ಸ್ಯಾಂಡಲ್ವುಡ್ ನಟ ದರ್ಶನ್ ಜೊತೆ ಧನ್ವೀರ್ ಗೌಡ ಉತ್ತಮ ಬಾಂಧವ್ಯ ಹೊಂದಿದ್ದಾರೆ. ದರ್ಶನ್ ಜೊತೆಗಿನ ಒಡನಾಟ ಮತ್ತು ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಧನ್ವೀರ್ ಮುಕ್ತವಾಗಿ ಮಾತನಾಡಿದ್ದಾರೆ. ಈ ವೇಳೆ, ವಿಜಯಲಕ್ಷ್ಮಿ ಅಕ್ಕನ ಹೋರಾಟ ನೋಡಿ ಅವರೊಂದಿಗೆ ನಿಲ್ಲಬೇಕು ಅನ್ನಿಸಿತು ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಪವನ್ ಕಲ್ಯಾಣ್, ಶ್ರೀಲೀಲಾ ನಟನೆಯ ಸಿನಿಮಾ ನಿಂತು ಹೋಗಿಲ್ಲ- ಸ್ಪಷ್ಟನೆ ನೀಡಿದ ನಿರ್ಮಾಪಕ
ಪಬ್ಲಿಕ್ ಟಿವಿ ಸಂದರ್ಶನದಲ್ಲಿ ದರ್ಶನ್ ಜೊತೆಗಿನ ಬಾಂಧವ್ಯದ ಬಗ್ಗೆ ಧನ್ವೀರ್ ಮಾತನಾಡಿ, ನಾನು ದರ್ಶನ್ರನ್ನು ಹೃದಯದಿಂದ ಇಷ್ಟಪಟ್ಟಿದ್ದೀನಿ. ಅದಕ್ಕೆ ಯಾವಾಗೂ ಜೊತೆಯಲ್ಲಿದ್ದೆ. ರೇಣುಕಾಸ್ವಾಮಿ ಪ್ರಕರಣ ಏನೇ ಆಗಿರಬಹುದು. ಅದು ನ್ಯಾಯಾಲಯದಲ್ಲಿದೆ. ಅದನ್ನು ಜಡ್ಜ್ ಮಾಡೋಕೆ ನಾವ್ಯಾರು ಅಲ್ಲ. ಕಾನೂನು ಅಂತ ಇದೆ. ಅಲ್ಲಿ ತೀರ್ಮಾನ ಆಗುತ್ತೆ. ಒಂದು ಸಮಯದಲ್ಲಿ ಎಲ್ಲರೂ ಅವರೊಂದಿಗೆ ಇದ್ದರು. ದರ್ಶನ್ ಕಡೆಯಿಂದ ಎಲ್ಲಾ ತರಹದ ಬೆಂಬಲ ತಗೊಂಡರು. ಅವರು ಹಿಂದೆ ಮುಂದೆ ಯೋಚನೆ ಮಾಡದೇ ಎಲ್ಲರೂ ನಮ್ಮವರು ಅಂತ ಅಪ್ಪಿಕೊಂಡರು. ಆದರೆ ಅವರಿಗೆ ಕಷ್ಟ ಬಂದಾಗ ಎಲ್ಲರೂ ದೂರ ಸರಿದರು ಎಂದಿದ್ದಾರೆ. ಇದನ್ನೂ ಓದಿ:ಆಸ್ಟ್ರೇಲಿಯಾದಲ್ಲಿ ಸಮಂತಾ- ಪ್ರವಾಸದ ಫೋಟೋ ಹಂಚಿಕೊಂಡ ನಟಿ
