ಸದಾ ಕಿತ್ತಾಟದಿಂದಲೇ ಹೈಲೆಟ್ ಆಗುತ್ತಿದ್ದ ಬಿಗ್ ಬಾಸ್ ಮನೆ (Bigg Boss Kannada 11) ಇದೀಗ ಕಳೆದ ಎರಡು ದಿನಗಳಿಂದ ಭಾವನಾತ್ಮಕ ಘಳಿಗೆಗಳಿಗೆ ಸಾಕ್ಷಿ ಆಗಿದೆ. ಸ್ಪರ್ಧಿಗಳ ಕುಟುಂಬಸ್ಥರು ಒಬ್ಬೊಬ್ಬರೇ ಎಂಟ್ರಿ ಆಗ್ತಿದ್ದು, ಸ್ಪೆಷಲ್ ಎಪಿಸೋಡ್‌ನಿಂದ ಪ್ರೇಕ್ಷಕರ ಮನ ಮುಟ್ಟುತ್ತಿದೆ. ಜೊತೆಗೆ ಸ್ಪರ್ಧಿಗಳಿಗೂ ಎನರ್ಜಿ ಸಿಗುತ್ತಿದೆ. ಇದನ್ನೂ ಓದಿ:ರೊಮ್ಯಾಂಟಿಕ್ ಪ್ರಿ ವೆಡ್ಡಿಂಗ್ ವಿಡಿಯೋ ಹಂಚಿಕೊಂಡ ‘ಸೀತಾರಾಮ’ ನಟಿ
ಇದೀಗ ಧನರಾಜ್ ಆಚಾರ್ (Dhanraj Achar) ಅವರ ಕೂಡು ಕುಟುಂಬ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದೆ. ಇಡೀ ಕುಟುಂಬವನ್ನು ನೋಡಿ ಧನರಾಜ್ ಫುಲ್ ಹ್ಯಾಪಿ ಆಗಿದ್ದಾರೆ. ಮನೆಗೆ ಎಂಟ್ರಿ ಆಗ್ತಿದ್ದಂತೆಯೇ ಕುಟುಂಬದ ಸದಸ್ಯರೆಲ್ಲರೂ ಧನರಾಜ್ ಜೊತೆ ಹುಲಿ ಕುಣಿತದ ಸ್ಟೆಪ್ಸ್ ಹಾಕಿ ಖುಷಿ ಪಟ್ಟಿದ್ದಾರೆ. ಮನೆ ಮಂದಿಯೆಲ್ಲಾ ಬಿಗ್ ಬಾಸ್‌ಗೆ ಬಂದಿರೋದು ಧನರಾಜ್ ಸಂತಸ ದುಪ್ಪಟ್ಟು ಮಾಡಿದೆ.
ಧನರಾಜ್‌ಗೆ ಮತ್ತೊಂದು ಸರ್ಪ್ರೈಸ್ ಅವರ ಮುದ್ದಿನ ಮಗಳು ಕೂಡ ಬಿಗ್ ಬಾಸ್‌ಗೆ ಬಂದಿದ್ದಾಳೆ. ಮೊದಲಿಗೆ ತೊಟ್ಟಿಲಲ್ಲಿ ಹಾಯಾಗಿ ಮಲಗಿರುವ ಮಗುವನ್ನು ಫೋಟೋವನ್ನು ಸ್ಕ್ರೀನ್ ಮೇಲೆ ತೋರಿಸಲಾಗಿತ್ತು. ಪ್ಲೀಸ್ ಮಗುವನ್ನು ಎತ್ತಿಕೊಳ್ಳಲು ಬಿಡಿ ಎಂದು ಬಿಗ್ ಬಾಸ್‌ಗೆ ಧನರಾಜ್ ಮನವಿ ಮಾಡಿಕೊಂಡಿದ್ದಾರೆ. ಅವರು ಭಾವುಕರಾಗಿದ್ದನ್ನು ನೋಡಿದ ಬಿಗ್ ಬಾಸ್, ಕೊನೆಗೆ ಮಗುವಿನ ಜೊತೆ ಕಾಲ ಕಳೆಯಲು ಅವಕಾಶ ಮಾಡಿ ಕೊಟ್ಟಿದ್ದಾರೆ. ಓಡಿ ಹೋಗಿ ಮಗುವನ್ನು ಎತ್ತಿಕೊಂಡ ಭಾವುಕರಾಗಿ ಎತ್ತಿ ಮುದ್ದಾಡಿದ್ದಾರೆ. ಮಗುವಿನ ಪಕ್ಕದಲ್ಲಿ ಮಲಗಿ ಕೆಲ ಸಮಯ ಕಳೆದಿದ್ದಾರೆ.
ಬಳಿಕ ಪತ್ನಿ ಪ್ರಜ್ಞಾ ಧನರಾಜ್‌ಗೆ ಮುದ್ದಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ನಾನು ಇಲ್ಲದೇ ನಿಮಗೆ ಭಾರೀ ಖುಷಿಯಾಗಿದೆ ಎಂದು ಪ್ರೀತಿಯಿಂದ ಹೊಡೆಯಲು ಶುರು ಮಾಡಿದ್ದಾರೆ. ಎಲ್ಲದಕ್ಕೂ ಐಶ್ವರ್ಯಾ ಹೆಸರು ತೆಗೆದುಕೊಳ್ತಿದ್ದೀರಿ. ನೀವು ಐಶ್ವರ್ಯಾಗೆ ಲೈನ್ ಹೊಡೆಯುತ್ತಿದ್ದೀರಾ ಅಂತಾ ಡೌಟ್ ಎನ್ನುತ್ತಾ ಕೆನ್ನೆಗೆ ಹೊಡೆದಿದ್ದಾರೆ. ಪತಿಯ ಕಾಲೆಳೆದಿದ್ದಾರೆ. ಇವರಿಬ್ಬರ ಕ್ಯೂಟ್ ಕಿತ್ತಾಟವನ್ನು ನೋಡಿದ ಇತರೆ ಸ್ಪರ್ಧಿಗಳು ನಕ್ಕಿದ್ದಾರೆ.