‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ಇನ್ನೇನು ಒಂದು ವಾರದಲ್ಲಿ ಅಂತ್ಯವಾಗಲಿದೆ. ಬಿಗ್ ಬಾಸ್ ಟ್ರೋಫಿಗಾಗಿ ಸ್ಪರ್ಧಿಗಳ ನಡುವೆ ಗುದ್ದಾಟ ನಡೆಯುತ್ತಿದೆ. ಹೀಗಿರುವಾಗ ಸದ್ಯ ಎಲಿಮಿನೇಟ್ ಆಗಿ ಬಂದಿರುವ ಸ್ಪರ್ಧಿ ಧನರಾಜ್ (Dhanraj Achar) ಅವರು ಗೆಳೆಯ ಹನುಮಂತನ ಮದುವೆ (Wedding) ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ಇದು ನನ್ನ ಕೊನೆಯ ನಿರೂಪಣೆ, ಬಿಗ್ ಬಾಸ್ ಜರ್ನಿ ಜೀವನದಲ್ಲಿ ಮರೆಯಲಾಗದ ನೆನಪು: ಸುದೀಪ್ ಭಾವುಕ ಪೋಸ್ಟ್
Advertisement
ಸಣ್ಣ ವಯಸ್ಸು, ಎಲ್ಲವೂ ಈಸಿಯಾಗಿ ಆಗುತ್ತದೆ ಅಂದುಕೊಂಡಿದ್ದಾರೆ. ಕಪ್ ಗೆದ್ದು ಅತ್ತೆಯ ಹತ್ತಿರ ಹೋದರೆ ಮಗಳನ್ನು ಕೊಡುವವರು ಯಾರು ನನಗೆ ಗೊತ್ತಿಲ್ಲ. ಜನರ ಮನಸ್ಸನ್ನು ಹನುಮಂತ (Hanumantha) ಗೆದ್ದಿದ್ದಾರೆ. ಜೊತೆಗೆ ಹುಡುಗಿಯ ಅಪ್ಪ, ಅಮ್ಮನ ಮನಸ್ಸು ಗೆಲ್ಲಲಿ ನಮ್ಮಷ್ಟು ಖುಷಿಪಡುವವರು ಯಾರಿಲ್ಲ. ಈಗಾಗಲೇ ಹುಡುಗಿಯ ಮನಸ್ಸು ಗೆದ್ದಿದ್ದಾರೆ ಅನ್ನೋದು ಅವರ ಮಾತಲ್ಲಿ ಗೊತ್ತಾಗುತ್ತಿದೆ. ಆ ಜೀವ ಹುಡುಗಿಗಾಗಿ ಕಾಯುತ್ತಿದೆ. ಯಾವತ್ತು ನೋಡಿದರೂ ಮದುವೆ ಮದುವೆ ಅಂತ ಹೇಳುತ್ತಿರುತ್ತಾರೆ ದೋಸ್ತ್. ಆದರೆ ಹುಡುಗಿ ವಿಚಾರದ ಬಗ್ಗೆ ಹೇಳೋಕೆ ತುಂಬಾ ಭಯಪಡುತ್ತಾನೆ ಎಂದಿದ್ದಾರೆ ಧನರಾಜ್.
Advertisement
Advertisement
ಅವರು ಯಾವ ರೀತಿ ಹನುಮಂತನನ್ನು ಹುಡುಗಿಯ ಮನೆಯವರು ಒಪ್ಪಿಕೊಳ್ತಾರೆ ಗೊತ್ತಿಲ್ಲ. ಒಂದು ವೇಳೆ, ಹನುಮಂತ ಬಿಗ್ ಬಾಸ್ ಗೆದ್ದರೆ ಒಂದಿಷ್ಟು ಪ್ರೇಮಿಗಳಿಗೆ ಇದು ಪಾಠವಾಗಬಹುದು ಅನಿಸುತ್ತದೆ. ಅವರಂತೆ ಬಿಗ್ ಬಾಸ್‌ಗೆ ಹೋಗಿ ಕಪ್ ಗೆದ್ದು ಅಥವಾ ಜೀವನದಲ್ಲಿ ಏನಾದರೂ ಸಾಧನೆ ಮಾಡಿ ಹುಡುಗಿಯನ್ನು ಕೇಳೋಕೆ ಹೋಗೋಣ ಅನ್ನುವಂತೆ ಒಂದು ಪಾಠವಾಗಬಹುದು ಎಂದು ಧನರಾಜ್ ಅವರು ಹನುಮಂತ ಬಗ್ಗೆ ಮಾತನಾಡಿದ್ದಾರೆ.
Advertisement
ನನ್ನ ದೋಸ್ತ್ ಹನುಮಂತ ನಿಷ್ಕಲ್ಮಷ ಮನಸಿನವನು. ಒಳ್ಳೆಯ ವ್ಯಕ್ತಿ, ಅವನ ಮನಸ್ಸಿನಲ್ಲಿ ಏನಿದೆ ಅದನ್ನು ನೇರವಾಗಿ ಹೇಳ್ತಾನೆ. ಒಬ್ಬರು ಇಷ್ಟ ಆಗಿದ್ದಾರೆ ಅಂದರೆ ಆ ಮನಸ್ಸು ಕೂಡ ಅಷ್ಟೇ ಒಳ್ಳೆಯದಿರಬಹುದು. ಆ ಮನಸ್ಸುಗಳು ಎರಡು ಇಷ್ಟಪಟ್ಟಿವೆ. ನೀವು ಮನಸ್ಸು ಮಾಡಿದ್ರೆ, ಆ ಮನಸ್ಸುಗಳನ್ನು ಒಂದು ಮಾಡಿದ್ರೆ ನೋಡೋ ಕರ್ನಾಟಕದ ಜನತೆ ಕೂಡ ಖುಷಿಪಡುತ್ತಾರೆ ಎಂದು ಹನುಮಂತನ ಮನದರಸಿಯ ಪೋಷಕರಿಗೆ ಧನರಾಜ್ ಮನವಿ ಮಾಡಿದ್ದಾರೆ.
ಇನ್ನೂ ಬಿಗ್ ಬಾಸ್ ಮನೆಯಲ್ಲಿ ಇಷ್ಟಪಟ್ಟ ಹುಡುಗಿ ಬಗ್ಗೆ ಹನುಮಂತ ಮಾತನಾಡಿದ್ದಾರೆ. ಆದರೆ ಅವರು ಯಾರು? ಎಂಬುದನ್ನು ಎಲ್ಲೂ ರಿವೀಲ್ ಮಾಡಿಲ್ಲ. ಸುದೀಪ್ ಕೂಡ ವಾರಾಂತ್ಯದ ಎಪಿಸೋಡ್‌ನಲ್ಲಿ ಏನ್ರಿ ಕಪ್ ಗೆದ್ದರೆ ಮಗಳನ್ನು ಕೊಟ್ಟು ಅತ್ತೆ ಮದುವೆ ಮಾಡುತ್ತಾರಾ? ಎಂದು ಕಾಲೆಳೆದಿದ್ದಾರೆ. ಹನುಮಂತ ಆಗ ನಾಚಿ ನೀರಾಗಿದ್ದಾರೆ.