ಇನ್ನೂ ವಿಜಯಲಕ್ಷ್ಮಿ ಅಕ್ಕ ಅವರು ಒಂಟಿ ಹೆಣ್ಣು ಮಗಳಾಗಿ ಅಷ್ಟು ಹೋರಾಟ ಮಾಡಿದ್ರು. ಅದನ್ನು ನೋಡಿ ದರ್ಶನ್ ಜೊತೆ ನಿಲ್ಲಬೇಕು ಎಂದು ಅನ್ನಿಸಿತು. ನಾನು ಕೂಡ ಅಕ್ಕ- ತಂಗಿಯರ ಜೊತೆ ಬೆಳೆದಿದ್ದೀನಿ. ನನಗೂ ಗೊತ್ತಾಗುತ್ತದೆ. ದೇವರು ಅವರನ್ನು ಚೆನ್ನಾಗಿ ಇಟ್ಟಿದ್ದಾನೆ. ಅವರಿಗೆ ಬೇಕಿರೋದು ಬೆಂಬಲ ಅಷ್ಟೇ. ನಾವಿದ್ದೀವಿ ಅನ್ನೋವಂತಹ ಧೈರ್ಯ ಬೇಕಿತ್ತು. ಇವತ್ತು ಅವರೊಂದಿಗೆ ನಾವು ನಿಂತಿದ್ದೀವಿ. ಬಣ್ಣದ ಲೋಕ ಅಂದ್ರೆ ಎಲ್ಲವೂ ಚೆನ್ನಾಗಿರುತ್ತದೆ ಎಂದು ಅಂದುಕೊಳ್ತಾರೆ. ದರ್ಶನ್ ಒಬ್ಬರು ಹೊರಗೆ ಬಂದ್ರೆ ಅದೆಷ್ಟೋ ಜನ ಅನ್ನ ತಿನ್ನುತ್ತಾರೆ. ಒಂದು ಸಿನಿಮಾ ಶುರು ಆಗೋದ್ರಿಂದ ಅದೆಷ್ಟೋ ಜನರಿಗೆ ಊಟ ಸಿಗುತ್ತದೆ.
ಇನ್ನೂ ರೇಣುಕಾಸ್ವಾಮಿ ಘಟನೆ ಕೇಳಿದಾಗ ನಾನು ನಂಬಲೇ ಇಲ್ಲ. 2 ದಿನ ಎಲ್ಲರ ಹತ್ತಿರ ವಾದ ಮಾಡಿದ್ದೆ, ಅದ್ಯಾವಾಗ ದರ್ಶನ್ರನ್ನು ಕಸ್ಟಡಿಗೆ ಹೇಳಿದ್ರೋ ಇಲ್ಲಿ ಏನೋ ಆಗಿದೆ ಅನ್ನಿಸಿತು ಈ ಘಟನೆ ಆದ್ಮೇಲೆ ಅವರಿಗೂ ಯಾರ ಯಾರ ಮುಖ ಏನು ಅಂತ ಗೊತ್ತಾಗಿದೆ. ಯಾವುದು ಗಟ್ಟಿ ಬೇರು? ಯಾವುದು ಮೃದುವಾಗಿರೋ ಬೇರು? ಅಂತ ಅವರಿಗೆ ಚೆನ್ನಾಗಿ ಅರ್ಥ ಆಗಿದೆ. ಯಾರ ಸಹವಾಸನೂ ಬೇಡ ಅಂತ ಅವರಿಗನ್ನಿಸಿದೆ.
ಜೈಲಲ್ಲಿ ಅವರನ್ನು ನೋಡೋಕೆ ಬೇಸರ ಆಗ್ತಿತ್ತು. ಹೇಗಿದ್ದ ಮನುಷ್ಯ ಹೇಗಾದ್ರು ಟೈಮ್ ಅಂತ ಬಂದಾಗ ಎಂದು ಅನಿಸ್ತು. ನಾನು ದರ್ಶನ್ ವ್ಯಕ್ತಿತ್ವ ನೋಡಿ ಇಷ್ಟಪಟ್ಟಿದ್ದು, ಅವರ ಸಿನಿಮಾ ನೋಡಿ ಅಲ್ಲ. ದಾನ ಧರ್ಮ ಮಾಡಿದ್ದು ನೋಡಿ ಫ್ಯಾನ್ ಆಗಿದ್ದು ಎಂದಿದ್ದಾರೆ. ನನಗೆ ಅವರು 2019ರಲ್ಲಿ ‘ಬಜಾರ್’ ಸಿನಿಮಾ ಸಮಯದಿಂದ ಪರಿಚಯ ಅಲ್ಲಿಂದ ಅವರೊಂದಿಗೆ ಒಡನಾಟ ಶುರುವಾಯ್ತು ಎಂದು ಹಂಚಿಕೊಂಡರು.