ಕಾಲಿವುಡ್ (Kollywood) ಸ್ಟಾರ್ ನಟ ಧನುಷ್ (Dhanush) ಅವರು ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಬಗೆ ಬಗೆಯ ಪಾತ್ರಗಳನ್ನ ಮಾಡಿ ಸೈ ಎನಿಸಿಕೊಂಡಿದ್ದಾರೆ. ತಮ್ಮ ವೃತ್ತಿ ಜೀವನದ 50ನೇ ಸಿನಿಮಾ ಕೊಂಚ ಸ್ಪೆಷಲ್ ಆಗಿ ವಿಭಿನ್ನವಾಗಿರಬೇಕು ಎಂಬ ಕಾರಣಕ್ಕೆ ಕಥೆ- ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಸದ್ಯ D50 ಸಿನಿಮಾದ ಫಸ್ಟ್ ಲುಕ್ ಮೂಲಕ ಧನುಷ್ ಸಂಚಲನ ಮೂಡಿಸುತ್ತಿದ್ದಾರೆ. ಇದನ್ನೂ ಓದಿ:`90′ ಬಿಡಲು ಥಿಯೇಟರ್ ಗೆ ನೂಕು ನುಗ್ಗಲು: ಬಿರಾದರ್ ಗೆ ಥ್ಯಾಂಕ್ಸ್ ಎಂದ ಹೆಣೈಕ್ಳು
ಧನುಷ್ ಕೇವಲ ನಟನಷ್ಟೇ ಅಲ್ಲ. ಸಿಂಗರ್, ಗೀತರಚನೆಗಾರ, ನಿರ್ಮಾಪಕ ಕಡೆಗೆ ನಿರ್ದೇಶಕನೂ ಹೌದು. ಇಷ್ಟೊಂದು ಪ್ರತಿಭೆಯನ್ನು ಹೊಂದಿರೋ ನಟನ ಸಿನಿಮಾಗಳ ಸಕ್ಸಸ್ ರೇಟ್ ಕೂಡ ಉತ್ತಮವಾಗೇ ಇದೆ. ತಮಿಳು (Kollywood) ಜೊತೆ ಬಾಲಿವುಡ್ (Bollywood) ಮತ್ತು ಹಾಲಿವುಡ್ ಸಿನಿಮಾಗಳಲ್ಲೂ ತಮ್ಮ ಪ್ರತಿಭೆ ತೋರಿಸಿದ್ದಾರೆ.
ಧನುಷ್ ನಿರ್ದೇಶನದ D50 ಪೋಸ್ಟರ್ ಭಿನ್ನವಾಗಿ ಮೂಡಿಬಂದಿದೆ. ಧನುಷ್ ಅವರು ಕ್ಯಾಮೆರಾಗೆ ಬೆನ್ನು ಹಾಕಿ ನಿಂತಿದ್ದಾರೆ. ಶರ್ಟ್ಲೆಸ್ ಆಗಿ ಅವರು ಪೋಸ್ ನೀಡಿದ್ದು, ತಲೆ ಬೋಳಿಸಿಕೊಂಡಂತಿದೆ. ಪೋಸ್ಟರ್ನಲ್ಲಿ ಕೆಂಪು ಬಣ್ಣ ಹೈಲೈಟ್ ಆಗಿದೆ. ಹಾಗಾಗಿ ಇದು ಭರ್ಜರಿ ಆ್ಯಕ್ಷನ್ ಸಿನಿಮಾ ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ. ಸನ್ ಪಿಕ್ಚರ್ಸ್ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಧನುಷ್ ನಟನೆಯ ‘ಕ್ಯಾಪ್ಟನ್ ಮಿಲ್ಲರ್’ ಸಿನಿಮಾ ಶೂಟಿಂಗ್ ಮುಗಿದಿದೆ. ಚಿತ್ರದಲ್ಲಿ ಧನುಷ್ ಜೊತೆ ಕನ್ನಡದ ಹ್ಯಾಟ್ರಿಕ್ ಹೀರೋ ಶಿವಣ್ಣ ಕೂಡ ಸಾಥ್ ನೀಡಿದ್ದಾರೆ. ಈ ಬೆನ್ನಲ್ಲೇ ತಮ್ಮ 50ನೇ ಚಿತ್ರವನ್ನ ಧನುಷ್ ಅನೌನ್ಸ್ ಮಾಡಿದ್ದಾರೆ.
ಇತ್ತೀಚಿಗೆ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಕಾಣಿಸಿಕೊಂಡರು. ತಿಮ್ಮಪ್ಪನಿಗೆ ಮುಡಿ ಕೊಡುವ ಮೂಲಕ ಹರಕೆ ತೀರಿಸಿಕೊಂಡಿದ್ದಾರೆ. ಜುಲೈ 3ರಂದು ಬೆಳ್ಳಂ ಬೆಳಗ್ಗೆ ತಿರುಪತಿಗೆ ಆಗಮಿಸಿದ್ದ ಧನುಷ್, ಮುಡಿ ಕೊಟ್ಟು ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಧನುಷ್ ಮಾತ್ರವಲ್ಲ ಅವರ ಮಕ್ಕಳಾದ ಯಾತ್ರಾ ಮತ್ತು ಲಿಂಗ ಕೂಡ ಮುಡಿ ನೀಡಿದ್ದಾರೆ. ಸಾಮಾನ್ಯರಂತೆ ಸರದಿ ಸಾಲಿನಲ್ಲಿ ಮಕ್ಕಳೊಂದಿಗೆ ನಿಂತು ತಿಮ್ಮಪ್ಪನ ದರ್ಶನ ಮಾಡಿದ ಧನುಷ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಮಕ್ಕಳೊಂದಿಗೆ ಮುಡಿಕೊಟ್ಟು ಸಾಮಾನ್ಯ ಭಕ್ತರಂತೆ ನಡೆದುಕೊಂಡ ರೀತಿಗೆ ಪ್ರಶಂಸೆ ವ್ಯಕ್ತವಾಗುತ್ತಿತ್ತು.