Bengaluru CityCinemaKarnatakaLatestMain PostSandalwood

`ಉತ್ತರಾಕಾಂಡ’ ಚಿತ್ರದ ಮುಹೂರ್ತದಲ್ಲಿ ಮಿಂಚಿದ ಡಾಲಿ-ರಮ್ಯಾ ಜೋಡಿ

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ(Ramya) ಅಭಿಮಾನಿಗಳಿಗೆ ಇದು ನಿಜಕ್ಕೂ ಗುಡ್ ನ್ಯೂಸ್. `ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲಿ ರಮ್ಯಾ ನಟಿಸುತ್ತಿಲ್ಲ ಎಂಬ ಸುದ್ದಿ ಕೇಳಿ ನಿರಾಸೆಯಾಗಿದ್ದ ಫ್ಯಾನ್ಸ್‌ಗೆ ಇದೀಗ ರಮ್ಯಾ ಸೂಪರ್ ನ್ಯೂಸ್ ಕೊಟ್ಟಿದ್ದಾರೆ. `ಉತ್ತರಾಕಾಂಡ’ ಚಿತ್ರದ ಮೂಲಕ ಕಂಬ್ಯಾಕ್ ಆಗುತ್ತಿರುವ ರಮ್ಯಾ ಡಾಲಿ(Dhananjay) ಸಾಥ್ ನೀಡಿದ್ದಾರೆ. ಸದ್ಯ ಸಿನಿಮಾ ತಂಡದ ಮುಹೂರ್ತದ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

ನಟಿ ರಮ್ಯಾ ಬೆಳ್ಳಿಪರದೆಗೆ ಬರಲು ಗ್ರ್ಯಾಂಡ್ ಎಂಟ್ರಿ ಕೊಡ್ತಿದ್ದಾರೆ. ಕಂಬ್ಯಾಕ್‌ಗೆ ಗಟ್ಟಿ ಸ್ಟೋರಿಯನ್ನೇ ಆಯ್ಕೆ ಮಾಡಿಕೊಂಡು ಡಾಲಿಗೆ ನಾಯಕಿಯಾಗಿ ರಮ್ಯಾ ಬರುತ್ತಿದ್ದಾರೆ. ಕೆಲ ದಿನಗಳ ಹಿಂದೆ ರಮ್ಯಾ ಮತ್ತು ಡಾಲಿ ಜೊತೆಯಾಗುತ್ತಿದ್ದಾರೆ ಎಂಬ ಸುದ್ದಿ ಸಖತ್ ಸೌಂಡ್ ಮಾಡಿತ್ತು. ಇದೀಗ ಈ ಸುದ್ದಿ ನಿಜವಾಗಿದೆ. ʻಉತ್ತರಾಕಾಂಡʼ ಚಿತ್ರದಲ್ಲಿ ಡಾಲಿ ಮತ್ತು ರಮ್ಯಾ ಜೋಡಿಯಾಗಿ ನಟಿಸುತ್ತಿದ್ದು, ಭಾನುವಾರ ಚಿತ್ರದ ಮುಹೂರ್ತ ನೆರವೇರಿದೆ. ಈ ಕುರಿತ ಮಾಹಿತಿಯನ್ನ ಡಾಲಿ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದೆ.

`ರತ್ನನ್ ಪ್ರಪಂಚ’ ಚಿತ್ರತಂಡದೊಂದಿಗೆ ಮತ್ತೆ ಡಾಲಿ ಜೊತೆಯಾಗಿದ್ದು, ಈ ಚಿತ್ರದ ಭಿನ್ನ ಪ್ರಯತ್ನಕ್ಕೆ ರಮ್ಯಾ ಕೂಡ ಸಾಥ್ ನೀಡಿದ್ದಾರೆ. ಈ ಸಿನಿಮಾ ಮೂಹರ್ತ ಕಾರ್ಯಕ್ರಮದಲ್ಲಿ ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿ ಗಣ್ಯರು ಭಾಗಿಯಾಗಿದ್ದರು. ವಿಜಯ್ ಕಿರಗಂದೂರು ಅರ್ಪಿಸುವ ಈ ಸಿನಿಮಾವನ್ನು ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ ಅಡಿಯಲ್ಲಿ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ. ರಾಜ್ ನಿರ್ಮಿಸುತ್ತಿದ್ದಾರೆ. ಈ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸುತ್ತಿದ್ದು, ಇದು ಧನಂಜಯ್ ಹಾಗೂ ರೋಹಿತ್ ಕಾಂಬಿನೇಷನ್‌ನ ಎರಡನೇ ಸಿನಿಮಾ ಆಗಿದೆ. ಇದನ್ನೂ ಓದಿ:ಸೋನು ಬದಲು ದೊಡ್ಮನೆಗೆ ಚಕ್ರವರ್ತಿ ಚಂದ್ರಚೂಡ್ ವೈಲ್ಡ್ ಕಾರ್ಡ್ ಎಂಟ್ರಿ

ರಮ್ಯಾ ಮತ್ತು ಧನಂಜಯ್ ಮೊದಲ ಬಾರಿಗೆ ತೆರೆಯ ಮೇಲೆ ಜೋಡಿಯಾಗುತ್ತಿದ್ದಾರೆ. ಇವರಿಬ್ಬರ ಜೋಡಿ ತೆರೆಯ ಮೇಲೆ ಕಮಾಲ್ ಮಾಡೋದನ್ನ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button