ಸ್ಯಾಂಡಲ್‌ವುಡ್‌ನ (Sandalwood) ಬಹುನಿರೀಕ್ಷಿತ ಸಿನಿಮಾ `ಹೊಯ್ಸಳ’ (Hoysala) ಸಿನಿಮಾದ ಮೂಲಕ ನಟ ಧನಂಜಯ ಅಬ್ಬರಿಸಲು ರೆಡಿಯಾಗಿದ್ದಾರೆ. ಹೊಸ ಸಿನಿಮಾ ಅಪ್‌ಡೇಟ್ ಹೇಳುವ ಮೂಲಕ ಡಾಲಿ (Dali) ಅಭಿಮಾನಿಗಳಿಗೆ ಈಗ ಚಿತ್ರತಂಡ ಸಿಹಿಸುದ್ದಿ ಕೊಡಲು ಸಜ್ಜಾಗಿದ್ದಾರೆ.
View this post on Instagram
ಬಡವ ರಾಸ್ಕಲ್, ಹೆಡ್‌ಬುಷ್, ಪುಷ್ಪ ಸಿನಿಮಾಗಳ ಮೂಲಕ ಸದ್ದು ಮಾಡಿದ್ದ ನಟ ರಾಕ್ಷಸ ಡಾಲಿ (Dali) ಈಗ ಹೊಯ್ಸಳನಾಗಿ ಅಬ್ಬರಿಸಲು ಬರುತ್ತಿದ್ದಾರೆ. ಖಡಕ್ ಪೊಲೀಸ್ ಆಫೀಸರ್ ಆಗಿ ಡಾಲಿ ಬರುತ್ತಿದ್ದಾರೆ. ಇದನ್ನೂ ಓದಿ: ಆದಿಲ್ ಬೇರೆ ಹುಡುಗಿ ಜೊತೆ ಸಂಬಂಧ ಇಟ್ಟುಕೊಂಡಿದ್ದಾನೆ : ಕಣ್ಣೀರಿಟ್ಟ ನಟಿ ರಾಖಿ ಸಾವಂತ್
View this post on Instagram
ಇದೀಗ ಕೆಆರ್‌ಜಿ ಸಂಸ್ಥೆ (Krg)ನಿರ್ಮಾಣದ `ಹೊಯ್ಸಳ’ ಚಿತ್ರದ ನಿರ್ಮಾಪಕ ಕಾರ್ತಿಕ್ ಗೌಡ (Karthik Gowda) ಹೊಸ ಅಪ್‌ಡೇಟ್‌ವೊಂದನ್ನ ನೀಡಿದ್ದಾರೆ. ಚಿತ್ರದ ವಿಶೇಷ ತುಣುಕನ್ನ ಶೇರ್ ಮಾಡಿ, ಫೆ.5ರಂದು ಚಿತ್ರದ ಬಗ್ಗೆ ವಿಶೇಷ ವಿಚಾರವನ್ನ ರಿವೀಲ್ ಮಾಡುವುದಾಗಿ ತಿಳಿಸಿದ್ದಾರೆ. ಬೆಳಿಗ್ಗೆ 9:27ಕ್ಕೆ ಚಿತ್ರದ ಬಗ್ಗೆ ಮೇಜರ್ ಅಪ್‌ಡೇಟ್‌ವೊಂದು ಸಿಗಲಿದೆ.
Activating #Hoysala on Feb5th at 9:27AM#EeSalaHoysala @Dhananjayaka @KRG_Studios @vijaycinephilia @yogigraj @AJANEESHB @amrutha_iyengar pic.twitter.com/8zxN65iqVf
— Karthik Gowda (@Karthik1423) February 3, 2023
ಇನ್ನೂ `ಹೊಯ್ಸಳ’ ಚಿತ್ರ ನೈಜ ಘಟನೆಯನ್ನು ಆಧರಿಸಿ ಸಿನಿಮಾ ಮಾಡಲಾಗಿದೆ. ಖಡಕ್ ಪೊಲೀಸ್ ಅಧಿಕಾರಿಯ ಕಥೆಯನ್ನ ತೆರೆ ಮೇಲೆ ತೋರಿಸಲಾಗುತ್ತಿದೆ. ಸಿನಿಮಾವನ್ನು ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ಚಿತ್ರೀಕರಿಸಲಾಗಿದೆ.
ಇನ್ನೂ `ಬಡವ ರಾಸ್ಕಲ್’ ಚಿತ್ರದಲ್ಲಿ ಡಾಲಿ – ಅಮೃತಾ ಅಯ್ಯಂಗಾರ್ ಜೋಡಿ ಮೋಡಿ ಮಾಡಿತ್ತು. ಇದೀಗ ಈ ಸಿನಿಮಾದಲ್ಲೂ ಡಾಲಿಗೆ ನಾಯಕಿಯಾಗಿ ಅಮೃತಾ ನಟಿಸಿದ್ದಾರೆ. ಈ ವರ್ಷ ಮಾರ್ಚ್ 30ರಂದು ತೆರೆಗೆ ಅಪ್ಪಳಿಸಲಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k