದ್ದಾರೆ.
‘ಗುಳ್ಟು’ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ (Janardhan Chikkanna) ಇದೀಗ ಹೊಸ ಸಿನಿಮಾ ಮಾಡಲು ಮುಂದಾಗಿದ್ದಾರೆ. ನಟ ದಿಗಂತ್ ಕೂಡ ಕಥೆ ಕೇಳಿ ಥ್ರಿಲ್ ಆಗಿ ಸಿನಿಮಾಗೆ ಓಕೆ ಎಂದಿದ್ದಾರೆ. ಇದನ್ನೂ ಓದಿ:ಘೋಸ್ಟ್ ಸಿನಿಮಾ ರಿಲೀಸ್ ಡೇಟ್ ಘೋಷಣೆ: ದಸರಾಗೆ ತೆರೆಯ ಮೇಲೆ ಶಿವಣ್ಣ
ಈಗಾಗಲೇ ’ದಿ ಜಡ್ಜ್‌ಮೆಂಟ್’ ಸಿನಿಮಾದಲ್ಲಿ ದಿಗಂತ್- ಧನ್ಯಾ ಒಟ್ಟಿಗೆ ನಟಿಸಿದ್ದಾರೆ. ಮತ್ತೆ ಈ ಹೊಸ ಚಿತ್ರದ ಮೂಲಕ ದಿಗಂತ್‌ಗೆ ನಟಿ ಧನ್ಯಾ ರಾಮ್‌ಕುಮಾರ್ ಜೊತೆಯಾಗಿದ್ದಾರೆ. ಮತ್ತೊಂದು ವಿಶೇಷ ಅಂದರೆ, 13 ವರ್ಷಗಳ ನಂತರ ಶರ್ಮಿಳಾ ಮಾಂಡ್ರೆ- ದಿಗಂತ್ ಈ ಚಿತ್ರದ ಮೂಲಕ ಒಟ್ಟಿಗೆ ಕಾಣಿಸಿಕೊಳ್ತಿದ್ದಾರೆ.
2010ರಲ್ಲಿ ‘ಸ್ವಯಂವರ’ ಸಿನಿಮಾದಲ್ಲಿ ದಿಗಂತ್-ಶರ್ಮಿಳಾ ಜೋಡಿಯಾಗಿ ನಟಿಸಿದ್ದರು. ಗುಳ್ಟು ನಿರ್ದೇಶಕನ ಹೆಸರಿಡದ ಹೊಸ ಸಿನಿಮಾದ ಮೂಲಕ ಧನ್ಯಾ(Dhanya Ramkumar), ಶರ್ಮಿಳಾ, ದಿಗಂತ್ ಜೊತೆಯಾಗಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಟ್ರೈಯಾಂಗಲ್ ಲವ್ ಸ್ಟೋರಿ ಬೆಳ್ಳಿಪರದೆಯಲ್ಲಿ ಹೇಗೆ ಮೂಡಿ ಬರಲಿದೆ ಎಂದು ಕಾದುನೋಡಬೇಕಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]