ಮುಂಬೈ: ಟೀಂ ಇಂಡಿಯಾದ ಸ್ಪಿನ್ನರ್ ಯಜುವೇಂದ್ರ ಚಹಲ್ ಮತ್ತು ನಟಿ ಧನಶ್ರೀ ನಡುವಿನ ದಾಂಪತ್ಯ ಜೀವನದಲ್ಲಿ ಒಡಕು ಪ್ರಕರಣಕ್ಕೆ ಅಂತ್ಯ ಹಾಡಲು ಧನಶ್ರೀ ಮುಂದಾಗಿದ್ದಾರೆ.
ಕೆಲದಿನಗಳಿಂದ ಚಹಲ್ ಮತ್ತು ಧನಶ್ರೀ ನಡುವೆ ಒಡಕು ಮೂಡಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರು ಹಾಕಿದ್ದ ಪೋಸ್ಟ್‌ಗಳು ಅನುಮಾನ ಮೂಡಿಸಿತ್ತು. ಇದನ್ನೂ ಓದಿ: ಪಟ್ಟವಿಲ್ಲದಿದ್ದರೂ ನಾನು ನಾಯಕನೇ: ಡೇವಿಡ್ ವಾರ್ನರ್
ಇದೀಗ ಈ ಬಗ್ಗೆ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿರುವ ಧನಶ್ರೀ, ಕಳೆದ 14 ದಿನಗಳಿಂದ ತುಂಬಾ ಕಷ್ಟದ ದಿನವನ್ನು ಅನುಭವಿಸುತ್ತಿದ್ದೆ. ಡ್ಯಾನ್ಸ್ ಮಾಡುವಾಗ ಬಿದ್ದು ಕಾಲು ಮುರಿತಕ್ಕೊಳಗಾಗಿತ್ತು. ಆ ಬಳಿಕ ಚಿಕಿತ್ಸೆ ಪಡೆದು ಇದೀಗ ಚೇತರಿಕೆ ಕಾಣುತ್ತಿದೆ. ಈ ಕಷ್ಟದ ಸಮಯದಲ್ಲಿ ನನ್ನೊಂದಿಗೆ ನನ್ನ ಕುಟುಂಬದವರು, ಮನೆಯವರು ಮತ್ತು ನನ್ನ ಗಂಡ ಧೈರ್ಯ ತುಂಬಿದ್ದಾರೆ. ಇದೀಗ ಶಸ್ತ್ರಚಿಕಿತ್ಸೆ ಬಳಿಕ ಮತ್ತೆ ನೃತ್ಯದತ್ತ ಗಮನ ಹರಿಸಲು ಮುಂದಾಗುತ್ತೇನೆ ಎಂದು ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್‌ಗೆ ಚಹಲ್ ಕಾಮೆಂಟ್ ಮಾಡಿದ್ದು, ನನ್ನ ಮಹಿಳೆ ಎಂದು ಅಧಿಕೃತ ಖಾತೆಯಿಂದ ಕಾಮೆಂಟ್ ಹಾಕಲಾಗಿದೆ. ಈ ಮೂಲಕ ಕೆಲದಿನಗಳಿಂದ ಹರಿದಾಡುತ್ತಿದ್ದ ದಾಂಪತ್ಯ ಜೀವನದಲ್ಲಿ ಬಿರುಕು ಸುದ್ದಿಗೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಧನಶ್ರೀ ಮಾಡಿರುವ ಪೋಸ್ಟ್‌ಗೆ ಕಾಮೆಂಟ್ ಮಾಡುವ ಮೂಲಕ ಚಹಲ್ ಕೂಡ ಈ ರೂಮರ್ಸ್‍ಗಳು ಸುಳ್ಳು ಎಂಬುದನ್ನು ನಿರೂಪಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನದಲ್ಲಿ ಬಿರುಕು – ಚಹಲ್‍ರನ್ನು ಕೈಬಿಟ್ರಾ ಧನಶ್ರೀ?
View this post on Instagram
ಚಹಲ್ ಕೆಲದಿನಗಳ ಹಿಂದೆ ಹೊಸ ಜೀವನ ಆರಂಭ ಎಂದು ಪೋಸ್ಟ್ ಹಾಕಿಕೊಂಡಿದ್ದರು. ಅದೇ ಸಮಯಕ್ಕೆ ಧನಶ್ರೀ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿದ್ದ ಸರ್ ನೇಮ್ ಚಹಲ್ ಪದವನ್ನು ಕಿತ್ತುಹಾಕಿ ಧನಶ್ರೀ ವರ್ಮಾ ಎಂದು ಬದಲಾವಣೆ ಮಾಡಿಕೊಂಡಿದ್ದರು. ಇದನ್ನು ಗಮನಿಸಿದ ಅಭಿಮಾನಿಗಳು ಇವರಿಬ್ಬರ ದಾಂಪತ್ಯ ಜೀವನ ಮುರಿದುಬಿದ್ದಿದೆ ಎಂಬ ವದಂತಿ ಹರಿದಾಡಿತ್ತು.