ಮಂಡ್ಯ: ಹೈದರಾಬಾದ್‍ಗೆ ಹೋಗಿ ಅಲ್ಲಿಂದ ಬರುವಷ್ಟರಲ್ಲಿ ನಾನು ಲೋಕಸಭಾ ಚುನಾವಣೆಗೆ (Lok Sabha Election 2024) ಸ್ಪರ್ಧಿಸುವ ಉಹಾಪೋಹ ಎದ್ದಿದೆ. ಇದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ನಟ ಡಾಲಿ ಧನಂಜಯ್ (Daali Dhananjaya) ಹೇಳಿದ್ದಾರೆ. ಈ ಮೂಲಕ ಮೈಸೂರು (Mysuru) ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ವಿಚಾರದ ವದಂತಿಗೆ ಬ್ರೇಕ್ ಹಾಕಿದ್ದಾರೆ.
ಶ್ರೀರಂಗಪಟ್ಟಣದ ಕೆ. ಶೆಟ್ಟಿಹಳ್ಳಿಯ ನಿರ್ದಿಗಂತ ರಂಗ ಶಾಲೆಯಲ್ಲಿ `ಫೋಟೋ’ ಸಿನೆಮಾ ಟ್ರೇಲರ್ (Photo Movie Trailer) ಬಿಡುಗಡೆ ಲಾಂಚ್ ಮಾಡಿ ಮಾತನಾಡಿದ ಅವರು, ಈಗ ನಾನು ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಸಿನಿಮಾದಲ್ಲಿ ಜನರಿಂದ ಸಿಕ್ಕಿರುವ ಪ್ರೀತಿ ದೊಡ್ಡದು. ಯಾವುದೇ ಕ್ಷೇತ್ರಕ್ಕೆ ಹೋದ್ರೂ ಅಲ್ಲಿ ಅದ್ಭುತವಾಗಿ ಕೆಲಸ ಮಾಡಬೇಕು. ನಾನು ಸಿನಿಮಾ ಮಾಡ್ತಿನಿ. ತುಂಬಾ ಕನಸು ಕಟ್ಟಿಕೊಂಡು ಈ ಕ್ಷೇತ್ರಕ್ಕೆ ಬಂದಿದ್ದೀನಿ. ಇಲ್ಲಿದ್ದುಕೊಂಡೆ ಕೆಲಸ ಮಾಡಬಹುದು. ಚುನಾವಣೆ ಸ್ಪರ್ಧೆ ವಿಚಾರವಾಗಿ ಯಾವುದೇ ಚರ್ಚೆ ನಡೆದಿಲ್ಲ. ಮಾಧ್ಯಮದವರೇ ಟಿಕೆಟ್ ಕೊಡಿಸಿ ಚುನಾವಣೆಗೂ ನಿಲ್ಲಿಸಿಬಿಟ್ಟಿದ್ದೀರಿ ಎಂದಿದ್ದಾರೆ. ಇದನ್ನೂ ಓದಿ: ‘ಬಡೇ ಮಿಯಾನ್ ಚೋಟೆ ಮಿಯಾನ್’ ಟೈಟಲ್ ಟ್ರ‍್ಯಾಕ್ ಔಟ್
ಲಿಡ್ಕರ್ ಬ್ರಾಂಡ್‍ಗೆ ರಾಯಭಾರಿಯಾಗಿದ್ದು ನನಗೆ ಖುಷಿ ಇದೆ. ಅದು ಹಲವು ಬಡ ಜನರ ಬದುಕಿಗೆ ಸಂಬಂಧಿಸಿದೆ. ಈ ಹಿಂದೆ ರಾಜಕೀಯ ಚರ್ಚೆಯಾಗಲಿ ಹಾಗೂ ಉದ್ದೇಶವಾಗಲಿ ಇಲ್ಲ. ನಾನು ನನ್ನ ಸಿನಿಮಾ ಕ್ಷೇತ್ರಕ್ಕೆ ಮಾತ್ರ ಸಿಮೀತವಾಗಿರುತ್ತೇನೆ. ರಾಜಕಾರಣ ಬೇರೆ, ನಾಯಕ ಆಗಿರೋದು ಬೇರೆ. ಕಳೆದ ಚುನಾವಣೆ ಸಮಯದಲ್ಲೇ ನಾನು ಪ್ರಚಾರಕ್ಕೆ ಹೋಗಿಲ್ಲ. ಎಲ್ಲಾ ಪಕ್ಷಗಳಲ್ಲೂ ನನಗೆ ಸ್ನೇಹಿತರಿದ್ದಾರೆ. ಈ ಚುನಾವಣೆಯಲ್ಲೂ ಪ್ರಚಾರಕ್ಕೆ ಹೋಗುವುದರ ಬಗ್ಗೆ ಯೋಚನೆ ಮಾಡಿಲ್ಲ. ಇಲ್ಲಿ ನಾವು ಏನೇ ಮಾಡಿದ್ರೂ ಏನಾದ್ರೂ ಒಂದು ಹೇಳ್ತಾನೆ ಇರುತ್ತಾರೆ. ಸಮಾಜದಲ್ಲಿನ ಕೆಳ ವರ್ಗದ ಜನರನ್ನ ಮೇಲೆತ್ತುವವರೇ ಒಳ್ಳೆಯ ನಾಯಕ ಎಂದಿದ್ದಾರೆ.
ನಟ ಡಾಲಿ ಧನಂಜಯ ಹಾಗೂ ನಿರ್ದೇಶಕ ಲೂಸಿಯಾ ಪವನ್, ಯುವ ನಿರ್ದೇಶಕ ಉತ್ಸವ್ ಗೋನಾವರ ನಿರ್ದೇಶನದ `ಫೋಟೋ’ ಸಿನಿಮಾ ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಹಾಗೂ ಮಸಾರಿ ಟಾಕೀಸ್ ನಿರ್ಮಾಣದ ಚಿತ್ರ. ಕೋವಿಡ್ ಲಾಕ್‍ಡೌನ್ ವೇಳೆಯ ಜನರ ಕಷ್ಟದ ಬದುಕನ್ನು ಆಧಾರಿತ ಕತೆಯಾಗಿದೆ. ಮಾ.15 ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಇದನ್ನೂ ಓದಿ: ನಿರ್ಮಾಪಕ ಜಾಕಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಕುಲ್