ಕಾಲಿವುಡ್ (Kollywood) ನಟ ಧನುಷ್ (Actor Dhanush) ತಮ್ಮ ಪೋಷಕರಿಗೆ ಐಷಾರಾಮಿ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
ಸೌತ್ ನಟ ಧನುಷ್ ನಟನೆಯ `ವಾತಿ’ ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಫೆ.17ಕ್ಕೆ ತೆರೆಗೆ ಬಂದ ಈ ಚಿತ್ರ ಇದೀಗ 20 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಬೆನ್ನಲ್ಲೇ ಹೊಸ ಮನೆಯ ಗೃಹ ಪ್ರವೇಶ (House Warming) ಸೋಮವಾರ (ಫೆ.20) ಅದ್ದೂರಿಯಾಗಿ ನೆರವೇರಿತು. ಚೆನ್ನೈನ ಪೋಯಿಸ್ ಗಾರ್ಡನ್‌ನಲ್ಲಿ ಹೊಸ ಮನೆ ಕಟ್ಟಿಸಿದ್ದು, ಇದೀಗ ಗೃಹ ಪ್ರವೇಶ ಸಂಭ್ರಮ ನೆರವೇರಿದೆ. ಧನುಷ್ ಹೊಸ ಮನೆ ಬರೋಬ್ಬರಿ 150 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಈ ಹೊಸ ಮನೆಯನ್ನು ತನ್ನ ಪೋಷಕರಿಗೆ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.
ಧನುಷ್ ಹೊಸ ಮನೆಯ ಗೃಹ ಪ್ರವೇಶದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೃಹ ಪ್ರವೇಶ ಸಂಭ್ರಮದಲ್ಲಿ ಧನುಷ್ ನೀಲಿ ಬಣ್ಣದ ಕುರ್ತಾ ಮತ್ತು ಬಿಳಿ ಪೈಜಾಮ ಧರಿಸಿದ್ದರು. ಈ ಸಂಭ್ರಮದಲ್ಲಿ ಧನುಷ್ ಮಕ್ಕಳು ಸಹ ಭಾಗಿಯಾಗಿದ್ದಾರೆ. ಧನುಷ್ ಹೊಸ ಮನೆಯ ಸಂಭ್ರಮಕ್ಕೆ ಸ್ನೇಹಿತರು, ಸಿನಿಮಾರಂಗದ ಗಣ್ಯರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು. ಇದನ್ನೂ ಓದಿ: ಸಂಬಂಧಿಕರ ಮದುವೆಯಲ್ಲಿ ಮಿಂಚಿದ ನಟಿ ರಾಧಿಕಾ ಪಂಡಿತ್
மனிதன் என்பவன்
தெய்வம் ஆகலாம்..
நன்றி சார்..????????????
2023’s Best Moment ❤️ Thank you @dhanushkraja #SIR !! #Mahashivratri special time with #Dhanush sir❤️???? ???? #vaathi pic.twitter.com/Um51eFa3iw
— B.RAJA (@B_RajaAIDFC) February 20, 2023
ಚೆನ್ನೈನ ಪೋಯಿಸ್ ಗಾರ್ಡನ್‌ನಲ್ಲಿ ಕಾಲಿವುಡ್‌ನ ಅನೇಕ ಸಿನಿಮಾ ಗಣ್ಯರ ಮನೆಗಳಿವೆ. ವಿಶೇಷ ಎಂದರೆ ರಜನಿಕಾಂತ್ (Rajanikanth) ಮನೆ ಇರುವುದು ಸಹ ಇದೇ ಏರಿಯಾದಲ್ಲಿ. ಕಳೆದ ಎರಡು ವರ್ಷಗಳ ಹಿಂದೆ ಧನುಷ್ ಹೊಸ ಮನೆಗೆ ಭೂಮಿ ಪೂಜೆ ಮಾಡಲಾಗಿತ್ತು. ಭೂಮಿ ಪೂಜೆಯಲ್ಲಿ ರಜನಿಕಾಂತ್ ದಂಪತಿ ಮತ್ತು ಮಾಜಿ ಪತ್ನಿ ಐಶ್ವರ್ಯಾ ಸಮ್ಮುಖದಲ್ಲಿ ನೆರವೇರಿತ್ತು. ಆದರೆ ಗೃಹ ಪ್ರವೇಶದ ವೇಳೆಗೆ ಧನುಷ್ (Dhanush) ಮತ್ತು ಐಶ್ವರ್ಯಾ (Aishwarya) ದಂಪತಿ ದೂರ ದೂರ ಆಗಿದ್ದಾರೆ. ಇಬ್ಬರೂ ಡಿವೋರ್ಸ್ ಪಡೆದುಕೊಂಡಿದ್ದಾರೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k