ತಮಿಳು ನಟ ಧನುಷ್ (Dhanush) ಸದಾ ವಿಭಿನ್ನ ಪಾತ್ರಗಳ ಮೂಲಕ ರಂಜಿಸುತ್ತಲೇ ಇರುತ್ತಾರೆ. ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರವೇ ತಾವಾಗಿ ನಟಿಸುತ್ತಾರೆ. ಬಹುಭಾಷೆಗಳಲ್ಲಿ ಕಮಾಲ್ ಮಾಡಿರುವ ಧನುಷ್ ಇದೀಗ ಮತ್ತೊಮ್ಮೆ ಹಾಲಿವುಡ್‌ಗೆ (Hollywood) ಹಾರಲು ಮುಂದಾಗಿದ್ದಾರೆ. 27 ವರ್ಷದ ಹಾಲಿವುಡ್ ಬೆಡಗಿ ಸಿಡ್ನಿ ಸ್ವೀನಿ ಜೊತೆ ನಟ ರೊಮ್ಯಾನ್ಸ್ ಮಾಡಲಿದ್ದಾರೆ.
ದಿ ಎಕ್ಸಾರ್ಡಿನರಿ ಜರ್ನಿ ಆಫ್ ಎ ಫಕೀರ್, ದಿ ಗ್ರೇ ಮ್ಯಾನ್ ಎಂಬ ಇಂಗ್ಲಿಷ್ ಸಿನಿಮಾಗಳಲ್ಲಿ ನಟ ಅಭಿನಯಿಸಿದ್ದಾರೆ. ಇದೀಗ ’ಸ್ಟ್ರೀಟ್ ಫೈಟರ್’ (Street Fighter) ಎಂಬ ಹಾಲಿವುಡ್ ಸಿನಿಮಾದಲ್ಲಿ ಧನುಷ್ ನಟಿಸಲು ರೆಡಿಯಾಗಿದ್ದಾರೆ. ಅವರಿಗೆ ಸಿಡ್ನಿ ಸ್ವೀನಿ (Sydney Sweeney) ನಾಯಕಿಯಾಗಲಿದ್ದಾರೆ. ಇಬ್ಬರಿಗೂ ನಟನೆಗೆ ಸ್ಕೋಪ್ ಇರುವಂತಹ ಪಾತ್ರವೇ ಸಿಕ್ಕಿದೆ. ಇದನ್ನೂ ಓದಿ:‘ಅಯೋಗ್ಯ 2’ಗೆ ಅದ್ಧೂರಿ ಮುಹೂರ್ತ- ಮತ್ತೆ ಜೊತೆಯಾದ ಸತೀಶ್ ನೀನಾಸಂ, ರಚಿತಾ ರಾಮ್
ಇನ್ನೂ ಧನುಷ್ ಕೈಯಲ್ಲಿ ‘ಕುಬೇರ’ ಎಂಬ ಸಿನಿಮಾವಿದೆ. ಇವರೊಂದಿಗೆ ರಶ್ಮಿಕಾ ಮಂದಣ್ಣ (Rashmika Mandanna), ನಾಗಾರ್ಜುನ ಅಕ್ಕಿನೇನಿ ಸೇರಿದಂತೆ ಅನೇಕರು ನಟಿಸಿದ್ದಾರೆ. ‘ಇಡ್ಲಿ ಕಡೈ’ ಎಂಬ ಚಿತ್ರವನ್ನು ಧನುಷ್ ನಿರ್ದೇಶನ ಮಾಡಲಿದ್ದಾರೆ. ಇಳಯರಾಜ ಜೀವನ ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದೆ.